ಸೋನಿಯಿಂದ ಹೊಸ ಮಾದರಿಯ ಮಿರರ್ ಲೈಸ್ ಕ್ಯಾಮೆರಾ ಲಾಂಚ್..!

ಈ ಕ್ಯಾಮೆರಾದಲ್ಲಿ ISO 25600 ರಿಂದ ISO 32000 ವರೆಗೂಇದೆ ಎನ್ನಲಾಗಿದೆ. ಇದಲ್ಲದೇ ಈ ಕ್ಯಾಮೆರಾದಲ್ಲಿ ಅತೀ ವೇಗದ ಆಟೋಪೋಕಸ್ ಅನ್ನು ಕಾಣಬಹುದು ಎನ್ನಲಾಗಿದೆ.

By Lekhaka
|

ಸೋನಿ ಹೊಸ ಮಾದರಿಯ A7 ಸರಣಿಯ ಮಿರರ್ ಲೈಸ್ ಕ್ಯಾಮೆರಾಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. A7R III ಈ ಸರಣಿಗೆ ಹೊಸ ಸೇರ್ಪಡೆ ಎನ್ನಲಾಗಿದೆ. ನ್ಯೂಯಾರ್ಕ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಕ್ಯಾಮೆರಾವನ್ನು ಲಾಂಚ್ ಮಾಡಲಾಗಿದೆ. 2015ರಲ್ಲಿ ಬಿಡುಗಡೆಯಾಗಿದ್ದ A7R II ಕ್ಯಾಮೆರಾದ ಮುಂದುವರೆದ ಭಾಗವಾಗಿದ್ದು, ಗಾತ್ರದಲ್ಲಿ ಸಣ್ಣದಾದರು ಉತ್ತಮ ಕ್ವಾಲಿಟಿಯನ್ನು ಹೊಂದಿದೆ.

ಸೋನಿಯಿಂದ ಹೊಸ ಮಾದರಿಯ ಮಿರರ್ ಲೈಸ್ ಕ್ಯಾಮೆರಾ ಲಾಂಚ್..!

A7R III ಕ್ಯಾಮೆರಾದಲ್ಲಿ 42.2MP BSL CMOS ಸೆನ್ಸಾರ್ ಅನ್ನು ಕಾಣಬಹುದಾಗಿದೆ. ಇದು LSI ಸೆನ್ಸರ್ ಆಗಿದ್ದು, ದ್ವಿಗುಣ ವೇಗವನ್ನು ಹೊಂದಿದ ಎಂದು ಸೋನಿ ತಿಳಿಸಿದೆ. ಈ ಹಿಂದಿನ ಕ್ಯಾಮೆರಾಗಿಂತಲೂ ವೇಗವಾಗಿ ಕಾರ್ಯನಿರ್ವಹಿಸಲಿದ್ದು, ಉತ್ತಮ ಚಿತ್ರಗಳನ್ನು ಸೆರೆಹಿಡಿಯಲಿದೆ.

ಈ ಕ್ಯಾಮೆರಾದಲ್ಲಿ ISO 25600 ರಿಂದ ISO 32000 ವರೆಗೂಇದೆ ಎನ್ನಲಾಗಿದೆ. ಇದಲ್ಲದೇ ಈ ಕ್ಯಾಮೆರಾದಲ್ಲಿ ಅತೀ ವೇಗದ ಆಟೋಪೋಕಸ್ ಅನ್ನು ಕಾಣಬಹುದ್ದಾಗಿದ್ದು, ಇದಲ್ಲದೇ ಈ ಕ್ಯಾಮೆರಾದಲ್ಲಿ OLED ಎಲೆಕ್ಟ್ರಾನಿಕ್ ವಿವ್ ಫೈಂಡರ್ ಅನ್ನು ಅಳವಡಿಸಲಾಗಿದೆ.

ಇನ್ ಸ್ಟಾಗ್ರಾಮ್ ನಲ್ಲಿ ಸ್ನೇಹಿತರೊಂದಿಗೆ ಒಟ್ಟಾಗಿ ಲೈವ್ ವಿಡಿಯೋ ಮಾಡಿ..	!ಇನ್ ಸ್ಟಾಗ್ರಾಮ್ ನಲ್ಲಿ ಸ್ನೇಹಿತರೊಂದಿಗೆ ಒಟ್ಟಾಗಿ ಲೈವ್ ವಿಡಿಯೋ ಮಾಡಿ.. !

ಸೋನಿ A ಸರಣಿಯ ಕ್ಯಾಮೆರಾಗಳು ವಿಡಿಯೋಗ್ರಫಿಗೆ ಹೇಳಿ ಮಾಡಿಸಿದಂತಾಗಿದ್ದು, ಈ ಹೊಸ A7R III ಸಹ ವಿಡಿಯೋ ಮಾಡಲು ಅತ್ಯುತ್ತಮವಾದ ಕ್ಯಾಮೆರಾ ಎನ್ನಲಾಗಿದೆ. ಈ A7R III ಕ್ಯಾಮೆರಾ ನವೆಂಬರ್ ನಿಂದ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳಲಿದ್ದು, ಬೆಲೆ $ 3,200(ಸರಿ ಸುಮಾರು ರೂ.2,08,100) .

Best Mobiles in India

Read more about:
English summary
Sony A7R III is the latest addition to its A7 series of mirrorless cameras. The camera will start shipping in November for $3200 (approx. Rs. 2,08,100)

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X