ಹೊಸವರ್ಷಕ್ಕೆ ಸ್ಯಾಮ್‌ಸಾಂಗ್‌ನಿಂದ ಗ್ಯಾಲಕ್ಸಿ -3 ಪ್ಯಾಬ್ಲೆಟ್ ಬಿಡುಗಡೆ

By Super
|

ನೀವು ಸ್ಯಾಮ್‌ಸಾಂಗ್‌ ಮೊಬೈಲ್‌ ಪ್ರಿಯರಿಗೆ ಹೊಸ ವರ್ಷಕ್ಕೆ ಒಂದು ಗುಡ್‌ ನ್ಯೂಸ್. ಇತ್ತೀಚಿಗಷ್ಟೇ ಕೊರಿಯಾದ ಟೈಮ್ಸ್‌ ಮ್ಯಾಗಜಿನ್‌ ಸ್ಯಾಮ್‌ಸಾಂಗ್ ಗ್ಯಾಲಕ್ಸಿಯ 20 ಲಕ್ಷ ನೋಟ್‌ ಬುಕ್‌ ಮಾರುಕಟ್ಟೆಯಲ್ಲಿ ಖರೀದಿಯಾಗಿದೆ ಎಂದು ವರದಿ ನೀಡಿದ್ದರು. ಜನ ಈ ಗ್ಯಾಲಕ್ಸಿ ನೋಟ್‌ಗೆ ಮನಸೋತ ಹಿನ್ನೆಲೆಯಲ್ಲಿ ಈ ಶ್ರೇಣಿಯ ಅಪ್‌ಗ್ರೇಡೇಶನ್‌ ವರ್ಶನ್‌ನಲ್ಲಿ ಗ್ಯಾಲಕ್ಸಿ ನೋಟ್‌ 3 ನ್ನು ಸ್ಯಾಮ್‌ ಸಾಂಗ್‌ ಬಿಡುಗಡೆ ಮಾಡಲಿದೆ.

ಸ್ಮಾರ್ಟ್ ಫೋನ್‌ನಲ್ಲಿ ಹೇಗೆ ಸ್ಯಾಮ್‌ಸಾಂಗ್ ಮಾರುಕಟ್ಟೆಯಲ್ಲಿ ಶೈನ್‌ ಆಗುತ್ತಿದೆ ಆದೇ ರೀತಿ ನೋಟ್‌ ಬುಕ್‌ನಲ್ಲೂ ಶೈನ್‌ ಆಗುವಂತೆ ಹೊಸ ರೀತಿಯಲ್ಲಿ ಇದನ್ನು ವಿನ್ಯಾಸ ಮಾಡಿದ್ದಾರೆ. ಗ್ಯಾಲಕ್ಸಿ ನೋಟ್‌ 3 ದರ್ಶಕ (ಸ್ಕ್ರೀನ್) ಸಹ ದೊಡ್ಡದಿದೆ. ಗ್ಯಾಲಕ್ಸಿ -3 ಹೊಸ ಅಪಗ್ರೇಡೆಷನ್‌ ವರ್ಷನ್‌ನಲ್ಲಿ ಮಾರುಕಟ್ಟೆಗೆ ಬರಲಿದೆ.

ಹೊಸವರ್ಷಕ್ಕೆ ಸ್ಯಾಮ್‌ಸಾಂಗ್‌ನಿಂದ ಗ್ಯಾಲಕ್ಸಿ -3 ಪ್ಯಾಬ್ಲೆಟ್ ಬಿಡುಗಡೆ

ಗ್ಯಾಲಕ್ಸಿ ನೋಟ್‌ - 2 5.2 ಇಂಚು ಉದ್ದವಿದ್ದರೆ , ಈ ಗ್ಯಾಲಕ್ಸಿ- 3 6.3 ಇಂಚು ಉದ್ದವಿದೆ. ಗ್ಯಾಲಕ್ಸಿ ನೋಟ್ 3ನಲ್ಲಿ ಆಂಡ್ರಾಯ್ಡ್‌ 5.5 ಕೀ ಲೈಮ್‌ಪೈ ಆಪರೆಟಿಂಗ್‌ ಸಿಸ್ಟಮ್‌ ಹೊಂದಿದ್ದು ಹಿಂದುಗಡೆ 16 ಮೇಗಾಪಿಕ್ಸ್‌ಲ್‌ನ ಆಟೋ ಫೋಕಸ್‌ ಕ್ಯಾಮೆರಾ ನೀಡಲಾಗಿದ್ದು ಎಲ್ಇಡಿ ಫ್ಲ್ಯಾಶ್‌ ಮತ್ತು ಬಿಎಸ್‌ಐ ಇದೆ. ಎದುರುಗಡೆ 3 ಮೆಗಾಪಿಕ್ಸ್‌ಲ್‌ನ ಕ್ಯಾಮೆರಾ ಇದ್ದು ನೀವು ಉತ್ತಮ ಗುಣಮಟ್ಟದ ಫೊಟೋ ಮತ್ತು ವಿಡಿಯೋಗಳನ್ನು ತೆಗೆಯಬಹುದಾಗಿದೆ. ಅಲ್ಲದೇ ಮೂರು ರೀತಿಯ ಮೆಮೋರಿಯಲ್ಲಿ 32, 64 , 128 GBಯಲ್ಲಿ ಬಿಡುಗಡೆಯಾಗಲಿದೆ. 3GB RAM,ನೊಂದಿಗೆ 84.9 x 161.9 x 8.9 mm ಸುತ್ತಳತೆ ಹೊದಿದೆ. 4,000 mAh ಲಿಯಾನ್ ಬ್ಯಾಟರಿ ಇದ್ದು 220 ಗ್ರಾಂ ತೂಕವಿದೆ.

ಆದರೇ ಸ್ಯಾಮ್‌ಸಾಂಗ್ ಯಾವಾಗ ಗ್ಯಾಲಕ್ಸಿ ನೋಟ್‌ 3 ಬಿಡುಗಡೆ ಮಾಡುತ್ತದೆ ಎಂಬುದನ್ನು ಅಧಿಕೃತವಾಗಿ ಇನ್ನೂ ತಿಳಿಸಿಲ್ಲ. ಆದರೇ ಒಂದು ಕೆಲ ಟೆಕ್‌ ಮಾಹಿತಿ ಪ್ರಕಾರ ಜನವರಿ ಮಧ್ಯಭಾಗದಲ್ಲಿ ಈ ನೋಟ್‌ನ್ನು ಬಿಡುಗಡೆ ಮಾಡಲಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X