ರಿಲಯನ್ಸ್ ಸಿ.ಡಿ.ಎಂ.ಎ ಟ್ಯಾಬ್ಲೆಟ್ ದೇಶದಲ್ಲೇ ಮೊದಲು

By Varun
|
ರಿಲಯನ್ಸ್ ಸಿ.ಡಿ.ಎಂ.ಎ ಟ್ಯಾಬ್ಲೆಟ್ ದೇಶದಲ್ಲೇ ಮೊದಲು

ರಿಲಯನ್ಸ್ ಕಮ್ಯೂನಿಕೇಶನ್ ಮೊಟ್ಟಮೊದಲ ಬಾರಿಗೆ ಭಾರತದಲ್ಲಿ ಸಿ.ಡಿ.ಎಂ.ಎ ಟ್ಯಾಬ್ಲೆಟ್ ಅನ್ನು ಬಿಡುಗಡೆ ಮಾಡಿದೆ. ಇದರಿಂದಾಗಿ ಸಿಮ್ ಹಾಗು ಸಿ.ಡಿ.ಎಂ.ಎ ಎರಡೂ ತಂತ್ರಜ್ಞಾನದ ಟ್ಯಾಬ್ಲೆಟ್ ಬಿಡುಗಡೆ ಮಾಡಿರುವ ಮೊದಲ ಭಾರತೀಯಕಂಪನಿಯಾಗಿದೆ.

ರಿಲಯನ್ಸ್ ನ ಸಿ.ಡಿ.ಎಂ.ಎ ನೆಟ್ವರ್ಕಿನಿಂದ ಸಾವಿರಕ್ಕೂ ಹೆಚ್ಚು ನಗರ ಹಾಗು ಹಳ್ಳಿಗಳಿಗೆ ಸೇವೆ ಒದಗಿಸುತ್ತಿದ್ದು, ಹಳ್ಳಿಗಳಲ್ಲೂ ಇಂಟರ್ನೆಟ್ ಉಪಯೋಗಿಸಬಹುದಾಗಿದೆ.

ಈ ಟ್ಯಾಬ್ಲೆಟ್ ನ ಫೀಚರ್ ಗಳು ಈ ರೀತಿ ಇವೆ:

  • 7-ಇಂಚಿನ ಕೆಪಾಸಿಟಿವ್ ಟಚ್ ಸ್ಕ್ರೀನ್

  • ಆಂಡ್ರಾಯ್ಡ್ 2.3 ಓ.ಎಸ್.

  • 397 ಗ್ರಾಂ ತೂಕ

  • 2 ಮೆಗಾಪಿಕ್ಸೆಲ್ ಕ್ಯಾಮೆರಾ (ಡ್ಯುಯಲ್)

  • 512 MB ​​RAM

  • ಮೈಕ್ರೋ SD ಕಾರ್ಡ್ ಸ್ಲಾಟ್.

  • ಉಚಿತ 4GB ಎಸ್ಡಿ ಕಾರ್ಡ್

  • 32 ಜಿಬಿವರೆಗೋ ವಿಸ್ತರಿಸಬಹುದಾದ ಮೆಮೊರಿ.

ಮೊಬೈಲ್ ಟಿವಿ, ಧ್ವನಿ ಕರೆ, ಜಿಪಿಎಸ್ ವೀಡಿಯೋ ಮುದ್ರಣ.ಇದಲ್ಲದೆ ಈ ಟ್ಯಾಬ್ಲೆಟ್ ಜೊತೆಗೆ 15 ಜನಪ್ರಿಯ ಆಪ್ ಗಳು ಹಾಗು ಮಾಹಿತಿ ಸೇವೆಗಳು (ಬ್ರೌಸಿಂಗ್, ಸಂಚರಣೆ ನಕ್ಷೆಗಳು ಮತ್ತು ಹುಡುಕಾಟ), ಸೇವೆ (ಇಮೇಲ್, ಬ್ಲಾಗ್, ಎಸ್.ಎಂ.ಎಸ್ , ಮತ್ತು ಎಂ.ಎಂ.ಎಸ್), ಮನರಂಜನಾ ಸೇವೆ(ಸಂಗೀತ, ವೀಡಿಯೊ, ಮತ್ತು ಆಟಗಳು), ಮತ್ತು ಸಾಮಾಜಿಕ ನೆಟ್ವರ್ಕಿಂಗ್ ಸೇವೆಗಳು (ಫೇಸ್ಬುಕ್) ಪ್ರೀಲೋಡ್ ಆಗಿ ಬರಲಿದೆ.

ಈ ಸಾಧನದ ಬೆಲೆ 12,999 ರೂಪಾಯಿ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X