ಕ್ಯಾಮೆರಾ ಖರೀದಿಸುತ್ತಿದ್ದೀರಾ? ಹಾಗಿದ್ದರೆ ಕೊಂಚ ಯೋಚಿಸಿ

By: Shwetha PS

ಡಿಎಸ್‌ಎಲ್ಆರ್‌ ಕ್ಯಾಮೆರಾಗಳ ಕುರಿತು ಹೇಳುವುದಾದರೆ ನಿಮ್ಮ ಆಯ್ಕೆಗೆ ಅನುಗುಣವಾಗಿ ಇವುಗಳನ್ನು ಆರಿಸಿಕೊಳ್ಳಬೇಕಾಗುತ್ತದೆ. ಹೆಚ್ಚಿನವರಿಗೆ ಕ್ಯಾಮೆರಾ ಖರೀದಿಸುವಾಗ ಎದುರಾಗುವ ಪ್ರಶ್ನೆಯೆಂದರೆ ಪೂರ್ಣ ಫ್ರೇಮ್ ಕ್ಯಾಮೆರಾ ಖರೀದಿಸಲೇ ಅಥವಾ ಕ್ರಾಪ್ ಫ್ರೇಮ್ ಕ್ಯಾಮೆರಾ ಖರೀದಿಸಲೇ ಎಂದಾಗಿದೆ.

ಕ್ಯಾಮೆರಾ ಖರೀದಿಸುತ್ತಿದ್ದೀರಾ? ಹಾಗಿದ್ದರೆ ಕೊಂಚ ಯೋಚಿಸಿ

ನೀವು ಪಾಯಿಂಟ್ ಅಥವಾ ಶೂಟ್ ಕ್ಯಾಮೆರಾವನ್ನು ಬಳಸುತ್ತಿದ್ದೀರಿ ಎಂದಾದಲ್ಲಿ ನೀವು ಅದರಲ್ಲಿ ನಿಪುಣತೆಯನ್ನು ಪಡೆದುಕೊಳ್ಳಬಹುದು. ಆದರೆ ಡಿಎಸ್‌ಎಲ್‌ಆರ್ ಕ್ಯಾಮೆರಾಗಳಲ್ಲಿ ನೀವು ಕೊಂಚ ಪಳಗಿರಬೇಕು.

ಇಂದಿನ ಲೇಖನದಲ್ಲಿ ನಾವು ನಿಮ್ಮ ಪ್ರಶ್ನೆಗಳಿಗೆ ಉತ್ತರವನ್ನು ನಮ್ಮ ಲೇಖನದ ಮೂಲಕ ನೀಡುತ್ತಿದ್ದು ಡಿಎಸ್‌ಎಲ್‌ಆರ್ ಕ್ಯಾಮೆರಾಗಳ ಕುರಿತಾದ ಸಂದೇಹಗಳನ್ನು ಪರಿಹರಿಸಿಕೊಳ್ಳಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಪೂರ್ಣ ಫ್ರೇಮ್

ಪೂರ್ಣ ಫ್ರೇಮ್

ಪೂರ್ಣ ಫ್ರೇಮ್ ಡಿಎಸ್ಎಲ್ಆರ್ ಕ್ಯಾಮೆರಾವು ಇಮೇಜ್ ಸೆನ್ಸಾರ್ ಅನ್ನು ಒಳಗೊಂಡಿದ್ದು ಇದು 35 ಎಮ್‌ಎಮ್ ಗಾತ್ರದಲ್ಲಿರುತ್ತದೆ ಇದು ಉತ್ತಮ ಚಿತ್ರ ಗುಣಮಟ್ಟವನ್ನು ಒಳಗೊಂಡಿರುತ್ತದೆ ಮತ್ತು ಹೆಚ್ಚಿನ ಐಎಸ್‌ಒ ಕಾರ್ಯಕ್ಷಮತೆಯಲ್ಲಿ ಅತ್ಯದ್ಭುತವಾಗಿದೆ. ಕ್ರಾಪ್ ಮತ್ತು ಫುಲ್‌ಗಿರುವ ವ್ಯತ್ಯಾಸವೆಂದರೆ ಅವುಗಳ ವೀಕ್ಷಣಾ ಕ್ಷೇತ್ರವಾಗಿದೆ.

ಪೂರ್ಣ ಫ್ರೇಮ್ ಅಥವಾ ಫುಲ್ ಫ್ರೇಮ್ ಕ್ಯಾಮೆರಾಗಳನ್ನು ವೃತ್ತಿಪರರು ಹೆಚ್ಚಾಗಿ ಬಳಸುತ್ತಾರೆ. ಇದರಲ್ಲಿ ಹೆಚ್ಚುವರಿ ಫೀಚರ್‌ಗಳಿದ್ದು ಫೋಟೋಗ್ರಫಿಗೆ ಅನುಕೂಲಕರವಾಗಿದೆ. ವೈಡ್ ಆಂಗಲ್‌ನಲ್ಲಿ ಕೂಡ ಈ ಬಗೆಯ ಫ್ರೇಮ್ ಚೆನ್ನಾಗಿ ಕೆಲಸ ಮಾಡುತ್ತದೆ.

 ಕ್ರಾಪ್ ಫ್ರೇಮ್

ಕ್ರಾಪ್ ಫ್ರೇಮ್

ಕ್ರಾಪ್ ಫ್ರೇಮ್‌ಗಳು ಸಣ್ಣ ಸೆನ್ಸಾರ್‌ಗಳನ್ನು ಪಡೆದುಕೊಂಡಿರುತ್ತವೆ ಮತ್ತು 35 ಎಮ್‌ಎಮ್‌ಗಿಂತ ಕಡಿಮೆ ಇರುತ್ತದೆ. ಕ್ರಾಪ್ ಸೆನ್ಸಾರ್‌ಗಳಲ್ಲಿ ಕ್ಯಾಮೆರಾ ಗಾತ್ರ ಕೂಡ ಚಿಕ್ಕದಾಗಿರುತ್ತದೆ. ಇದು ನ್ಯಾರೊ ಆಂಗಲ್ ವ್ಯೂವನ್ನು ಹೊಂದಿರುತ್ತದೆ ಮತ್ತು ವೈಡ್ ಆಂಗಲ್ ಇಫೆಕ್ಟ್ ಅನ್ನು ಕಡಿಮೆ ಮಾಡುವಾಗ ಟೆಲಿಫೋಟೋ ಇಫೆಕ್ಟ್ ಅನ್ನು ಹೆಚ್ಚಿಸುತ್ತದೆ.

4G LTE ಸ್ಮಾರ್ಟ್ ವಾಚ್: ಇನ್ನು ಮುಂದೆ ಸ್ಮಾರ್ಟ್‌ಫೋನ್ ಬೇಕಾಗಿಲ್ಲ

ಪಾನ್‌ಕಾರ್ಡ್ ಬಗ್ಗೆ ಈ 5 ವಿಷಯಗಳನ್ನು ನೀವು ತಿಳಿಯಲೇಬೇಕು!!
ನಿಮ್ಮ ಖರೀದಿಗೆ ಯಾವುದು ಸೂಕ್ತ?

ನಿಮ್ಮ ಖರೀದಿಗೆ ಯಾವುದು ಸೂಕ್ತ?

ನೀವು ನಿಸರ್ಗ, ಪ್ರಾಣಿಜೀವನ ಮತ್ತು ಕ್ರೀಡಾ ಆಸಕ್ತಿಯುಳ್ಳವರಾಗಿದ್ದಲ್ಲಿ ಕ್ರಾಪ್ ಫ್ರೇಮ್ ಕ್ಯಾಮೆರಾ ಒಳ್ಳೆಯದಾಗಿದೆ. ಫುಲ್ ಫ್ರೇಮ್ ಕ್ಯಾಮೆರಾಗಳು ಸಾಮಾನ್ಯ ಫೋಕಲ್ ಲೆಂತ್‌ಗಳಲ್ಲಿ ಲೆನ್ಸಸ್‌ಗಳನ್ನು ಬಳಸುವ ಸಾಮರ್ಥ್ಯವನ್ನು ಹೊಂದಿವೆ. ಮತ್ತು ಹೆಚ್ಚಿನ ಐಎಸ್‌ಓಗಳಲ್ಲಿ ಶೂಟ್ ಮಾಡುವ ಸಾಮರ್ಥ್ಯವನ್ನು ಹೊಂದಿದೆ.

ನೈಸರ್ಗಿಕ ಮತ್ತು ಕಡಿಮೆ ಬೆಳಕಿನಲ್ಲಿ ಲ್ಯಾಂಡ್‌ಸ್ಕೇಪ್‌ಗಳು ಮತ್ತು ಆರ್ಕಿಟೆಕ್ಚರಲ್ ಫೋಟೋಗ್ರಫಿಯನ್ನು ಶೂಟ್ ಮಾಡುತ್ತಿದ್ದೀರಿ ಎಂದಾದಲ್ಲಿ ನಿಮಗೆ ಫುಲ್ ಫ್ರೇಮ್ ಉತ್ತಮವಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
Among many confusions, one such questions are whether to select a Full Frame camera or Crop Frame camera?
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot