ಜಾದೂ ಮಾಡಲಿರುವ ಈ ಸಣ್ಣ ಕ್ಯಾಮೆರಾ

Written By:

ಜಗತ್ತು ನಮ್ಮನ್ನು ಬದಲು ಮಾಡುತ್ತದೆ ಅಂತ ಹೇಳ್ತಾರೆ ಇದು ಅಕ್ಷರಶಃ ನಿಜ ಎಬುದಕ್ಕೆ ಸಾಕ್ಷಿ ಮುಂದುವರಿದ ತಂತಜ್ಞಾನ. ದಿನದಿಂದ ದಿನಕ್ಕೆ ಹೊಸತನ್ನು ಅನ್ವೇಷಿಸುವ ಅದನ್ನು ನಮ್ಮಲ್ಲಿ ತುಂಬುವಂತೆ ಮಾಡುವ ತಂತ್ರಗಾರಿಕೆ ನಿಜಕ್ಕೂ ಆಶ್ಚರ್ಯವನ್ನುಂಟು ಮಾಡುತ್ತದೆ.

ನಾವು ಹೊಸದನ್ನು ನಮ್ಮದಾಗಿಸಿಕೊಳ್ಳುವ ಮುಂಚೆ ಅಥವಾ ಅದನ್ನು ಖರೀದಿಸುವ ಮುಂಚೆ ಸಾವಿರ ಬಾರಿ ಆಲೋಚಿಸುತ್ತೇವೆ. ಅದರ ಬಗ್ಗೆ ವಿಷಯಗಳನ್ನು ಸಂಗ್ರಹಿಸುತ್ತೇವೆ. ಮತ್ತೊಬ್ಬರಲ್ಲಿ ಅದನ್ನು ಕುರಿತು ಚರ್ಚಿಸುತ್ತೇವೆ. ಆದರೆ ತಂತ್ರಜ್ಞಾನ ರಂಗದಲ್ಲಿ ಈ ಯೋಚನೆ ಒಮ್ಮೊಮ್ಮೆ ನಮ್ಮನ್ನು ಮೀರಿ ಹೋಗಿರುತ್ತದೆ.

ಜಾದೂ ಮಾಡಲಿರುವ ಈ ಸಣ್ಣ ಕ್ಯಾಮೆರಾ

ಏಕೆಂದರೆ ಇಲ್ಲಿ ಇಂದು ನೋಡಿದ್ದನ್ನು ನಮಗೆ ನಾಳೆ ನೋಡಲಾಗುವುದಿಲ್ಲ ಅದರ ಮತ್ತೊಂದು ಹೊಸ ಆವೃತ್ತಿ ತನ್ನ ಹುಟ್ಟನ್ನೇ ಮರೆಮಾಚಿ ಬಂದು ನಿಂತಿರುತ್ತದೆ. ಹೀಗೆ ತನಗೆ ತಾನೇ ಪೈಪೋಟಿ ನೀಡುತ್ತಾ ಮುಂದುವರಿಯುವ ರಂಗವಾಗಿದೆ ತಂತ್ರಜ್ಞಾನ...

ಇಂದಿನ ಲೇಖನದಲ್ಲಿ ನಾವು ವಿಶಿಷ್ಟವಾದುದನ್ನು ಕುರಿತು ಚರ್ಚಿಸೋಣ. ಫೋಟೋ ತೆಗೆಯುವುದು ಯಾರಿಗೆ ಇಷ್ಟವಿಲ್ಲ. ಹೇಳಿ. ಫೋಟೋ ತೆಗೆಯುವುದು ತೆಗಿಸಿಕೊಳ್ಳುವುದು ಒಂದು ಹವ್ಯಾಸ. ಈ ಫೋಟೋ ತೆಗೆಯುವ ಸಾಧನ ಕ್ಯಾಮೆರಾ ಅದರಲ್ಲೂ ಅತ್ಯಾಧುನಿಕ ಫೋಟೋವನ್ನು ತೆಗೆಯುವ ಕ್ಯಾಮೆರಾ ನಿಜಕ್ಕೂ ಅದ್ಭುತ ವಿಷಯವಾಗಿದೆ.

ಗೂಗಲ್ ಸ್ಟ್ರೀಟ್ ವ್ಯೂ, ಆಪಲ್‌ನ ಐಫೋನ್ ಪನೋರಮಿಕ್ ಫೋಟೋಗಳನ್ನು ಹೇಗೆ ಕ್ಯಾಪ್ಚರ್ ಮಾಡುತ್ತೋ ಹಾಗೆಯೇ ಎಚ್‌ಡಿ ಗುಣಮಟ್ಟದ ಫೋಟೋ ತೆಗೆಯುವ ನಿಷ್ಣಾತ ಸಣ್ಣ ಯುಎಫ್‌ಒ - ಸ್ಟೈಲ್ ಕ್ಯಾಮೆರಾ ಮಾರುಕಟ್ಟೆಗೆ ಬಂದಿದೆ.

ಆಪಲ್‌ನ ಮಾಜಿ ಉದ್ಯೋಗಿಗಳು ನಿರ್ಮಿಸಿದ ಈ ಕ್ಯಾಮೆರಾದ ಕೇಂದ್ರವನ್ನು ಸುಂದರವಾಗಿ ನಿರ್ಮಿಸಲಾಗಿದೆ. ಹಸ್ತದ ಗಾತ್ರದಲ್ಲಿರುವ ಈ ಕ್ಯಾಮೆರಾವನ್ನು ನಿಮ್ಮ ಸ್ಮಾರ್ಟ್‌ಫೋನ್ ಅಥವಾ ಟ್ಯಾಬ್ಲೆಟ್‌ನೊಂದಿಗೆ ನಿಯಂತ್ರಿಸಬಹುದಾಗಿದೆ.

ಈ ಕ್ಯಾಮೆರಾದಲ್ಲಿ ನೀವು 360 ಡಿಗ್ರಿಯ ಹೈ ಡೆಫಿನೇಶನ್ ವೀಡಿಯೋವನ್ನು ಚಿತ್ರೀಕರಿಸಬಹುದಾಗಿದ್ದು ಈ ಗುಣಮಟ್ಟಕ್ಕಾಗಿ ಕ್ಯಾಮೆರಾ ತಂಡ ಬಹುವಾಗಿ ಶ್ರಮಿಸುತ್ತಿದೆ. ಇದು ಸೇನೆ, ಕ್ರೀಡಾ ಸಂಸ್ಥೆ ಹಾಗೂ ರೆಡ್ ಬುಲ್ ಮತ್ತು ನ್ಯಾಶನಲ್ ಜಿಯೋಗ್ರಾಫಿಕ್ ಸಂಸ್ಥೆಗಳಿಗೆ ಸಹಕಾರಿಯಾಗಲಿದೆ.

ಕ್ಯಾಮೆರಾ ಕ್ಯಾಲಿಬ್ರೇಶನ್ ಬಳಸಿಕೊಂಡು ಪನೋರಮಿಕ್ ವೀಡಿಯೋಗಳನ್ನು ನೈಜ ಸಮಯದಲ್ಲಿ ಚಿತ್ರಿಸಲಿದ್ದು ಇದು ನೈಜ ಗುಣಮಟ್ಟವನ್ನು ಬಳಕೆದಾರರರಿಗೆ ನೀಡಲಿದೆ ಎಂದು ಕಂಪೆನಿ ತಿಳಿಸಿದೆ. ಎರಡು ಗಂಟೆಗಳ ಬ್ಯಾಟರಿ ಲೈಫ್ ಅನ್ನು ನೀಡಲಿರುವ ಇದು ಆರು ಗಂಟೆಗಳ ಸ್ಟ್ಯಾಂಡ್ ಬೈ ಶೂಟಿಂಗ್ ಅನ್ನು ನೀಡಲಿದೆ.

ಅಂತೂ ಈ ಕ್ಯಾಮೆರಾ ಸಣ್ಣದಾದರೂ ಮಾಡುವ ಕರಾಮತ್ತು ಮಾತ್ರ ಊಹೆಗೂ ನಿಲುಕದ್ದು ಎಂದೇ ಹೇಳಬಹುದು.

Read more about:
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot