ಪೇಟಿಎಂ ಮಾಲ್ ಸೇಲ್: ₹ 40 ಸಾವಿರದೊಳಗೆ ಸಿಗ್ತಿವೆ ಬೆಸ್ಟ್ ಕ್ಯಾಮೆರಾಗಳು..!
ನೀವೇನಾದರೂ ಇತ್ತೀಚೆಗೆ ಕ್ಯಾಮರಾ ಖರೀದಿಸಬೇಕು ಎಂದು ಪ್ಲಾನ್ ಮಾಡುತ್ತಿದ್ದರೆ ಖಂಡಿತ ನಿಮಗೆ ಪೇಟಿಎಂ ಮಾಲ್ ನಲ್ಲಿ ಉತ್ತಮ ಆಫರ್ ಮತ್ತು ರಿಯಾಯಿತಿಗಳು ಲಭ್ಯವಾಗಲಿದೆ. ಸದ್ಯ ನಡೆಯುತ್ತಿರುವ ಪೇಟಿಎಂ ಮಾಲ್ ಮಹಾ ಕ್ಯಾಷ್ ಬ್ಯಾಕ್ ಸೇಲ್ ನಲ್ಲಿ ಡಿಎಸ್ಎಲ್ಆರ್ ಕ್ಯಾಮರಾಗಳು 8,000 ರುಪಾಯಿ ವರೆಗಿನ ಕ್ಯಾಷ್ ಬ್ಯಾಕ್ ಗಳಲ್ಲಿ ಲಭ್ಯವಾಗುತ್ತಿದೆ.

ಇಲ್ಲಿ ನಾವು 10 ಕ್ಯಾಮರಾಗಳ ಪಟ್ಟಿಯನ್ನು ನಿಮಗೆ ತಿಳಿಸುತ್ತಿದ್ದೇವೆ ಮತ್ತು ಇವು 40,000 ರುಪಾಯಿಗಿಂತ ಕಡಿಮೆ ಬೆಲೆಗೆ ಸದ್ಯ ನಿಮಗೆ ಲಭ್ಯವಾಗುತ್ತದೆ. ಅಷ್ಟೇ ಅಲ್ಲ ಕೆನಾನ್, ನಿಕಾನ್ ಮತ್ತು ಇತರೆ ಬ್ರ್ಯಾಂಡ್ ನ ಕ್ಯಾಮರಾಗಳು ಈ ಪಟ್ಟಿಯಲ್ಲಿದೆ.

ಕೆನಾನ್ EOS 1300D 18MP DSLR ಕ್ಯಾಮೆರಾ
ಸದ್ಯ ಈ ಕ್ಯಾಮರಾದ ಬೆಲೆ 27, 999. ಆದರೆ ಪೇಟಿಎಂ ಮಾಲ್ ನಿಮಗೆ 8,000 ರುಪಾಯಿಯ ಕ್ಯಾಷ್ ಬ್ಯಾಕ್ ನೀಡುತ್ತಿದೆ. ಅಂದರೆ ನೀವೀಗ 19,999 ರುಪಾಯಿಗೆ ಈ ಕ್ಯಾಮರಾವನ್ನು ಖರೀದಿಸಲು ಸಾಧ್ಯವಿದೆ.

ಕೆನಾನ್ EOS 1500D 24.1MP DSLR ಕ್ಯಾಮೆರಾ:
ಈ ಕ್ಯಾಮರಾಕ್ಕೆ 5,000 ರುಪಾಯಿಯ ಕ್ಯಾಷ್ ಬ್ಯಾಕ್ ಸೌಲಭ್ಯವಿದೆ. ಸದ್ಯ ಪೇಟಿಎಂ ಮಾಲ್ ನಲ್ಲಿ ನಿಮಗೆ 27,750 ರುಪಾಯಿಗೆ ಇದು ಲಭ್ಯವಾಗುತ್ತದೆ.

ನಿಕಾನ್ D3400 D-ZOOM 24.2MP DSLR ಕ್ಯಾಮೆರಾ:
ನಿಕಾನ್ D3400 D-ZOOM ನ ಬೆಲೆ 40,695. ಇದೀಗ 8,500 ರುಪಾಯಿ ಕ್ಯಾಷ್ ಬ್ಯಾಕ್ ಸೌಲಭ್ಯವಿದ್ದು ಈ DSLR ಕ್ಯಾಮರಾವನ್ನು 32,195 ರೂಪಾಯಿಗೆ ಖರೀದಿಸಬಹುದು.

ನಿಕಾನ್ D5300 Kit 24.2MP DSLR ಕ್ಯಾಮೆರಾ:
ಪೇಟಿಎಂ ಮಾಲ್ ನಲ್ಲಿ 6,000ರುಪಾಯಿಯ ಕ್ಯಾಷ್ ಬ್ಯಾಕ್ ಸೌಲಭ್ಯವನ್ನು ಈ ಕ್ಯಾಮರಾಕ್ಕೆ ನೀಡಲಾಗುತ್ತಿದ್ದು 33,490 ರುಪಾಯಿಗೆ ಲಭ್ಯವಾಗುತ್ತದೆ. ಇದರ ಎಂಆರ್ ಪಿ ಬೆಲೆ 45,450 ರುಪಾಯಿಗಳು.

ಕೆನಾನ್ EOS 200D Kit 24.2MP DSLR ಕ್ಯಾಮೆರಾ:
ಈ DSLR ಕ್ಯಾಮೆರಾ 41,495 ರುಪಾಯಿಗೆ ಇ-ಕಾಮರ್ಸ್ ಸೈಟ್ ನಲ್ಲಿ ಮಾರಾಟಕ್ಕೆ ಲಭ್ಯವಿದೆ. 5,000 ರುಪಾಯಿ ಕ್ಯಾಷ್ ಬ್ಯಾಕ್ ಲಭ್ಯವಿದೆ. ಅಂದರೆ ಸದ್ಯ 36,495 ರುಪಾಯಿ ಬೆಲೆಗೆ ಲಭ್ಯವಿದೆ.

ನಿಕಾನ್ D3400 D-ZOOM KIT 24.2MP DSLR ಕ್ಯಾಮೆರಾ:
ನಿಕಾನ್ DSLR ಕ್ಯಾಮರಾವನ್ನು ನೀವು 32,195 ರೂಪಾಯಿಗೆ ಖರೀದಿಸಬಹುದಾಗಿದ್ದು 8,500 ರುಪಾಯಿ ಕ್ಯಾಷ್ ಬ್ಯಾಕ್ ಸೌಲಭ್ಯವಿದೆ.

ಕೆನಾನ್ EOS 1300D Kit 18MP DSLR ಕ್ಯಾಮೆರಾ:
ಪೇಟಿಎಂ ಮಾಲ್ ನಲ್ಲಿ 8,000 ರುಪಾಯಿ ಕ್ಯಾಷ್ ಬ್ಯಾಕ್ ಸೌಲಭ್ಯವಿದ್ದು ಇದನ್ನು ನೀವು 28,599 ರುಪಾಯಿಗೆ ಖರೀದಿಸಬಹುದು ಮತ್ತು ಇದರ ಎಂಆರ್ ಪಿ ಬೆಲೆ 36,599 ರುಪಾಯಿಗಳು.

ನಿಕಾನ್ D3300 24.2 MP DSLR ಕ್ಯಾಮೆರಾ:
ಈ ಕ್ಯಾಮರಾಕ್ಕೆ 3,150 ರುಪಾಯಿ ಕ್ಯಾಷ್ ಬ್ಯಾಕ್ ಇದೆ. ಹಾಗಾಗಿ 28,350 ರುಪಾಯಿ ಬೆಲೆಗೆ ಖರೀದಿಸಬಹುದು. ಸದ್ಯ ಇದರ ಬೆಲೆ 31,500 ರುಪಾಯಿಗಳಾಗಿದೆ.

ನಿಕಾನ್ D3500 Kit DSLR ಕ್ಯಾಮೆರಾ:
7000 ರುಪಾಯಿ ಕ್ಯಾಷ್ ಬ್ಯಾಕ್ ಸೌಲಭ್ಯವನ್ನು ಈ ಕ್ಯಾಮರಾದ ಮೇಲೆ ಪೇಟಿಎಂ ಮಾಲ್ ನೀಡುತ್ತಿದೆ. ಅಂದರೆ ನೀವು 30,197 ರುಪಾಯಿ ಬೆಲೆಗೆ ಖರೀದಿಸಬಹುದು. 37,197 ರುಪಾಯಿ ಇದರ ಎಂಆರ್ ಪಿ ಬೆಲೆ ಆಗಿದೆ.

ಕೆನಾನ್ EOS 3000D Kit 18 MP DSLR ಕ್ಯಾಮೆರಾ:
ಕೆನಾನ್ ನ ಈ ಕ್ಯಾಮರಾವನ್ನು ನೀವು 23,295 ರುಪಾಯಿ ಬೆಲೆಗೆ ಖರೀದಿ ಮಾಡುವ ಅವಕಾಶ ಗ್ರಾಹಕರಿಗಿದೆ. ಅಂದರೆ ಶೇ.15 ರಷ್ಟು ರಿಯಾಯಿತಿಯನ್ನು ಪೇಟಿಎಂ ಮಾಲ್ ನಲ್ಲಿ ನೀಡಲಾಗುತ್ತಿದೆ ಮತ್ತು 4,000 ರುಪಾಯಿಯ ಕ್ಯಾಷ್ ಬ್ಯಾಕ್ ಸೌಲಭ್ಯವನ್ನು ನೀಡಲಾಗುತ್ತಿದೆ. .


Click it and Unblock the Notifications








