ಗೂಗಲ್ ಹೊರತರಲಿದೆ ವೈಫೈ ಕ್ಯಾಮೆರಾ

Written By:

ನಾವು ಬೇಕಾದಷ್ಟು ದುಡ್ಡು ಖರ್ಚು ಮಾಡಿ ದುಬಾರಿ ಮನೆಯನ್ನು ಕಟ್ಟಿಸುತ್ತೇವೆ. ಅಲ್ಲಿ ಸಾಕಷ್ಟು ಸೌಲಭ್ಯಗಳನ್ನು ನಿರ್ಮಿಸಿಕೊಳ್ಳುತ್ತೇವೆ. ಅದರಂತೆ ಮನೆಯ ಸುರಕ್ಷೆಗೂ ನಾವಉ ಗಮನ ಕೊಡುತ್ತೇವೆ.

ದೂರ ಪ್ರಯಾಣಕ್ಕೆ ಹೋಗುತ್ತಿರುವ ನಾವು ಎಷ್ಟು ಹೊತ್ತೂ ಮನೆಯ ಬಗ್ಗೆಯೇ ಆಲೋಚಿಸುತ್ತಿದ್ದರೆ ಆ ಪ್ರಯಾಣ ಸಪ್ಪೆಯಾಗುತ್ತದೆ. ಬೇಕಾದ ವ್ಯವಸ್ಥೆ ಮಾಡಿದ್ದರೂ ನಮಗೆ ನೆಮ್ಮದಿ ಇರುವುದಿಲ್ಲ. ಮನೆಯಲ್ಲಿ ಎಲ್ಲಾ ವಸ್ತುಗಳೂ ಜೋಪಾನವಾಗಿವೆಯೇ? ಕಳ್ಳ ಬಂದಿರುವನೇ? ಹೀಗೆ ಹತ್ತು ಹಲವು ಯೋಚನೆಗಳು ನಮ್ಮ ತಲೆಯನ್ನು ಕೊರೆಯುತ್ತಲೇ ಇರುತ್ತದೆ.

ಗೂಗಲ್ ಹೊರತರಲಿದೆ ವೈಫೈ ಕ್ಯಾಮೆರಾ

ಹಾಗಿದ್ದರೆ ನಿಮ್ಮ ತಲೆ ಕೊರೆಯುವ ಯೋಚನೆಗೆ ಫುಲ್‌ಸ್ಟಾಪ್ ಹಾಕಲು ಗೂಗಲ್ ಹೊಸ ತಂತ್ರಜ್ಞಾನದ ವೈಫೈ ಯನ್ನು ಹೊರತರುತ್ತಿದೆ. ಗೂಗಲ್ ವೈಫೈ ಕ್ಯಾಮೆರಾಗಳನ್ನು ತಯಾರಿಸುವ ಕಂಪೆನಿಯಾದ ಡ್ರಾಪ್‌ಕ್ಯಾಮ್ ಅನ್ನು ಖರೀದಿಸುವ ಯೋಚನೆಯಲ್ಲಿದೆ. ಇದರಿಂದ ನಿಮ್ಮ ಮನೆಯಲ್ಲಿ ಏನು ನಡೆಯುತ್ತಿದ್ದರೂ ನಿಮಗೆ ಸುಲಭದಲ್ಲಿ ತಿಳಿಯಬಹುದಾಗಿದೆ.

ಗೂಗಲ್‌ನ ಅಂಗಸಂಸ್ಥೆ ನೆಸ್ಟ್ ಸ್ಮೋಕ್ ಡಿಟೆಕ್ಟರ್ ಮತ್ತು ಥರ್ಮೋಸ್ಟೇಟ್ಸ್ ಅನ್ನು ಈಗಾಗಲೇ ಖರೀದಿಸಿದ್ದು ಮನೆಯ ಭದ್ರತೆಯ ದೃಷ್ಟಿಯನ್ನು ಮನಸ್ಸಿನಲ್ಲಿಟ್ಟುಕೊಂಡು ಆ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ಈ ನಿಟ್ಟಿನಲ್ಲಿ ಗೂಗಲ್ ಹಾಗೂ ನೆಸ್ಟ್ ಇಂತಹ ಒಂದು ವೈಫೈ ಕ್ಯಾಮೆರಾ ತಯಾರಿಕಾ ಕಂಪೆನಿಯನ್ನು ಕೊಳ್ಳುವ ನಿರೀಕ್ಷೆಯಲ್ಲಿದೆ. ಆದರೆ ಇದು ಯಾವ ಬಗೆಯಲ್ಲಿ ಮನೆಯ ಭದ್ರತೆಯ ಬಗ್ಗೆ ಆಲೋಚಿಸುತ್ತಿದೆ ಎಂಬುದು ಮಾತ್ರ ನಿಗೂಢವಾಗಿದೆ.

ವೈಫೈ ಕ್ಯಾಮೆರಾ ತಯಾರಿಕಾ ಕಂಪೆನಿ ಡ್ರಾಪ್‌ಕ್ಯಾಮ್ ನಿಮ್ಮ ಮನೆಯಲ್ಲಿ ಚಲಿಸುತ್ತಿರುವ ಮನುಷ್ಯರ ಚಲನೆಯನ್ನು ಗುರುತಿಸುವ ಕ್ಯಾಮೆರಾಗಳನ್ನು ಹೊರತಂದಿದೆ. ಕ್ಲೌಡ್ ಆಧಾರಿತ ಸಾಫ್ಟ್‌ವೇರ್ ನಿಮ್ಮ ಸ್ಮಾರ್ಟ್‌ಫೋನ್ ಅಪ್ಲಿಕೇಶನ್ ಅಥವಾ ಇಮೇಲ್ ಖಾತೆಗೆ ಎಚ್ಚರಿಕೆಯನ್ನು ಕಳುಹಿಸುತ್ತದೆ. ಮತ್ತು ನಿಮ್ಮ ಡ್ರಾಪ್‌ಕ್ಯಾಮ್‌ನಿಂದ ಏಳು ದಿನಗಳ ವೀಡಿಯೋವನ್ನು ಕೂಡ ನಿಮಗೆ ದಾಖಲಿಸಿಡಬಹುದು. ನಿಮಗೆ ಬೇಕೆಂದಾಗ ಈ ಫೂಟೇಜನ್ನು ರಿವ್ಯೂ ಮಾಡಬಹುದು ಮತ್ತು ಕ್ಲಿಪ್‌ಗಳನ್ನು ಉಳಿಸಬಹುದು.

ಗೂಗಲ್ ಇದನ್ನು ಕುರಿತು ಅಂತಿಮ ತೀರ್ಮಾನಗಳನ್ನು ಇನ್ನೂ ಸ್ವೀಕರಿಸಬೇಕಾಗಿದ್ದು ಸಮಾಲೋಚನೆಗಳನ್ನು ಮಾಡುತ್ತಿದೆ. ತೀರ್ಮಾನವನ್ನು ಅಂತಿಮಗೊಳಿಸಿದರೆ ಡ್ರಾಪ್‌ಕ್ಯಾಮ್ ಕಂಪೆನಿಯನ್ನು ಗೂಗಲ್ ಖರೀದಿಸಲಿದೆ. ಡ್ರಾಪ್‌ಕ್ಯಾಮೆರಾ ಬೆಲೆ ಸುಮಾರು $150 ಆಗಿದ್ದು ಭಾರತೀಯ ದರ ರೂ. 8840.25 ಆಗಿದೆ.

Read more about:
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot