Subscribe to Gizbot

ಜಿಂಕ್ ಆಂಡ್ರಾಯ್ಡ್ 4.0 ಟ್ಯಾಬ್ಲೆಟ್ ದೇಶದಲ್ಲೇ ಫಸ್ಟ್

Posted By: Varun
ಜಿಂಕ್ ಆಂಡ್ರಾಯ್ಡ್ 4.0 ಟ್ಯಾಬ್ಲೆಟ್ ದೇಶದಲ್ಲೇ ಫಸ್ಟ್

ಜಿಂಕ್(Zync), ನೋಯ್ಡಾ ಮೂಲದ ಭಾರತೀಯ ಕಂಪನಿಯಾಗಿದ್ದು, ಭಾರತದಲ್ಲೇ ಮೊದಲ ಆಂಡ್ರಾಯ್ಡ್ 4.0 ಆವೃತ್ತಿಯ ಟ್ಯಾಬ್ಲೆಟ್ ಬಿಡುಗಡೆ ಮಾಡಿದೆ.

ಇದುವರೆಗೂ ಹಲವಾರು ಕಂಪನಿಗಳು ಆಂಡ್ರಾಯ್ಡ್ ಆಧಾರಿತ ಟ್ಯಾಬ್ಲೆಟ್ಟುಗಳನ್ನು ಬಿಡುಗಡೆ ಮಾಡಿದ್ದರೂ ಆಂಡ್ರಾಯ್ಡ್ ಐಸ್ಕ್ರೀಮ್ ಸ್ಯಾಂಡ್ವಿಚ್ ಆವೃತ್ತಿಯ ಟ್ಯಾಬ್ಲೆಟ್ ದೇಶದಲ್ಲೇ ಮೊದಲಬಾರಿಗೆ ಜಿಂಕ್ (Zync) ಹೊರತಂದಿದೆ.

Zync Z-990 ಹೆಸರಿನ ಈ ಟ್ಯಾಬ್ಲೆಟ್ನಲ್ಲಿ ಹಲವಾರು ವಿಶೇಷತೆಗಳಿದ್ದು, ಗ್ಯಾಲರಿ ಆಪ್, ಫೋಟೋ ಎಡಿಟರ್ ಆಪ್, ಐದು ಬೆರಳೂ ಒಟ್ಟಿಗೆ ಉಪಯೋಗಿಸಿದರೂ ಏನೂ ಆಗದ ಸ್ಕ್ರೀನ್ ಕೂಡ ಹೊಂದಿದೆ.

ಈ ಟ್ಯಾಬ್ಲೆಟ್ ನ ಇತರೆ ವಿಶೇಷತೆಗಳು ಈ ರೀತಿ ಇವೆ:

  • 7 ಇಂಚು ಕೆಪಾಸಿಟಿವ್ ಸ್ಕ್ರೀನ್.

  • 1.2 GHz ಪ್ರೊಸೆಸರ್, 1 GB RAM

  • 4 ಜಿಬಿ ಆಂತರಿಕ ಮೆಮೊರಿ ಹಾಗು 32 GB ವರೆಗೆ ವಿಸ್ತರಿಸಬಹುದಾದ ಮೆಮೊರಿ.

  • ವೈಫೈ, USB ಪೋರ್ಟ್, 3G , HDMI ಪೋರ್ಟ್.

  • 0.3 ಮೆಗಾಪಿಕ್ಸೆಲ್ ಕ್ಯಾಮೆರಾ.

  • ವಿಶೇಷವಾಗಿ ಈ ಟ್ಯಾಬ್ಲೆಟ್ಗೆಂದೇ ವಿನ್ಯಾಸ ಮಾಡಿದ ಬಾಹ್ಯ ಕೀಬೋರ್ಡ್.
Zync Z-990 ಹಲವಾರು ಇ-ವಾಣಿಜ್ಯ ವೆಬ್ಸೈಟ್ಗಳಲ್ಲಿ ಲಭ್ಯವಿದೆ. ಇದರ ಬೆಲೆ 8990 ರೂಪಾಯಿ.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot