Subscribe to Gizbot

ವಾಟರ್ ಪ್ರೂಫ್ 360 ಡಿಗ್ರಿ ಕ್ಯಾಮೆರಾ ಕರಾಮತ್ತು ಬಲ್ಲಿರಾ?

Written By:

ಫೇಸ್‌ಬುಕ್‌ ಮಾಲೀಕತ್ವದ ಒಕ್ಯುಲಸ್ ರಿಫ್ಟ್ ಉತ್ತಮವಾಗಿ ಚಲಾವಣೆಯಾಗುತ್ತಿರುವ ದಾರಿಯಲ್ಲೇ, ಪನೋರಮಿಕ್ ವೀಡಿಯೋ ಮತ್ತು ಚಿತ್ರಗಳು ಈಗ ಹೆಚ್ಚು ಪ್ರಖ್ಯಾತಿಯನ್ನು ಪಡೆಯುತ್ತಿವೆ. ಈಗ ಇಂತಹದೇ ಮಾದರಿಯ ಪನೋರಮಿಕ್ ವೀಡಿಯೋ ಕ್ಯಾಮೆರಾವೊಂದು ಹೊರಬಂದಿದ್ದು ಇದು ವಾಟರ್ ಪ್ರೂಪ್ ಆಗಿದೆ.

ಫ್ರಾನ್ಸ್ ಮೂಲದ ಗಿರೋಪ್ತಿಕ್ ರಚಿಸಿದಂತಹ ಕ್ಯಾಮೆರಾ ಇದಾಗಿದ್ದು ಸರಾಸರಿ ಬಳಕೆದಾರರಿಗಾಗಿ ಇದು ಉತ್ತಮವಾಗಿದೆ. ನೀವು ಈ ಕ್ಯಾಮೆರಾವನ್ನು ಬಳಸಿಕೊಂಡು ಫೋಟೋ, ವೀಡಿಯೋವನ್ನು ತೆಗೆಯಬಹುದಾಗಿದೆ. ಈ ಕ್ಯಾಮೆರಾ ಉಚಿತ ಆಂಡ್ರಾಯ್ಡ್ ಮತ್ತು ಐಒಎಸ್‌ನೊಂದಿಗೆ ಬಂದಿದ್ದು ಮೈಕ್ರೋಫೋನ್‌ಗಳು, ಯುಎಸ್‌ಬಿ ಚಾರ್ಜಿಂಗ್ ಪೋರ್ಟ್ ಹಾಗೂ ಎಸ್‌ಡಿ ಕಾರ್ಡ್ ಸ್ಲಾಟ್ ಅನ್ನು ಒಳಗೊಂಡಿದೆ.

ವಾಟರ್ ಪ್ರೂಫ್ 360 ಡಿಗ್ರಿ ಕ್ಯಾಮೆರಾ ಕರಾಮತ್ತು ಬಲ್ಲಿರಾ?

ಈ ಕ್ಯಾಮೆರಾದಲ್ಲಿ ನೀಲಿ ಹಾಗೂ ಕಪ್ಪು ಬಣ್ಣದ ಪ್ಲಾಸ್ಟಿಕ್ ಎಗ್‌ನಂತಹ ಶೆಲ್ ಇದ್ದು, ನಿಮಗೆ ಎಚ್‌ಡಿ ಗುಣಮಟ್ಟದ ವೀಡಿಯೋ, ಫೋಟೋವನ್ನು ತೆಗೆಯಲು ಅನುಮತಿಸುತ್ತದೆ. ಇದು ಉತ್ತಮವಾದ ವೀಡಿಯೋ ಪ್ಲೇಯರ್ ಅನ್ನು ಕೂಡ ಹೊಂದಿದ್ದು ವಾಟರ್‌ಪ್ರೂಫ್ ಆಗಿರುವುದರಿಂದ ನೀರಿನಲ್ಲಿ ಕೂಡ ವೀಡಿಯೋ, ಫೋಟೋ ತೆಗೆಯಲು ಇದು ನಿಮ್ಮನ್ನು ಅನುಮತಿಸುತ್ತದೆ. ಈ ಕ್ಯಾಮೆರಾ ವಿಭಿನ್ನ ರೀತಿಯ ಕನ್ನಡಕವನ್ನು ಹೊಂದಿದ್ದು ಇದು ನಿಮಗೆ ಫೋಟೋ ತೆಗೆಯುವುದನ್ನು ಸುಲಭಗೊಳಿಸಲಿದೆ.

ನೀವು ಇದನ್ನು ಚಾರ್ಜ್ ಮಾಡುತ್ತಿರುವಾಗ ಅದು ಎಲ್ಲಿದ್ದರೂ ಈ ಕ್ಯಾಮೆರಾವನ್ನು ನಿಮಗೆ ಗಮನಿಸಬಹುದಾಗಿದೆ. ಏಕೆಂದರೆ ಇದರಲ್ಲಿರುವ ಅಡಾಪ್ಟರ್ ಇಂತಹ ವ್ಯವಸ್ಥೆಯನ್ನು ತನ್ನ ಮಾಲೀಕನಿಗೆ ಕೊಡುಗೆಯನ್ನಾಗಿಸಿದೆ.

ಕೆಲವೇ ದಿನಗಳಲ್ಲಿ ಈ ಕ್ಯಾಮೆರಾ ಮಾರುಕಟ್ಟೆಗೆ ಬರಲಿದ್ದು ನವೆಂಬರ್ ತಿಂಗಳಲ್ಲೇ ಖರೀದಿಸುವ ಗ್ರಾಹಕರ ಕೈ ಸೇರಲಿದೆ. ಕ್ಯಾಮೆರಾದ ವಿಶೇಷತೆ ವಾಟರ್‌ಪ್ರೂಫ್ ಆಗಿರುವುದರಿಂದ ನಿಮಗೆ ಎಲ್ಲಾ ರೀತಿಯ ಅನುಕೂಲಗಳನ್ನು ಇದು ಮಾಡಿಕೊಡಲಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot