ವಿಶ್ವದ ಅತ್ಯಂತ ದುಬಾರಿ ಕ್ಯಾಮೆರಾ !

Posted By: Varun
ವಿಶ್ವದ ಅತ್ಯಂತ ದುಬಾರಿ ಕ್ಯಾಮೆರಾ !
ಕ್ಯಾಮರಾ ಕಂಡುಹಿಡಿದ ಮೇಲೆ ನಾವು ಜಗತ್ತನ್ನು ನೋಡುವ, ಅನುಭವಿಸುವ ರೀತಿಯೇ ಬದಲಾಗಿದೆ. ಸುತ್ತಮುತ್ತಲಿನ ಪರಿಸರ, ನಮ್ಮ ನಡುವಿನ ಜನ, ನಮ್ಮ ರಸ್ತೆ, ನಗರ, ದೇಶ, ನಮ್ಮ ದಿನನಿತ್ಯ ಚಟುವಟಿಕೆಗಳು, ನಮ್ಮ ಸಂಭ್ರಮ, ಆಚರಣೆಗಳು, ಈ ರೀತಿ ಎಲ್ಲವನ್ನೂ ಮನಸ್ಸಿನಿಂದ ಅನುಭವಿಸಿ ಅದನ್ನು ಕ್ಯಾಮರಾದ ಮೂಸೆಯಲ್ಲಿ ಸೆರೆ ಹಿಡಿಯುವುದೇ ಒಂದು ಮಜವಾದ ಅನುಭವ.

ಅಷ್ಟರ ಮಟ್ಟಿಗೆ ಕ್ಯಾಮರಾ ನಮ್ಮನ್ನು ಕಾಡುತ್ತದೆ, ಪೋಸ್ ಕೊಡುವಂತೆ ಆಸೆ ಹುಟ್ಟಿಸುತ್ತದೆ, ಖಾಸಗಿ ಬದುಕನ್ನು ಮತ್ತಷ್ಟು ಮಧುರಗೊಳಿಸುತ್ತದೆ. ಇಷ್ಟೆಲ್ಲಾ ಮಾಡುವ ಕ್ಯಾಮರಾಗಳು ಸಾವಿರ ರೂಪಾಯಿಯಿಂದ ಹಿಡಿದು ಲಕ್ಷಾಂತರ ರೂಪಾಯಿಗಳ ವರೆಗೆ ಬೆಲೆ ಬಾಳುತ್ತವೆ. ಕೆಲವರಿಗೆ ಅದು ಹುಚ್ಚು ಹಿಡಿಸಿದರೆ ಇನ್ನೂ ಕೆಲವರಿಗೆ ಅದು ವಿಶೇಷ ಕಾರ್ಯಕ್ರಮಗಳಲ್ಲಿ ಮಾತ್ರ ಬಳಸುವ ವಸ್ತುವಾಗಿದೆ.

ಇನ್ನೂ ಕೆಲವರಿಗೆ ಅದು ಸಂಗ್ರಹ ಮಾಡುವ ವಸ್ತುವಾಗಿದ್ದು, ಈಗ ಅಂಥದ್ದೇ ಒಬ್ಬ ಕ್ಯಾಮರಾ ಕ್ರೇಜಿ ಮನುಷ್ಯ ಜರ್ಮನಿ ದೇಶದ ಪ್ರಖ್ಯಾತ ಕ್ಯಾಮರಾ ಉತ್ಪಾದಕ 'Leica' ದ 1923 ಇಸವಿಯ ಮಾಡೆಲ್ ಅನ್ನು ವಿಯೆನ್ನಾದಲ್ಲಿ ನಡೆದ ಹರಾಜಿನಲ್ಲಿ 2.8 ಮಿಲಿಯನ್ ಡಾಲರ್ (ಸುಮಾರು 15.4 ಕೋಟಿ ಡಾಲರ್) ಕೊಟ್ಟು ಖರೀದಿಸಿ, ವಿಶ್ವದ ಅತ್ಯಂತ ದುಬಾರಿ ಕ್ಯಾಮರಾವನ್ನು ಖರೀದಿಸಿದ ಕೀರ್ತಿಗೆ ಪಾತ್ರವಾಗಿದ್ದಾನೆ.

Leica 0 ಸರಣಿಯ ಈ ಕ್ಯಾಮರಾಗೆ ಯಾಕಿಷ್ಟು ಬೆಲೆ ಎಂದರೆ ಇದು ಆ ಕಂಪನಿ ಉತ್ಪಾದನೆ ಮಾಡಿದ ಮೊದಲ ಬ್ಯಾಚ್ ನ ಕ್ಯಾಮರಾ ಆಗಿದ್ದು, ಆ ಕಾಲಕ್ಕೇ 31 ಸಾವಿರ ಡಾಲರ್ ಬೆಲೆಗೆ ಮಾರಾಟವಾಗುತ್ತಿತ್ತಂತೆ!

1923 ಮಾಡೆಲ್ ನ ಈ ಕ್ಯಾಮರಾ ಈಗಲೂ ಸಮರ್ಪಕವಾಗಿ ಕೆಲಸ ಮಾಡುತ್ತಿದ್ದು, ಆಗ ಉತ್ಪಾದನೆ ಮಾಡಲಾಗಿದ್ದ ಸುಮಾರು 25 ಕ್ಯಾಮರಾಗಳಲ್ಲಿ ಈಗ ಕೇವಲ 12 ಕ್ಯಾಮರಾಗಳು ಮಾತ್ರ ಉಳಿದುಕೊಂಡಿವೆಯಂತೆ.

ಅದಕ್ಕೆ ಹೇಳೋದು, ಹಳೇ ಪಾತ್ರೆ, ಹಳೇ ಸಾಮಾನು, ಏನೇ ಇದ್ದರೂ ಬಿಸಾಕಬೇಡಿ, ಒಂದಲ್ಲಾ ಒಂದು ದಿನ ಅದಕ್ಕೆ ಬೆಲೆ ಬಂದೇ ಬರುತ್ತೆ ಅಂತ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot