33,989 ರೂ.ದರದಲ್ಲಿ ಫೂಜಿಫೀಲ್ಮ್‌ನ XF1 ಕ್ಯಾಮೆರಾ ಬಿಡುಗಡೆ

ಜಪಾನ್ ಮೂಲದ ಕ್ಯಾಮೆರಾ ತಯಾರಿಕಾ ಸಂಸ್ಥೆಯಾದ ಫೂಜಿಫಿಲ್ಮ್ ಭಾರತೀಯ ಮಾರುಕಟ್ಟೆಗೆ ತನ್ನಯ ನೂತನ ಕೊಂಚ ದುಬಾರಿಯಾದ ಕಾಂಪ್ಯಾಕ್ಟ್ ಡಿಜಿಟಲ್ XF1 ಕ್ಯಾಮೆರಾ ರೂ.33, 989 ದರದಲ್ಲಿ ಬಿಡುಗಡೆ ಮಾಡಿದೆ. ಈ ಮೂಲಕ ಫೋಜಿಫೀಲ್ಮ್ ಭಾರತೀಯ ಮಾರುಕಟ್ಟೆಗೆ ತನ್ನಯ ಎಕ್ಸ್ ಸೀರೀಸ್ ಕ್ಯಾಮೆರಾಗಳನ್ನು ಪರಿಚಯಿಸಿದೆ. ಈ ಸರಣಿಯ X-Pro1, X100, X10, X-S1 ಹಾಗೂ X-E1 ಮಾದರಿಗಳನ್ನು ಫೂಜಿಫಿಲ್ಮ್ ಪರಿಚಯಿಸಿದ್ದು ದರ ರೂ.33,989 ರಿಂದ ಆರಂಭಗೊಳ್ಳಲಿದ್ದು ಇನ್ನೆರಡು ವಾರಗಳಲ್ಲಿ ಖರೀದಿಗೆ ಲಭ್ಯವಾಗಲಿದೆ.
ಫೂಜಿಫಿಲ್ಮ್ ತನ್ನಯ ನೂತನ ಕ್ಯಾಮೆರಾಗಳಿಗಾಗಿ ಭಾರತದಲ್ಲಿ ಹಬ್ಬದ ಸಂದರ್ಭದಂದು ಪ್ರಮೋಷನ್ ಕಾರ್ಯಕ್ರಮ ಆರಂಭಿಸುವ ಸಲುವಾಗಿ ಬರೂಬ್ಬರಿ 15 ಕೋಟಿ ಹೂಡಿಕೆ ಮಾಡಿದೆ. ಹಾಗೂ ಸಂಸ್ಥೆಯು ಮುಂದಿನ ಎರಡು ತಿಂಗಳಿನಲ್ಲಿ 40 ಕೋಟಿ ರೂ ವಹಿವಾಟು ಗಳಿಸುವ ನೀರೀಕ್ಷೆಯಲ್ಲಿದೆ ಅಂದಹಾಗೆ ಸಂಸ್ಥೆಯು ಕಳೆದ ವರ್ಷ 25 ಕೋಟಿ ರೂ ಗಳ ವಹಿವಾಟನ್ನು ಗಳಿಸುವಲ್ಲಿ ಮಾತ್ರವಷ್ಟೇ ಶಕ್ತವಾಗಿತ್ತು. ಅಂದಹಾಗೆ ಸಂಸ್ಥೆ ಮತಷ್ಟು ನೂತನ ಮಾದರಿಯ ಕ್ಯಾಮೆರಾಗಳನ್ನು ಪರಿಚಯಿಸಲು ಮುಂದಾಗಿದ್ದು ಅದರಲ್ಲಿಯೂ ವಾಟರ್ ಪ್ರೋಫ್ ಕ್ಯಾಮೆರಾಗಳನ್ನು ಪರಿಚಯಿಸುವ ಯೋಜನೆಯಲ್ಲಿದೆ.
ಸಂಸ್ಥೆಯ ಮೂಲಗಳು ತಿಳಿಸಿರುವಂತೆ ಭಾರತದಲ್ಲಿ 2.5 ಲಕ್ಷ ಕ್ಯಾಮೆರಾಗಳ ಮಾರಾಟ ಹಾಗೂ ಶೇ.35 ರಷ್ಟು ಬೆಳವಣಿಗೆ ಹೊಂದುವ ಗುರಿ ಹೊಂದಿದೆ. ಸದ್ಯದಲ್ಲಿ ಭಾರತೀಯ ಗ್ರಾಹಕರುಗಳಿಗೆ ಪೂಜಿಫಿಲ್ಮ್ 12 ಮಾದರಿಗಳನ್ನು ಒದಗಿಸಿದೆ. ಫೂಜಿಫೀಲ್ಮ್ ಕಳೆದ ಸಾಲಿನಲ್ಲಿ ವಾರ್ಷಿಕ 27 ದಶಲಕ್ಷ ಡಾಲರ್ ಜಾಗತಿಕ ವಹಿವಾಟು ನಡೆಸಿತ್ತು, ಇದರಲ್ಲಿ ಭಾರತೀಯ ಮಾರುಕಟ್ಟೆಯ ಕೊಡುಗೆ ಕೇವಲ 1% ಮಾತ್ರ ಎಂಬುದು ಗಮನಾರ್ಹ. ಒಟ್ಟಾರೆ ಬಜೆಟ್ ಕೊರಿತು ಮೊದಲು ಆಲೋಚಿಸುವಂತಹ ಭಾರತೀಯ ಗ್ರಾಹಕರುಗಳ ಫೂಜಿಫಿಲ್ಮ್‌ನ ನೂತನ ಡಿಜಿಟಲ್ ಕ್ಯಾಮೆರಾಗಳಿಗೆ ಯಾವರೀತಿಯ ಪ್ರತಿಕ್ರಿಯೆ ನೀಡುತ್ತರೆ ಎಂಬುದನ್ನು ಕಾದುನೋಡ ಬೇಕಿದೆ.
ಅಂದಹಾಗೆ ನೂತನ ಫೂಜಿಫಿಲ್ಮ್ ಕ್ಯಾಮೆರಾ ದಲ್ಲಿ ಏನೆಲ್ಲಾ ವಿಶೇಷತೆಗಳಿವೆ ಎಂಬುದರ ಕಡೆ ಗಮನ ಹರಿಸೋಣ.
ಫೂಜೀಫಿಲ್ಮ XF1 ನ ವಿಶೇಷತೆ.
- ಹಸ್ತಚಾಲಿತ ಜೂಮ್ ನೊಂದಿಗೆ ಲೆನ್ಸ್ ರಿಟ್ರಾಕ್ಷನ್.
- 12 MP EXR-CMOS ಸೆನ್ಸಾರ್.
- ISO ಸೆನ್ಸಿಟಿವಿಟಿ. 100-3200 ರೇಂಜ್.
- ಸಂಪೂರ್ಣ ಹಸ್ತಚಾಲಿತ ನಿಯಂತ್ರಣ.
- RAW ಫಾರ್ಮಾಟ್ ಮಾದರಿಯ ವಿಡಿಯೋ ರೆಕಾರ್ಡಿಂಗ್
- HD ಮೂವೀ ರೆಕಾರ್ಡಿಂಗ್ ಫಾರ್ಮ್ಯಾಟ್ ಹಾಗೂ ಬಿಲ್ಟ್ ಇನ್ ಮೈಕ್ರೋಫೋನ್ಸ್.
- ಆಧುನಿಕ ಇಮೇಜ್ ಪ್ರೊಸೆಸಿಂಗ್ ಫಿಲ್ಟರ್.
- 3 ಇಂಚಿನ 460K LCD ದರ್ಶಕ.
- ಬೆಲೆ.ರೂ.33, 989 ರಿಂದ ಪ್ರಾರಂಭ.


Click it and Unblock the Notifications








