ಆಪಲ್ ನ್ಯೂ ಐಪ್ಯಾಡ್ ಒಳಗಿನ ಬಿಡಿಭಾಗ ಯಾರದು?

Posted By: Varun
ಆಪಲ್ ನ್ಯೂ ಐಪ್ಯಾಡ್ ಒಳಗಿನ ಬಿಡಿಭಾಗ ಯಾರದು?

ಜಗತ್ತಿನಾದ್ಯಂತ ಆಪಲ್ ಅಭಿಮಾನಿಗಳು ಇಂದು ಸಂತಸ ಪಡುವ ದಿನ. ಏಕೆಂದರೆ ಅಮೇರಿಕಾ ಸೇರಿದಂತೆ 10 ದೇಶಗಳಲ್ಲಿ ಆಪಲ್ ನ ನ್ಯೂ ಐಪ್ಯಾಡ್ ಟ್ಯಾಬ್ಲೆಟ್ ಮಾರುಕಟ್ಟೆಗೆ ಬಂದಿದೆ.

ಆಪಲ್ ಉತ್ಪನ್ನಗಳು ಏಕಿಷ್ಟು ಕುತೂಹಲ ಕೆರಳಿಸುತ್ತವೆ ಎಂದರೆ ಅದು ಬಳಸುವ ಉನ್ನತ ತಂತ್ರಜ್ಞಾನ ಹಾಗು ತನ್ನ ಬಿಡಿಭಾಗಗಳ ಬಗ್ಗೆ ಅದು ಕಾಯ್ದುಕೊಳ್ಳುವ ಗೌಪ್ಯತೆ. ತನ್ನ ಬಿಡಿಭಾಗಗಳ ಮಾರಾಟಗಾರರು ಇದರ ಬಗ್ಗೆ ಸುಳಿವೂ ಕೂಡ ಕೊಡದಂತೆ ಎಚ್ಚರಿಕೆ ವಹಿಸುತ್ತದೆ ಆಪಲ್.ಆಸ್ಟ್ರೇಲಿಯಾದಲ್ಲಿ ಬೆಳಗ್ಗೆ ಬಿಡುಗಡೆಯಾದ ಕೂಡಲೇ ಖರೀದಿಸಿದ ಕ್ಯಾಲಿಫೋರ್ನಿಯಾ ನ ಗ್ಯಾಡ್ಜೆಟ್ ರಿಪೇರಿ ಕಂಪನಿ ಐಫಿಕ್ಸಿಟ್ ಎಂಬ ಕಂಪನಿ, ಟ್ಯಾಬ್ಲೆಟ್ ಅನ್ನು ಬಿಚ್ಚಿ ಅದರ ಬಿಡಿಭಾಗಗಳನ್ನು ವಿಶ್ಲೇಷಿಸಿದೆ.

ಯಾವ ಯಾವ ಭಾಗಗಳು ಯ್ವಯಾವ ಕಂಪನಿಯದು ಎಂದು ಅಂದಾಜಿಸಿರುವ ಐಫಿಕ್ಸಿಟ್ ಪ್ರಕಾರ ಆಪಲ್ ನಲ್ಲಿ ಉಪಯೋಗಿಸುವ LCD ಪರದೆ ಸ್ಯಾಮ್ಸಂಗ್ ಹಾಗು ಎಲ್.ಜಿ ಕಂಪನಿಯದಾಗಿದ್ದು, A5X ಪ್ರೋಸೆಸರ್, 4G ತಂತ್ರಜ್ಞಾನ, ವೈಫೈ, ಹಾಗು ಬ್ಲೂಟೂತ್ ಭಾಗಗಳು ಕ್ವಾಲ್ಕಾಂ ಕಂಪನಿಯದಂತೆ.

ಇನ್ನು ಮ್ಯೂಸಿಕ್ ಹಾಗು ವೀಡಿಯೊಗೆ ಬಳಸುವ ಚಿಪ್, ತೋಶಿಬಾ ಕಂಪನಿಯದಾಗಿದ್ದು, RAM ಅನ್ನು ಜಪಾನಿನ ಎಲ್ಪಿದ ಎಂಬ ಕಂಪನಿ ಪೂರೈಸುತ್ತದಂತೆ.

ಆಪಲ್ ಏನು ಮಾಡಿದರೂ, ಆಪಲ್ ಮೇಲೆ ಬೇರೆಯವರು ಏನು ಮಾಡಿದರೂ ಅದು ಸುದ್ದಿಯಾಗದೇ ಇರಲಾರದು.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot