ಫ್ಯೂಜಿಫಿಲ್ಮ್ 8x ಜೂಮ್ ಲೆನ್ಸ್ ಕ್ಯಾಮರಾ ಬಿಡುಗಡೆ

By Varun
|
ಫ್ಯೂಜಿಫಿಲ್ಮ್ 8x ಜೂಮ್ ಲೆನ್ಸ್ ಕ್ಯಾಮರಾ ಬಿಡುಗಡೆ

ಇತ್ತೀಚೆಗೆ ಭಾರತೀಯ ಮಾರುಕಟ್ಟೆಯಲ್ಲಿ ಬಜೆಟ್ ಕ್ಯಾಮರಾಗೆ ಹೈಟೆಕ್ ಫೀಚರುಗಳನ್ನು ಸೇರಿಸಿ ಬಿಡುಗಡೆ ಮಾಡುತ್ತಿರುವುದು ಈಗಿನ ಟ್ರೆಂಡ್. ಇದನ್ನೇ ಅನುಸರಿಸಿಕೊಂಡು ಫ್ಯೂಜಿಫಿಲ್ಮ್ , JZ100 ಹೆಸರಿನ ಮಾಡಲ ಒಂದನ್ನು ಬಿಡುಗಡೆ ಮಾಡಿದೆ.

ಯುವಕರಿಗೆ ಹಾಗು ಸಾಮಾಜಿಕ ಜಾಲತಾಣಗಳಲ್ಲಿ ಕ್ರಿಯಾಶೀಲರಾಗಿರುವವರಿಗೆ ಹೇಳಿ ಮಾಡಿಸಿದಂಥಾ ಕ್ಯಾಮರಾ ಇದಾಗಿದ್ದು, ಈ ಕ್ಯಾಮರಾದಲ್ಲಿ ಏನೇನು ವಿಶೇಷತೆಗಳಿವೆ ಗೊತ್ತಾ:

  • ಕಡಿಮೆ ಬೆಳಕಲ್ಲೂ ಚಿತ್ರ ತೆಗೆಯಬಹುದಾದ ಈ ಫ್ಯೂಜಿಫಿಲ್ಮ್ ಕ್ಯಾಮರಾ, 1 4 ಮೆಗಾ ಪಿಕ್ಸೆಲ್ ಹೊಂದಿದೆ.

  • ವೈಡ್ ಆಂಗಲ್ ಶಾಟ್, ಕ್ಲೋಸ್ ಅಪ್ ಶಾಟ್ ಗಳಲ್ಲಿ ಚಿತ್ರ ತೆಗೆಯಬಹುದಾದ 8X ಜೂಮ್ ಲೆನ್ಸ್.

  • ವೀಡಿಯೋ ರೀತಿ ಫೋಕಸ್ ಮಾಡಿ ದೊಡ್ಡ ಚಿತ್ರ ತೆಗೆಯಬಹುದಾದ ಮೋಶನ್ ಪನೋರಮಾ ಫೀಚರ್.

  • ಸೀನ್ ರೆಕಗ್ನಿಶನ್ (SR) ತಂತ್ರಜ್ಞಾನ ಹೊಂದಿರುವ ಈ ಕ್ಯಾಮರಾದಿಂದ ಅದೇ ಸ್ವಯಂಚಾಲಿತವಾಗಿ ಯಾವ ಮೋಡ್ ನಲ್ಲಿ (ಪೋರ್ಟ್ರೈಟ್, ಲ್ಯಾಂಡ್ಸ್ಕೇಪ್, ನೈಟ್, ಮಾಕ್ರೋ, ಬ್ಯಾಕ್ ಲಿಟ್ ಪೋರ್ಟ್ರೈಟ್) ಫೋಟೋ ತೆಗೆಯಬೇಕೆಂದು ಇದೆ ನಿರ್ಧರಿಸುತ್ತದೆ.

  • ಗ್ರೂಪ್ ಫೋಟೋ ತೆಗೆಯಲು ಸುಲಭ ಮಾಡಿಕೊಡುವ ಫೇಸ್ ರೆಕಗ್ನಿಶನ್ ಫೀಚರ್.

  • 720p HD ವೀಡಿಯೋ ಕೊಡ ತೆಗೆಯಬಹುದು.

  • MyFinePix Studio ಎಂಬ ಫೀಚರ್ ನಿಂದಾಗಿ ಇಂಟರ್ನೆಟ್ ಸಂಪರ್ಕದೊಂದಿಗೆ ನೀವು ಫೇಸ್ ಬುಕ್ ಹಾಗು ಯೂಟ್ಯೂಬ್ ನಲ್ಲಿ ಅಪ್ಲೋಡ್ ಮಾಡಬಹುದು.

ಬ್ಲಾಕ್, ಸಿಲ್ವರ್, ಪಿಂಕ್, ನೀಲಿ,ಕೆಂಪು, ಹಾಗು ನೇರಳೆ ಬಣ್ಣಗಳಲ್ಲಿ ಬರಲಿದ್ದು, ಈ ಕ್ಯಾಮರಾದ ಬೆಲೆ 8,499 ರೂಪಾಯಿ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X