Subscribe to Gizbot

ನಿಕಾನ್ Coolpix P7700 ಹೇಗಿದೆ ನೋಡಿ

Posted By: Super
ನಿಕಾನ್ Coolpix P7700 ಹೇಗಿದೆ ನೋಡಿ
ನಿಕಾನ್ ನ ಬಹು ಜನಪ್ರಿಯ ಕೂಲ್ ಪಿಕ್ಸ್ 'ಪಿ' ಸರಣಿಯ ಹೊಚ್ಚ ಹೊಸ ಕ್ಯಾಮರಾ Coolpix P7700. ಈ ಕ್ಯಾಮರಾದಲ್ಲಿ ಸಕತ್ ಫಾಸ್ಟ್ ಆಗಿ ಸರಣಿ ಶೂಟಿಂಗ್ (continuous shooting) ಮಾಡಬಹುದು.

ಉತ್ತಮ ಗುಣಮಟ್ಟದ ಚಿತ್ರಗಳನ್ನು ಇದರಿಂದ ಸುಲಭವಾಗಿ ತೆಗೆಯಬಹುದು. ಕೂಲ್ ಪಿಕ್ಸ್ ಪಿ 7700 ನಲ್ಲಿ 7.1 X ಆಪ್ಟಿಕಲ್ ಜೂಮ್ ಇದ್ದು NIKKOR ED ಗಾಜಿನ ಮಸೂರವಿದೆ.

ಗರಿಷ್ಠ ಅಪರ್ಚರ್ f/2 ಸಾಧಿಸಬಹುದು. 12.2 ಮೆಗಾ ಪಿಕ್ಸೆಲ್ CMOS ಸೆನ್ಸಾರ್ ಕೂಡಾ ಇದೆ.

1080p ಶ್ರೇಣಿಯಲ್ಲಿ ಸ್ಟಿರಿಯೋ ಸೌಂಡ್ ಗುಣಮಟ್ಟದ HD ವಿಡಿಯೋಗಳನ್ನು ರೆಕಾರ್ಡ್ ಮಾಡಬಹುದು. ಆಕರ್ಷಕ TFT LCD ಮ್ಯಾನಿಟರ್ ಹೊಂದಿರುವ ಈ ಕ್ಯಾಮರಾ BSI ತಂತ್ರಜ್ಞಾನವನ್ನು ಹೊಂದಿದೆ.

BSI ತಂತ್ರಜ್ಞಾನದ ಮೂಲಕ ಕಡಿಮೆ ಬೆಳಕಿನಲ್ಲೂ ಉತ್ತಮ ಚಿತ್ರ ತೆಗೆಯಬಹುದು. ಅಪ್ಟಿಕಲ್ ವ್ಯೂ ಫೈಂಡರ್ ಇದ್ದು ಸ್ವಲ್ಪ ತೂಕ ಜಾಸ್ತಿಯಾದರೂ ಉತ್ತಮ ವಿನ್ಯಾಸ ಹೊಂದಿದೆ.

ಮುಂಬರುವ ಹಬ್ಬ ಹರಿದಿನಗಳ ಋತುವಿನಲ್ಲಿ Coolpix P7700 ಸೇರಿದಂತೆ ಐದು ಕ್ಯಾಮರಾಗಳು ಮಾರುಕಟ್ಟೆಯಲ್ಲಿ ಗ್ರಾಹಕರ ಕೈಗೆ ಸಿಗಲಿದೆ. ಈ ಕ್ಯಾಮರಾಗಳ ಬೆಲೆ ತಿಳಿಯಲು ಸೆಪ್ಟೆಂಬರ್ ತಿಂಗಳ ಕೊನೆ ತನಕ ಕಾಯಬೇಕಿದೆ. ಅಕ್ಟೋಬರ್ ನಲ್ಲಿ ಮಾರುಕಟ್ಟೆಯಲ್ಲಿ ಎಲ್ಲೆಡೆ ಲಭ್ಯವಾಗುವ ನಿರೀಕ್ಷೆಯಿದೆ.

Read more about:
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot