ಏನಿದು ಡೆಪ್ತ್ ಆಫ್ ಫೀಲ್ಡ್? ಒಂದು ಟಿಪ್ಪಣಿ

"ಫೋಟೋ/ವೀಡಿಯೋ ಸೆರೆಹಿಡಿಯುವಾಗ ನೀವು ಫೋಕಸ್ ಮಾಡುತ್ತಿರುವ ವಸ್ತುವಿನ ಸುತ್ತ ಫೋಕಸ್ ನಲ್ಲಿರುವಂಥ ಪ್ರದೇಶ/ಜಾಗವೇ ಡೆಪ್ತ್ ಆಫ್ ಫೀಲ್ಡ್

By Tejaswini P G
|

ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್ಫೋನ್ಗಳು ಉತ್ತಮ ಕ್ಯಾಮೆರಾ ಫೀಚರ್ಗಳೊಂದಿಗೆ ಬರುತ್ತಿದ್ದು ಫೋಟೋಗ್ರಾಫಿ ಪ್ರಿಯರ ಸಂಖ್ಯೆ ಹೆಚ್ಚುತ್ತಿದೆ. ಹೀಗಿರುವಾಗ ಫೋಟೋಗ್ರಾಫಿಯ ಕೆಲವು ಮುಖ್ಯ ಅಂಶಗಳ ಕುರಿತಾಗಿ ಹೆಚ್ಚಿನ ತಿಳುವಳಿಕೆ ಆವಶ್ಯಕ. ಡೆಪ್ತ್ ಆಫ್ ಫೀಲ್ಡ್ ಕೂಡ ಅಂತಹ ಒಂದು ಅಂಶ.

ಏನಿದು ಡೆಪ್ತ್ ಆಫ್ ಫೀಲ್ಡ್? ಒಂದು ಟಿಪ್ಪಣಿ

ಈಗಿನ ಸ್ಮಾರ್ಟ್ಫೋನ್ಗಳು ಡ್ಯುಯಲ್ ಕ್ಯಾಮೆರಾ ಮಾಡ್ಯೂಲ್ಗಳನ್ನು ಹೊಂದಿರುವ ಕಾರಣ ಅದರ ಡೆಪ್ತ್ ಆಫ್ ಫೀಲ್ಡ್ ಫೀಚರ್ನಲ್ಲಿ ಭಾರೀ ಸುಧಾರಣೆಯಾಗಿದೆ. ಡೆಪ್ತ್ ಆಫ್ ಫೀಲ್ಡ್ ಫೋಟೋಗ್ರಾಫಿಯ ಒಂದು ಹಳೆಯ ತಂತ್ರವೇ ಆಗಿದ್ದರೂ ಸ್ಮಾರ್ಟ್ಫೋನ್ಗಳಲ್ಲಿ ಈಗಷ್ಟೇ ಜನಪ್ರಿಯವಾಗುತ್ತಿದೆ. ಏನಿದು ಡೆಪ್ತ್ ಆಫ್ ಫೀಲ್ಡ್ ಎಂದು ಯೋಚಿಸುತ್ತಿದ್ದೀರಾ? ಡೆಪ್ತ್ ಆಫ್ ಫೀಲ್ಡ್ ಅನ್ನು ಅರ್ಥ ಮಾಡಿಕೊಳ್ಳುವುದೇನೋ ಸುಲಭ, ಆದರೆ ಫೋಟೋ ಸೆರೆಹಿಡಿಯುವಾಗ ಅದನ್ನು ಸರಿಯಾದ ರೀತಿಯಲ್ಲಿ ಬಳಸಲು ಒಂದರೆಡು ದಿನವಾದರೂ ಬೇಕಾದೀತು.

ಏನಿದು ಡೆಪ್ತ್ ಆಫ್ ಫೀಲ್ಡ್?

ಏನಿದು ಡೆಪ್ತ್ ಆಫ್ ಫೀಲ್ಡ್?

ಡೆಪ್ತ್ ಆಫ್ ಫೀಲ್ಡ್ ನ ವ್ಯಾಖ್ಯಾನ ಹೀಗೆನ್ನಬಹುದು - "ಫೋಟೋ/ವೀಡಿಯೋ ಸೆರೆಹಿಡಿಯುವಾಗ ನೀವು ಫೋಕಸ್ ಮಾಡುತ್ತಿರುವ ವಸ್ತುವಿನ ಸುತ್ತ ಫೋಕಸ್ ನಲ್ಲಿರುವಂಥ ಪ್ರದೇಶ/ಜಾಗವೇ ಡೆಪ್ತ್ ಆಫ್ ಫೀಲ್ಡ್". ಡೆಪ್ತ್ ಆಫ್ ಫೀಲ್ಡ್ ಫೋಟೋಗ್ರಾಫಿಯ ಬೇರೆ ಬೇರೆ ಅಂಶಗಳ ಮೇಲೆ ನಿರ್ಧಾರವಾಗುತ್ತದೆ.

ಉದಾಹರಣೆಗೆ ನೀವು ಆಯ್ಕೆ ಮಾಡಿರುವ ಅಪರ್ಚರ್/ದ್ಯುತಿರಂಧ್ರ, ನೀವು ಬಳಸುತ್ತಿರುವ ಲೆನ್ಸ್, ಯಾವ ಕ್ಯಾಮೆರಾದಲ್ಲಿ ಶೂಟ್ ಮಾಡುತ್ತಿದ್ದೀರಿ, ಅಥವಾ ನೀವು ಶೂಟ್ ಮಾಡುತ್ತಿರುವ ವಸ್ತು ನಿಮ್ಮ ಲೆನ್ಸ್ ಗೆ ಎಷ್ಟು ಸಮೀಪದಲ್ಲಿದೆ ಮುಂತಾದ ಅಂಶಗಳು ಡೆಪ್ತ್ ಆಫ್ ಫೀಲ್ಡ್ ಅನ್ನು ನಿರ್ಧರಿಸುತ್ತದೆ.

ಅಪರ್ಚರ್-ನಿಮ್ಮ ಅಪರ್ಚರ್/ದ್ಯುತಿ ರಂಧ್ರ ದ ಅಳತೆ ಡೆಪ್ತ್ ಆಫ್ ಫೀಲ್ಡ್ ನಿರ್ಧರಿಸುವುದರಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಡೆಪ್ತ್ ಆಫ್ ಫೀಲ್ಡ್ ಅನ್ನು ನಿಯಂತ್ರಿಸಲು ಸುಲಭ ವಿಧಾನವೆಂದರೆ ಫೋಟೋ ಸೆರೆಹಿಡಿಯುವಾಗ ನಿಮ್ಮ ಲೆನ್ಸ್ ನ ಅಪರ್ಚರ್(f-stop) ಅನ್ನು ನಿಮ್ಮ ಅಗತ್ಯಕ್ಕೆ ಸರಿಯಾಗಿ ಬದಲಾಯಿಸುವುದು.

ನಿಮ್ಮ ಅಪರ್ಚರ್ (f-number) ಕಡಿಮೆಯಾದಂತೆ ಡೆಪ್ತ್ ಆಫ್ ಫೀಲ್ಡ್ ಕೂಡ ಕಡಿಮೆಯಾಗುತ್ತದೆ, ಹಾಗೆಯೇ ಅಪರ್ಚರ್ (f-number) ಹೆಚ್ಚಾದಂತೆ ಡೆಪ್ತ್ ಆಫ್ ಫೀಲ್ಡ್ ಕೂಡ ಹೆಚ್ಚುತ್ತದೆ.

ದೂರ- ನಿಮ್ಮ ಲೆನ್ಸ್ ಮತ್ತು ವಸ್ತುವಿನ ಅಂತರ ಕಡಿಮೆಯಾದಂತೆ ಡೆಪ್ತ್ ಆಫ್ ಫೀಲ್ಡ್ ಕಡಿಮೆಯಾಗುತ್ತದೆ, ಹಾಗೆಯೇ ಲೆನ್ಸ್ ಮತ್ತು ವಸ್ತುವಿನ ಅಂತರ ಹೆಚ್ಚಾದಂತೆ ಡೆಪ್ತ್ ಆಫ್ ಫೀಲ್ಡ್ ಹೆಚ್ಚುತ್ತದೆ.

ಪಾಯಿಂಟ್ ಆಂಡ್ ಶೂಟ್- ಪಾಯಿಂಟ್ ಆಂಡ್ ಶೂಟ್ ಕಾಮೆರಾಗಳಲ್ಲಿ ಡೆಪ್ತ್ ಆಫ್ ಫೀಲ್ಡ್ ಅನ್ನು ನಿಯಂತ್ರಿಸಲು ಬಹಳ ಸುಲಭ. ವಿವಧ ಮೋಡ್ಗಳನ್ನು ಬಳಸುವ ಮೂಲಕ ಬೇಕಾದ ಡೆಪ್ತ್ ಆಫ್ ಫೀಲ್ಡ್ ಪಡೆಯಬಹುದು. ಉದಾಹರಣೆಗೆ, ವ್ಯಕ್ತಿಗಳ ಚಿತ್ರ ಸೆರೆಹಿಡಿಯಲು ಪೋರ್ಟ್ರೇಯ್ಟ್ ಮೋಡ್ ಬಳಸಿ, ಇದು ನೀಡುತ್ತದೆ ಕಿರಿದಾದ ಡೆಪ್ತ್ ಆಫ್ ಫೀಲ್ಡ್. ನೈಸರ್ಗಿಕ ದೃಷ್ಯಾವಳಿಗಳನ್ನು ಸೆರೆಹಿಡಿಯ ಬಯಸಿದರೆ ಲ್ಯಾಂಡ್ಸ್ಕೇಪ್ ಮೋಡ್ ಬಳಸಿ, ಇದರಲ್ಲಿ ದೊರಕುತ್ತದೆ ವಿಸ್ತಾರವಾದ ಡೆಪ್ತ್ ಆಫ್ ಫೀಲ್ಡ್.

ಡೆಪ್ತ್ ಆಫ್ ಫೀಲ್ಡ್ ಅನ್ನು ಯಾವಾಗ ಬಳಸಬೇಕು?

ಡೆಪ್ತ್ ಆಫ್ ಫೀಲ್ಡ್ ಅನ್ನು ಯಾವಾಗ ಬಳಸಬೇಕು?

ನಿಮ್ಮ ಫೋಟೋವಿನ ವಸ್ತು ಅದರ ಹಿನ್ನಲೆಯಿಂದ ಎದ್ದು ಕಾಣುವಂತಿರಬೇಕೆಂದಾಗ ಡೆಪ್ತ್ ಆಫ್ ಫೀಲ್ಡ್ ಬಳಸಬೇಕು. ಉದಾಹರಣೆಗೆ ಜನರ ಭಾವಚಿತ್ರ, ವೈಲ್ಡ್ ಲೈಫ್ ಅಥವ ಕ್ರೀಡೆಗಳ ಫೋಟೋಗ್ರಾಫಿಯ ಸಂದರ್ಭಗಳಲ್ಲಿ ಇದನ್ನು ಬಳಸಬಹುದು.

ವಾಟ್ಸ್‌ಆಪ್ ಬಳಕೆದಾರರಿಗೆ ಆಪಲ್ ಮಾದರಿಯ ಹೊಸ ಎಮೋಜಿಗಳು..!!ವಾಟ್ಸ್‌ಆಪ್ ಬಳಕೆದಾರರಿಗೆ ಆಪಲ್ ಮಾದರಿಯ ಹೊಸ ಎಮೋಜಿಗಳು..!!

ಡೆಪ್ತ್ ಆಫ್ ಫೀಲ್ಡ್ ನಿರ್ಧರಿಸುವುದು ಹೇಗೆ?

ಡೆಪ್ತ್ ಆಫ್ ಫೀಲ್ಡ್ ನಿರ್ಧರಿಸುವುದು ಹೇಗೆ?

ನೀವು ಫೋಟೋ ಸೆರೆಹಿಡಿಯುವ ಸಂದರ್ಭಗಳಲ್ಲಿ ಡೆಪ್ತ್ ಆಫ್ ಫೀಲ್ಡ್ ನಿರ್ಧರಿಸಲು ಸಹಾಯ ಬೇಕಿದ್ದಲ್ಲಿ ನಿಮ್ಮ ಕ್ಯಾಮೆರಾ ಮತ್ತು ಲೆನ್ಸ್ ಗಳಿಗೆ ಅನುಗುಣವಾಗಿ ಇಂಟರ್ನೆಟ್ನಿಂದ ಡೆಪ್ತ್ ಆಫ್ ಫೀಲ್ಡ್ ಚಾರ್ಟ್/ಪಟ್ಟಿಯನ್ನು ಡೌನ್ಲೋಡ್ ಮಾಡಿ. ಅಲ್ಲದೆ ಡೆಪ್ತ್ ಆಫ್ ಫೀಲ್ಡ್ ಅನ್ನು ಸಂದರ್ಭಕ್ಕೆ ಸರಿಯಾಗಿ ಲೆಕ್ಕ ಹಾಕಲು ನಿಮ್ಮ ಮೊಬೈಲ್ಗಳಲ್ಲಿ ಇನ್ಸ್ಟಾಲ್ ಮಾಡಬಹುದಾದ ಹಲವಾರು ಆಪ್ ಗಳೂ ಲಭ್ಯವಿದೆ.

ಡೆಪ್ತ್ ಆಫ್ ಫೀಲ್ಡ್ ಕುರಿತು ಈ ಮಾಹಿತಿಯನ್ನು ಸದಾ ನೆನಪಿನಲ್ಲಿಡಿ

• ಡೆಪ್ತ್ ಆಫ್ ಫೀಲ್ಡ್ ಹೆಚ್ಚಿಸಲು

• ಅಪರ್ಚರ್ ಕಿರಿದಾಗಿಸಿ (f-number ಹೆಚ್ಚಿಸಿ)

• ವಸ್ತುವಿನಿಂದ ದೂರ ಸರಿಯಿರಿ

• ಫೋಕಲ್ ಲೆನ್ತ್ ಕಡಿಮೆ ಮಾಡಿ

• ಡೆಪ್ತ್ ಆಫ್ ಫೀಲ್ಡ್ ಕಡಿಮೆಯಾಗಿಸಲು

• ಅಪರ್ಚರ್ ವಿಸ್ತರಿಸಿ (f-number ಕಡಿಮೆ ಮಾಡಿ)

• ವಸ್ತುವಿನ ಸಮೀಪದಲ್ಲಿರಿ

• ಫೋಕಲ್ ಲೆನ್ತ್ ಹೆಚ್ಚಿಸಿ

Best Mobiles in India

Read more about:
English summary
With the rise of dual camera modules in smartphones, there is a rise in Depth of Field feature as well. Check out here to know everything you need to know about Depth of Field.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X