ಫೋಟೋಗ್ರಫಿ ಪ್ರಿಯರಿಗೆ ನಿಕಾನ್ ನಿಂದ ಹೊಸ ಲೆನ್ಸ್ ಬಿಡುಗಡೆ
ಫೋಟೋಗ್ರಫಿ ಪ್ರಿಯರಿಗೊಂದು ಸಿಹಿಸುದ್ದಿ ಇದೆ. ವಿಶ್ವದ ಮೊದಲ ಸ್ಪೆಷಲ್ ವೈಶಿಷ್ಟ್ಯತೆಗಳಿರುವ ಲೆನ್ಸ್ ಒಂದನ್ನು ಮಾರುಕಟ್ಟೆಗೆ ಪರಿಚಯಿಸಲಾಗುತ್ತಿದೆ.ಅಪ್ಟಿಕಲ್ ತಯಾರಿಕಾ ಬ್ರ್ಯಾಂಡ್ ಅನ್ನಿಸಿಕೊಂಡಿರುವ ನಿಕಾನ್ ತನ್ನ ಮೊದಲ ಫಿಲ್ಟರ್ ಅಟ್ಯಾಚ್ ಮಾಡಬಹುದಾದ 14-30mm ಅಲ್ಟ್ರಾ ವೈಡ್ ಆಂಗಲ್ ಲೆನ್ಸ್ NIKKOR Z 14-30mm f/4 S ನ್ನು ಭಾರತದಲ್ಲಿ ಪರಿಚಯಿಸುತ್ತಿದೆ.

ಯಾವಾಗ ಬಿಡುಗಡೆ?
ಕಂಪೆನಿಯು ತಿಳಿಸುವಂತೆ ನಿಕಾನ್ Z ಸರಣಿಯ ಫೋಟೋಗ್ರಾಫರ್ ಗಳು ಇದೀಗ ಅಲ್ಟ್ರಾ ವೈಡ್ ಆಂಗಲ್ ಝೂಮ್ ಲೆನ್ಸ್ ನ್ನು ಎಂಜಾಯ್ ಮಾಡಬಹುದಾಗಿದೆ. ಇದು ಫೋರ್ಟೇಬಲ್, ಉತ್ತಮ ಆಪ್ಟಿಕಲ್ ಪ್ರದರ್ಶನ
ಹೊಸ NIKKOR Z 14-30mm f / 4 S. ನಲ್ಲಿ ಚುರುಕುತನ ಮತ್ತು ಕಾರ್ಯಸಾಧ್ಯತೆಯನ್ನು ಹೊಂದಿದೆ. ಮಾರ್ಚ್ ನಲ್ಲಿ ಈ ಪ್ರೊಡಕ್ಟ್ ಬಿಡುಗಡೆಗೊಳ್ಳಲಿದ್ದು ಬೆಲೆಯನ್ನು ಆಗಲೇ ಪ್ರಕಟಪಡಿಸಲಾಗುತ್ತದೆ.

ವೈಶಿಷ್ಟ್ಯತೆಗಳು:
ಹೊಸ z- ಮೌಂಟ್ ಸಿಸ್ಟಮ್ ನಿಂದ ಶಕ್ತಿಯುತವಾಗಿರುವ ಇದು ಸಂಪೂರ್ಣವಾಗಿ ಸಣ್ಣ ಕಿರಣದ ದೂರವನ್ನು ಬಳಸಿಕೊಳ್ಳುತ್ತದೆ. NIKKOR Z 14-30mm f/4 S ಎಸ್-ಲೈನ್ ಲೆನ್ಸ್ ನ ಭಾಗವಾಗಿರುತ್ತದೆ. ಇದು 14mm ವೈಡ್ ಆಂಗಲ್ ಅಪರ್ಚರ್ f/4 ನೊಂದಿಗೆ ವೈಡ್ ಆಂಗಲ್ 30mm ಜೊತೆಗೆ ಲೆನ್ಸ್ ನ್ನು ಹೊಂದಿದೆ ಎಂದು ಕಂಪೆನಿ ಹೇಳಿದೆ. ಲೆನ್ಸ್ ನ ಬದಲಾವಣೆ ಇಲ್ಲದೆ ವಿಭಿನ್ನ ಫೋಟೋಗ್ರಫಿಯನ್ನು ತೆಗೆಯುವುದಕ್ಕೆ ಇದು ನೆರವು ನೀಡುತ್ತದೆ.

ಕೋಟಿಂಗ್ ತಂತ್ರಜ್ಞಾನ:
ಕಂಪೆನಿಯು ತಿಳಿಸುವಂತೆ ಇದರಲ್ಲಿ ವಿಭಿನ್ನ ಕೋಟಿಂಗ್ ತಂತ್ರಜ್ಞಾನವನ್ನು ಅಳವಡಿಸಲಾಗಿರುತ್ತದೆ. ಅದರಲ್ಲಿ ನ್ಯಾನೋ ಕ್ರಿಸ್ಟಲ್ ಕೋಟ್ ಕೂಡ ಸೇರಿದ್ದು ಉತ್ತಮವಾಗಿರುವ ಫೋಟೋ ಮತ್ತು ವೀಡಿಯೋ ಕ್ಯಾಪ್ಚರ್ ಮಾಡುವುದಕ್ಕೆ ಸಹಾಯ ಮಾಡುತ್ತದೆ.

ವಿಶ್ವದ ಮೊದಲ ಸ್ಪೆಷಲ್ ಲೆನ್ಸ್:
ನಿಕಾನ್ ತಿಳಿಸುವಂತೆ ಇದು ವಿಶ್ವದ ಮೊದಲ FX-ಫಾರ್ಮೆಟ್ ಲೆನ್ಸ್ ಆಗಿದ್ದು ನೇರವಾಗಿ ಫಿಲ್ಟರ್ ಅಟ್ಯಾಚ್ ಮೆಂಟ್ ನ್ನು 14 mm ಫೋಕಲ್ ಲೆಂತ್ ನಲ್ಲಿ ಬೆಂಬಲಿಸುತ್ತದೆ. ವಿಭಿನ್ನ ಫಿಲ್ಟರ್ ಗಳು ಉದಾಹರಣೆಗೆ ಪೋಲರೈಸಿಂಗ್ ಫಿಲ್ಟರ್ ಮತ್ತು ನ್ಯೂಟ್ರಲ್ ಡೆನ್ಸಿಟಿ ಫಿಲ್ಟರ್ ಗಳ ಎಫೆಕ್ಟ್ ನ್ನು ಬಳಕೆದಾರರು ಎಂಜಾಯ್ ಮಾಡಬಹುದು.ಕನ್ವೆನ್ಷನಲ್ ಅಲ್ಟ್ರಾ ವೈಡ್ ಆಂಗಲ್ ಲೆನ್ಸ್ ನಲ್ಲಿ ಇದು ಸಾಧ್ಯವಾಗುವುದಿಲ್ಲ. ಕಂಪೆನಿಯ ಪ್ರಕಾರ ಇದು 82ಎಂಎಂ ವ್ಯಾಸದ ಫಿಲ್ಟರ್ ಅಟ್ಯಾಚ್ ಮೆಂಟ್ ಗೆ ಬೆಂಬಲವನ್ನು ನೀಡುತ್ತದೆ ಮತ್ತು ಸಣ್ಣ ,ಫ್ಲ್ಯಾಟ್ ಫ್ರಂಟ್ ಲೆನ್ಸ್ ಎಲಿಮೆಂಟ್ ಗೆ ಸಹಾಯಕವಾಗಿರುತ್ತದೆ. ಆಕ್ಟೀವ್ ಸಂದರ್ಬದಲ್ಲಿ ಶೂಟಿಂಗ್ ಮಾಡುವುದಕ್ಕೆ ಇದು ನೆರವಾಗುತ್ತದೆ. ಇದರ ಜೊತೆಗೆ ಡಸ್ಟ್-ಡ್ರಿಪ್ ರೆಸಿಸ್ಟೆಂಟ್ ಕೂಡ ಆಗಿದೆ.

ಸಾಜನ್ ಕುಮಾರ್ ಹೇಳಿಕೆ:
ಲೆನ್ಸ್ ವೈಶಿಷ್ಟ್ಯತೆಗಳ ಬಗ್ಗೆ ಮಾಹಿತಿ ನೀಡುವ ಜೊತೆಗೆ ಕ್ರಿಯೇಟಿವ್ ಆಗಿರುವ ಫೋಟೋಗ್ರಫಿಗೆ ಇದು ನೆರವಾಗುತ್ತದೆ ಎಂಬುದನ್ನು ನಿಕಾನ್ ಇಂಡಿಯಾದ ಮ್ಯಾನೇಜಿಂಗ್ ಡೈರೆಕ್ಟರ್ ಆಗಿರುವ ಸಾಜನ್ ಕುಮಾರ್ ಅವರು ತಿಳಿಸಿದ್ದಾರೆ.


Click it and Unblock the Notifications








