Subscribe to Gizbot

ಎಂಟ್ರಿ ಲೆವೆಲ್ ಗೋಪ್ರೋ ಹಿರೋ ಲಾಂಚ್: ಬೆಲೆ, ವಿಶೇಷತೆ ಕುರಿತ ಮಾಹಿತಿ..!

Written By:

ಸದ್ಯ ಆಕ್ಷನ್ ಕ್ಯಾಮೆರಾ ಮಾರುಕಟ್ಟೆಯಲ್ಲಿ ಗೋ ಪ್ರೋ ಹೆಚ್ಚಿನ ಸದ್ದು ಮಾಡುತ್ತಿದೆ. ಈಗಾಗಲೇ ಹಲವು ಮಂದಿ ವಿವಿಧ ಕಾರ್ಯಗಳ ಬಳಕೆಗಾಗಿ ಗೋ ಪ್ರೋಗಳನ್ನು ಖರೀದಿ ಮಾಡುತ್ತಿದ್ದು, ಈ ಹಿನ್ನಲೆಯಲ್ಲಿ ಕೈಗೆಟುಕುವ ಬೆಲೆಯಲ್ಲಿ ಗೋ ಪ್ರೋ ಹಿರೋ ಲಾಂಚ್ ಆಗಿದ್ದು, ಮಾರುಕಟ್ಟೆಯಲ್ಲಿ ಲಭ್ಯವಾಗುತ್ತಿದೆ. ಫ್ಲಿಪ್‌ಕಾರ್ಟ್‌ನಲ್ಲಿ ಎಕ್‌ಕ್ಲೂಸಿವ್‌ಆಗಿ ದೊರೆಯಲಿದೆ.

 ಎಂಟ್ರಿ ಲೆವೆಲ್ ಗೋಪ್ರೋ ಹಿರೋ ಲಾಂಚ್: ಬೆಲೆ, ವಿಶೇಷತೆ ಕುರಿತ ಮಾಹಿತಿ..!

ಗೋ ಪ್ರೋ ಮಾರುಕಟ್ಟೆಯಲ್ಲಿ ಹೊಸ ಸಾಧ್ಯತೆಯನ್ನು ತೋರಿಸಿಕೊಟ್ಟಿದ್ದು, ಆಕ್ಷನ್ ಕ್ಯಾಮೆರಾಗಳ ವಿಭಾಗದಲ್ಲಿ ಹೊಸ ದಾಖಲೆಯನ್ನು ನಿರ್ಮಿಸಿದೆ. ಹೆಚ್ಚಾಗಿ ಟೈಮ್ ಲಾಪ್ಸ್ ವಿಡಿಯೋಗನ್ನು ಸೆರೆಹಿಡಿಯಲು, ಟ್ರಕಿಂಗ್, ಬೈಕ್‌ ರೈಡಿಂಗ್‌ಗಳನ್ನು ರೆಕಾರ್ಡ್‌ ಮಾಡಿಕೊಳ್ಳಲು ಗೋ ಪ್ರೋ ಬಳಕೆಯಾಗುತ್ತಿದ್ದು, ಮಾರುಕಟ್ಟೆಯಲ್ಲಿ ಬೇಡಿಕೆಯನ್ನು ಸೃಷ್ಠಿಸಿಕೊಂಡಿದೆ. ಈ ಹಿನ್ನಲೆಯಲ್ಲಿ ಮಾರುಕಟ್ಟೆಯಲ್ಲಿ ಗೋ ಪ್ರೋ ಹಿರೋ ಲಾಂಚ್ ಆಗಿದೆ.

ಭಾರತೀಯ ಮಾರುಕಟ್ಟೆಯಲ್ಲಿ ಗೋ ಪ್ರೋ ಹಿರೋ ಆಕ್ಷನ್ ಮತ್ತು ಸ್ಟೋಡ್ಸ್ ಕ್ಯಾಮೆರಾ ಬೆಲೆ ಕೊಂಚ ಹೆಚ್ಚಾಗಿದ್ದು, ರೂ.18,990ಕ್ಕೆ ಲಭ್ಯವಿದೆ. ಇದೇ ಕ್ಯಾಮೆರಾ ಅಮೆರಿಕಾದ ಮಾರುಕಟ್ಟೆಯಲ್ಲಿ ರೂ.13,000ರ ಅಸುಪಾಸಿನಲ್ಲಿ ದೊರೆಯಲಿದೆ ಎನ್ನಲಾಗಿದೆ. ಸದ್ಯ ಭಾರತದಲ್ಲಿ ಇದು ಫ್ಲಿಪ್‌ಕಾರ್ಟ್‌ನಲ್ಲಿ ಮಾತ್ರವೇ ಮಾರಾಟವಾಗಲಿದೆ.

 ಎಂಟ್ರಿ ಲೆವೆಲ್ ಗೋಪ್ರೋ ಹಿರೋ ಲಾಂಚ್: ಬೆಲೆ, ವಿಶೇಷತೆ ಕುರಿತ ಮಾಹಿತಿ..!

ಗೋ ಪ್ರೋ ಹಿರೋ ಆಕ್ಷನ್ ಮತ್ತು ಸ್ಟೋಡ್ಸ್ ಕ್ಯಾಮೆರಾ ವಾಟರ್ ಫ್ರೂ ವಿನ್ಯಾಸದೊಂದಿಗೆ ಗಟ್ಟಿಮುಟ್ಟದ ದೇಹವನ್ನು ಹೊಂದಿದೆ. ಅಲ್ಲದೇ 10MP ಲೈನ್ಸ್ ಹೊಂದಿದ್ದು, 1/2.3 CMOS ಸೆನ್ಸಾರ್ ಅನ್ನು ಅಳವಡಿಸಲಾಗಿದೆ. ಇದು 1080p ಗುಣಮಟ್ಟದಲ್ಲಿ ವಿಡಿಯೋ ರೆಕಾರ್ಡಿಂಗ್ ಮಾಡಲು ಸಹಾಯವನ್ನು ಮಾಡಲಿದೆ. ಜೊತೆಗೆ 4.95 ಇಂಚಿನ ಟಚ್ ಡಿಸ್‌ಪ್ಲೇಯನ್ನು ಸಹ ಒಳಗೊಂಡಿದೆ.

4GB ಇಂಟರ್ನಲ್ ಮೆಮೊರಿಯೊಂದಿಗೆ ದೊರೆಯಲಿದ್ದು, 128GB ವರೆಗೆ ಮಮೊರಿಯನ್ನು ವಿಸ್ತರಿಸಿಕೊಳ್ಳವ ಅವಕಾಶವನ್ನು ಹೊಂದಿದೆ ಎನ್ನಲಾಗಿದೆ. ಅಲ್ಲದೇ ವಾಯ್ಸ್ ಕಮಾಂಡಿಗ್‌ ಅನ್ನು ಪಾಲಿಸಲಿದೆ. ಅಲ್ಲದೇ ಫೋಟೋಗಳನ್ನು ಸೆರೆಹಿಡಿಸಲು ಶಕ್ತವಾಗಿದೆ. ಏಪ್ರಿಲ್ 2 ರಿಂದ ಫ್ಲಿಪ್‌ಕಾರ್ಟ್‌ನಲ್ಲಿ ಮಾರಾಟವಾಗಲಿದ್ದು, ರೂ. 18,990ಕ್ಕೆ ಮಾರಾಟವಾಗುತ್ತಿದೆ.

English summary
GoPro introduces entry-level Hero camera. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot