Home
ಕ್ಯಾಮೆರಾ

ಫೋಟೋಗ್ರಫಿ ಪ್ರಿಯರಿಗಾಗಿ..! 200MP ಕ್ಯಾಮೆರಾ ಹೊಂದಿರುವ ಮೊಬೈಲ್‌ಗಳಿವು! ಬೆಲೆ ಎಷ್ಟು? ಹೇಗಿವೆ ಫೀಚರ್ಸ್‌

ಫೋಟೋಗ್ರಫಿ ಎಂಬುದು ಬಹುತೇಕರಿಗೆ ಅಚ್ಚುಮೆಚ್ಚಿನ ಹವ್ಯಾಸವಾಗಿರುತ್ತದೆ. ಇದಕ್ಕೆ ಕ್ಯಾಮೆರಾವೇ ಬೇಕಿಲ್ಲ. ಉತ್ತಮ ಗುಣಮಟ್ಟದ ಕ್ಯಾಮೆರಾ ಇರುವ ಸ್ಮಾರ್ಟ್‌ಫೋನ್‌ ಇದ್ದರೆ ಸಾಕು. ಹೌದು, ಈ ಲೇಖನದಲ್ಲಿ ಫೋಟೋಗ್ರಫಿ ಪ್ರಿಯರ ನೆಚ್ಚಿನ ಫೋನ್‌ಗಳ ಬಗ್ಗೆ ತಿಳಿಸಲಾಗಿದೆ. ನೀವು ಫೋಟೋಗ್ರಫಿ ಪ್ರಿಯರಾಗಿದ್ದರೆ ಮತ್ತು ಉತ್ತಮ ಸ್ಮಾರ್ಟ್‌ಫೋನ್‌ ಹುಡುಕುತ್ತಿದ್ದರೆ, ಇದು ನಿಮಗೆ ಸಹಾಯವಾಗಲಿದೆ. ನಾವು ನಿಮಗಾಗಿ ಈ ಕೆಲವು ಮೊಬೈಲ್‌ಗಳ ಪಟ್ಟಿಯನ್ನು ತಿಳಿಸಿದ್ದೇವೆ. ಈ ಪಟ್ಟಿಯಲ್ಲಿ 200 ಮೆಗಾಪಿಕ್ಸೆಲ್ (200MP Camera Smartphones) ಕ್ಯಾಮೆರಾ ಹೊಂದಿರುವ ಸ್ಮಾರ್ಟ್‌ಫೋನ್‌ಗಳಿವೆ.

ಹೌದು, ನೀವು 20,000 ರೂ.ನೀಂದ 1 ಲಕ್ಷ ರೂ. ವರೆಗಿನ ಸ್ಮಾರ್ಟ್‌ಫೋನ್‌ಗಳನ್ನು ಈ ಪಟ್ಟಿಯಲ್ಲಿ ಕಾಣಬಹುದು. ನಿಮ್ಮ ಬಜೆಟ್ ಕಡಿಮೆಯಿದ್ದರೆ, ನೀವು 20,000 ರೂ. ಬಜೆಟ್‌ನ ಸ್ಮಾರ್ಟ್‌ಫೋನ್‌ ಖರೀದಿಸಬಹುದು. ಒಂದು ವೇಳೆ ನಿಮ್ಮ ಬಜೆಟ್ ಹೆಚ್ಚಿದ್ದರೆ, ಉನ್ನತ ಶ್ರೇಣಿಯ ಸ್ಮಾರ್ಟ್‌ಫೋನ್‌ಗಳನ್ನು ಸಹ ಕೊಳ್ಳಬಹುದು. ಈ ಸ್ಮಾರ್ಟ್‌ಫೋನ್‌ಗಳಲ್ಲಿ 200 ಮೆಗಾಪಿಕ್ಸೆಲ್ ಕ್ಯಾಮೆರಾ ಲಭ್ಯವಿದೆ. ಜೊತೆಗೆ ಶಕ್ತಿಯುತ ಪ್ರೊಸೆಸರ್ ಮತ್ತು ದೊಡ್ಡ ಬ್ಯಾಟರಿಯೂ ಇದೆ.

200MP ಕ್ಯಾಮೆರಾ ಹೊಂದಿರುವ ಸ್ಮಾರ್ಟ್‌ಫೋನ್‌ಗಳಿವು! ಬೆಲೆ, ವಿಶೇಷತೆಗಳೇನು?

ಈ ಪಟ್ಟಿಯಲ್ಲಿ ಸ್ಯಾಮ್‌ಸಂಗ್ (Samsung), ಶಿಯೋಮಿ (Xiaomi) ಮತ್ತು ವಿವೋ (Vivo) ಕಂಪನಿಯ ಸ್ಮಾರ್ಟ್‌ಫೋನ್‌ಗಳನ್ನು ಒಳಗೊಂಡಿದೆ. 200 ಮೆಗಾಪಿಕ್ಸೆಲ್ ಕ್ಯಾಮೆರಾ ಹೊಂದಿರುವ ಸ್ಮಾರ್ಟ್‌ಫೋನ್‌ಗಳ ಬೆಲೆ ಮತ್ತು ಇತರೆ ವಿವರಗಳನ್ನು ತಿಳಿಯು ಮುಂದೆ ಓದಿ.

200MP ಕ್ಯಾಮೆರಾ ಹೊಂದಿರುವ ಸ್ಮಾರ್ಟ್‌ಫೋನ್‌ಗಳಿವು

ರೆಡ್ಮಿ ನೋಟ್ 13 ಪ್ರೊ

ರೆಡ್ಮಿ ನೋಟ್ 13 ಪ್ರೊ (Redmi Note 13 Pro) ಫೋನನ್ನು ಈ ವರ್ಷದ ಜನವರಿ ತಿಂಗಳಲ್ಲಿ ಬಿಡುಗಡೆ ಮಾಡಲಾಯಿತು. ಈ ಫೋನ್ ಸ್ಮಾಪ್‌ಡ್ರಾಗನ್ 7s ಜೆನ್ 2 ಪ್ರೊಸೆಸರ್ ಹೊಂದಿದೆ. ಫೋನಿನಲ್ಲಿ ಅಮೋಲೆಡ್ ಡಿಸ್ಪ್ಲೇ ಲಭ್ಯವಿದೆ. ಇದು 5100mAh ಸಾಮರ್ಥ್ಯದ ದೊಡ್ಡ ಬ್ಯಾಟರಿಯನ್ನು ಹೊಂದಿದೆ. ಈ ಫೋನ್ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದು 200 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ, 8 ಮೆಗಾಪಿಕ್ಸೆಲ್ ದ್ವಿತೀಯ ಮತ್ತು 2 ಮೆಗಾಪಿಕ್ಸೆಲ್ ತೃತೀಯ ಕ್ಯಾಮೆರಾ ಹೊಂದಿದೆ. ಇದು 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಹೊಂದಿದೆ. ನೀವು, 18,349 ರೂ.ಗಳ ಆರಂಭಿಕ ಬೆಲೆಯಲ್ಲಿ ರೆಡ್ಮಿ ನೋಟ್ 13 ಪ್ರೊ ಫೋನ್ ಖರೀದಿಸಬಹುದು.

ರೆಡ್ಮಿ ನೋಟ್ 13 ಪ್ರೊ ಪ್ಲಸ್

ರೆಡ್ಮಿ ನೋಟ್ 13 ಪ್ರೊ + (Redmi Note 13 Pro+) ಫೋನ್ 200 ಮೆಗಾಪಿಕ್ಸೆಲ್ ಕ್ಯಾಮೆರಾ ಹೊಂದಿದೆ. ಇದು ಸೆಲ್ಪಿ ಮತ್ತು ವಿಡಿಯೋ ಕರೆಗಾಗಿ, 16 ಮೆಗಾಪಿಕ್ಸೆಲ್ ಕ್ಯಾಮೆರಾ ಹೊಂದಿದೆ. ಇದು ಮೀಡಿಯಾಟೆಕ್ ಡೈಮೆನ್ಸಿಟಿ 7200 ಪ್ರೊಸೆಸರ್‌ನಲ್ಲಿ ಕೆಲಸ ಮಾಡುತ್ತದೆ. ಈ ಫೋನ್‌ 5000mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಬರುತ್ತದೆ. ಇದನ್ನು ಚಾರ್ಜ್‌ ಮಾಡಲು 120W ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ. ನೀವು ಈ ಮೊಬೈಲ್‌ ಅನ್ನು 23,739 ರೂ.ಗೆ ಖರೀದಿಸಬಹುದು.

ಸ್ಯಾಮ್‌ಸಂಗ್ ಗ್ಯಾಲಕ್ಸಿ S24 ಅಲ್ಟ್ರಾ

ಸ್ಯಾಮ್‌ಸಂಗ್ ಗ್ಯಾಲಕ್ಸಿ S24 ಅಲ್ಟ್ರಾ (Samsung Galaxy S24 Ultra) ಫೋನನ್ನು ಈ ವರ್ಷದ ಜನವರಿಯಲ್ಲಿ ಬಿಡುಗಡೆ ಮಾಡಲಾಯಿತು. ಈ ಮೊಬೈಲ್ 6.9 ಇಂಚಿನ ಡಿಸ್ಪ್ಲೇ ಹೊಂದಿದೆ. ಈ ಫೊನ್ ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಫೋನಿನಲ್ಲಿ 200 ಮೆಗಾಪಿಕ್ಸೆಲ್ + 50 ಮೆಗಾಪಿಕ್ಸೆಲ್ + 12 ಮೆಗಾಪಿಕ್ಸೆಲ್ + 10 ಮೆಗಾಪಿಕ್ಸೆಲ್ ಕ್ಯಾಮೆರಾ ಲಭ್ಯವಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಫೋನ್ 12 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಹೊಂದಿದೆ. ಈ ಫೋನ್ 5000mAh ಸಾಮರ್ಥ್ಯದ ದೊಡ್ಡ ಬ್ಯಾಟರಿ ಹೊಂದಿದೆ. ಈ ಫೋನಿನ ಆರಂಭಿಕ ಬೆಲೆ 1,21,999 ರೂ. ಆಗಿದೆ.

ವಿವೋ X200 ಪ್ರೊ

ವಿವೋ X200 ಪ್ರೊ (Vivo X200 Pro) ಫೋನ್ 6.78 ಇಂಚಿನ ಅಮೋಲೆಡ್ ಡಿಸ್ಪ್ಲೇ ಹೊಂದಿದೆ. ಇದು 4500 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಬೆಂಬಲ ಪಡೆದಿದೆ. ಇದು ಮೀಡಿಯಾಟೆಕ್ ಡೈಮೆನ್ಸಿಟಿ 9400 ಪ್ರೊಸೆಸರ್‌ನಲ್ಲಿ ಕೆಲಸ ನಿರ್ವಹಿಸುತ್ತದೆ. ಇದು 6000mAh ಸಾಮರ್ಥ್ಯದ ದೊಡ್ಡ ಬ್ಯಾಟರಿ ಹೊಂದಿದೆ. ಇದನ್ನು ಚಾರ್ಜ್ ಮಾಡಲು, 90W ಮತ್ತು 30W ವೈರ್‌ಲೆಸ್ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ. ಈ ಫೋನ್ 50 ಮೆಗಾಪಿಕ್ಸೆಲ್ + 50 ಮೆಗಾಪಿಕ್ಸೆಲ್ + 200 ಮೆಗಾಪಿಕ್ಸೆಲ್ ಕ್ಯಾಮೆರಾ ಹೊಂದಿದೆ. ಇದರಲ್ಲಿ 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಇದೆ. ಈ ಫೋನಿನ ಬೆಲೆ 94,999 ರೂ. ಆಗಿದೆ.

Best Mobiles in India

English summary
List of smartphones with 200MP camera: know price, features and more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+