Home
ಕ್ಯಾಮೆರಾ

ಭಾರತದಲ್ಲಿ ಹೊಸ GoPro ಸರಣಿ ಬಿಡುಗಡೆ: Max 2, Hero Lite ಮತ್ತು AI Gimbal!

ವಿಶ್ವದಾದ್ಯಂತ ಕಂಟೆಂಟ್ ಕ್ರಿಯೇಟರ್‌ಗಳ ಮೆಚ್ಚಿನ ಬ್ರ್ಯಾಂಡ್‌ಗಳಲ್ಲಿ ಒಂದಾದ GoPro, ತನ್ನ ಹೊಸ ತಲೆಮಾರಿನ ಆಕ್ಷನ್ ಕ್ಯಾಮೆರಾಗಳಾದ GoPro Max 2 ಮತ್ತು GoPro Lit Hero, ಜೊತೆಗೆ ಹೊಸ Fluid Pro AI Gimbal ಅನ್ನು ಭಾರತದಲ್ಲಿ ಇದೀಗ ಅಧಿಕೃತವಾಗಿ ಬಿಡುಗಡೆ ಮಾಡಿದೆ. ಕಳೆದ ಸೆಪ್ಟೆಂಬರ್ 24ರಂದು ಜಾಗತಿಕವಾಗಿ ಬಿಡುಗಡೆಯಾಗಿದ್ದ ಈ ಎಲ್ಲಾ ಸಾಧನಗಳನ್ನು ಸುಮಾರು ಏಳು ವಾರಗಳ ಬಳಿಕ ಭಾರತದಲ್ಲಿ ಈ ಮಂಗಳವಾರದಂದು ಪರಿಚಯಿಸಲಾಗಿದೆ. ಈ ಹೊಸ ಮೂರು ಸಾಧನಗಳಲ್ಲಿ Max 2 ಕ್ಯಾಮೆರಾ ಈಗಾಗಲೇ Amazon, Flipkart, Croma ಮತ್ತು Reliance Digital ನಲ್ಲಿ ಮಾರಾಟಕ್ಕೆ ಲಭ್ಯವಿದ್ದು, ಉಳಿದ ಎರಡು ಉತ್ಪನ್ನಗಳು ಶೀಘ್ರದಲ್ಲೇ ಮಾರಾಟಕ್ಕೆ ಬರಲಿದೆ. ಹಾಗಾದರೆ, ಹೊಸ GoPro Max 2, Lit Hero ಹಾಗೂ Fluid Pro AI ಗಿಂಬಲ್ ಸಾಧನಗಳು ಹೇಗಿವೆ?, ಬೆಲೆ ಎಷ್ಟು ಎಂಬ ಸಂಪೂರ್ಣ ವಿವರಗಳನ್ನು ನೋಡೋಣ ಬನ್ನಿ.

GoPro Max 2: 8K 360° ವಿಡಿಯೋ ಮತ್ತು AI ಎಡಿಟಿಂಗ್
GoPro ಪರಿಚಯಿಸಿರುವ ಹೊಸ Max 2 ಕ್ಯಾಮೆರಾವು 8K ರೆಸಲ್ಯೂಶನ್‌ನಲ್ಲಿ 360-ಡಿಗ್ರಿ ವಿಡಿಯೋ ರೆಕಾರ್ಡಿಂಗ್ ಮಾಡಬಲ್ಲದು. ಇದು GP Log ಎನ್‌ಕೋಡಿಂಗ್ ತಂತ್ರಜ್ಞಾನವನ್ನು ಬೆಂಬಲಿಸುತ್ತಿದ್ದು, 1 ಬಿಲಿಯನ್ ಬಣ್ಣಗಳ ನಿಖರತೆ ಒದಗಿಸುತ್ತದೆ. ಬದಲಾಯಿಸಬಹುದಾದ ನೀರು ತಳ್ಳುವ(water-repelling ) ಆಪ್ಟಿಕಲ್ ಗ್ಲಾಸ್ ಲೆನ್ಸ್‌ಗಳು ಕ್ಯಾಮೆರಾಗೆ ಹೊಸ ರೀತಿಯ ಪ್ರೊಟೆಕ್ಷನ್ ನೀಡುತ್ತವೆ. ಫೋಟೋ ಪ್ರಿಯರಿಗಾಗಿ, ಇದು 29MP 360° ಚಿತ್ರಗಳನ್ನು ಸೆರೆಹಿಡಿಯುತ್ತದೆ, ಅವುಗಳನ್ನು ನಂತರ GoPro Quik ಆಪ್ ಮೂಲಕ ಸುಲಭವಾಗಿ ಎಡಿಟ್ ಮಾಡಬಹುದು.

ಕ್ಯಾಮೆರಾದಲ್ಲಿ ಆರು ಮೈಕ್ರೋಫೋನ್‌ಗಳ ವ್ಯವಸ್ಥೆ ಇದ್ದು, "360° ನೈಜ ಧ್ವನಿ ಅನುಭವ" ನೀಡುತ್ತದೆ. ಜೊತೆಗೆ Bluetooth, GPS, Audio Field-of-View ಹಾಗೂ 360 Studio Audio ಬೆಂಬಲವಿದೆ.ಇದರಲ್ಲಿ 1,960mAh Enduro ಬ್ಯಾಟರಿ ಅಳವಡಿಸಲಾಗಿದ್ದು, ತೀವ್ರ ಹವಾಮಾನ ಪರಿಸ್ಥಿತಿಗಳಲ್ಲಿಯೂ ಕಾರ್ಯನಿರ್ವಹಿಸುತ್ತದೆ. AI ಆಧಾರಿತ ವಿಡಿಯೋ ಎಡಿಟಿಂಗ್ ಸಾಫ್ಟ್‌ವೇರ್ ಸಹಿತ ಬರುತ್ತದೆ, ಇದರಲ್ಲಿ AI Object Tracking ಮತ್ತು MotionFrame Editing ತಂತ್ರಜ್ಞಾನಗಳಿವೆ. ಇದು ಕಂಟೆಂಟ್ ಕ್ರಿಯೇಟರ್‌ಗಳಿಗೆ ಹೊಸ ಅನುಭವ ನೀಡಲಿದೆ.

ಭಾರತದಲ್ಲಿ ಹೊಸ GoPro ಸರಣಿ ಬಿಡುಗಡೆ: Max 2, Hero Lite ಮತ್ತು AI Gimbal!

GoPro Lit Hero: ಪ್ರಮುಖ ವೈಶಿಷ್ಟ್ಯಗಳು
GoPro Max 2 ಜೊತೆಗೆ ಬಿಡುಗಡೆಯಾಗಿರುವ GoPro Lit Hero ಕ್ಯಾಮೆರಾ ಕೇವಲ 93 ಗ್ರಾಂ ತೂಕವಿರುವ ಹಗುರ ಮಾದರಿಯಾಗಿದೆ. ಇದು 4K ವಿಡಿಯೋವನ್ನು 60fps ನಲ್ಲಿ ರೆಕಾರ್ಡ್ ಮಾಡಬಲ್ಲದು, ಜೊತೆಗೆ 2x ಸ್ಲೋ-ಮೋಷನ್ ಮತ್ತು 4:3 ಅಸ್ಪೆಕ್ಟ್ ರೇಶಿಯೋ ಶೂಟಿಂಗ್ ಮೋಡ್ ಸಹಿತ ಬರುತ್ತದೆ. ಕ್ಯಾಮೆರಾ 5 ಮೀಟರ್ ವರೆಗಿನ ನೀರಿನೊಳಗೆ ವಾಟರ್‌ಪ್ರೂಫ್ ಆಗಿದ್ದು, ಬಿಲ್ಟ್-ಇನ್ ಲೈಟ್ ಸಹ ಹೊಂದಿದೆ. ಈ ಸಾಧನವು 12MP ಫೋಟೋಗಳನ್ನು ಸೆರೆಹಿಡಿಯಬಹುದು ಮತ್ತು ಒಂದೇ ಚಾರ್ಜ್‌ನಲ್ಲಿ 100 ನಿಮಿಷಗಳ 4K ರೆಕಾರ್ಡಿಂಗ್ ನೀಡಲಿದೆ.

Fluid Pro AI Gimbal : ಪ್ರಮುಖ ವೈಶಿಷ್ಟ್ಯಗಳು
ಈ ಬಿಡುಗಡೆಯ ಮತ್ತೊಂದು ಪ್ರಮುಖ ಆಕರ್ಷಣೆ ಎಂದರೆ Fluid Pro AI Gimbal. ಇದು 3-Axis AI ಟ್ರ್ಯಾಕಿಂಗ್ ಹೊಂದಿದ್ದು, GoPro ಕ್ಯಾಮೆರಾಗಳಷ್ಟೇ ಅಲ್ಲದೆ ಸ್ಮಾರ್ಟ್‌ಫೋನ್ ಮತ್ತು ಇತರ ಕ್ಯಾಮೆರಾಗಳಿಗೂ ಹೊಂದಿಕೊಳ್ಳುತ್ತದೆ ಎಂದು ಕಂಪೆನಿ ತಿಳಿಸಿದೆ. ಈ ಗಿಂಬಲ್ 400 ಗ್ರಾಂ ವರೆಗಿನ ಸಾಧನಗಳನ್ನು ಸ್ಥಿರವಾಗಿ ಹಿಡಿಯಬಲ್ಲದು. ಇದರ ಪ್ರಮುಖ ವೈಶಿಷ್ಟ್ಯಗಳು ಎಂದರೆ, Fill Light, 18 ಗಂಟೆಗಳ ಬ್ಯಾಟರಿ ಬ್ಯಾಕಪ್, ಹಾಗೂ ಅಳವಡಿಸಿದ ಡಿವೈಸ್ ಚಾರ್ಜಿಂಗ್ ಸಾಮರ್ಥ್ಯ ಇದರಲ್ಲಿವೆ. ಸಾಹಸ ಪ್ರಿಯರಿಗಾಗಿ ಇದು ಹೇಳಿಮಾಡಿಸಿದಂತಿದೆ.

GoPro Max 2, Lit Hero ಮತ್ತು Fluid Pro AI: ಬೆಲೆ ಹಾಗೂ ಲಭ್ಯತೆ
ಭಾರತದಲ್ಲಿ GoPro Max 2 ಕ್ಯಾಮೆರಾದ ಬೆಲೆ ₹57,000 ಆಗಿದ್ದು, ಪ್ರಾರಂಭಿಕ ಆಫರ್‌ನಡಿ 64GB SD ಕಾರ್ಡ್ ಬಂಡಲ್ ಸಹಿತ ₹54,999 ಕ್ಕೆ ದೊರೆಯುತ್ತಿದೆ. ಇತ್ತ GoPro Lit Hero ಬೆಲೆ ₹28,500 ಆಗಿದೆ ಮತ್ತು Fluid Pro AI Gimbal ಬೆಲೆ ₹23,000. ಮೊದಲೇ ತಿಳಿಸಿದರೆ, GoPro Max 2 ಈಗಲೇ ಖರೀದಿಗೆ ಲಭ್ಯವಿದ್ದು, Lit Hero ಡಿಸೆಂಬರ್ ಮೊದಲ ವಾರದಿಂದ ಹಾಗೂ Fluid Pro AI Gimbal 2026ರ ಜನವಯಲ್ಲಿ ಮಾರಾಟಕ್ಕೆ ಬರಲಿದೆ. ಎಲ್ಲಾ ಮೂರು ಉತ್ಪನ್ನಗಳು ಅಧಿಕೃತ GoPro ರೀಟೇಲ್ ಪಾರ್ಟ್ನರ್‌ಗಳ ಮೂಲಕವೂ ಸಹ ಲಭ್ಯವಾಗಲಿವೆ.

Best Mobiles in India

English summary
GoPro Max 2 and GoPro Lite Hero, along with the new Fluid Pro AI Gimbal, have now been officially launched in India. All these devices were launched globally on September 24th and were introduced in India this Tuesday, about seven weeks after their launch.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+