ಬಿಪಿ, ಶುಗರ್, ಇಸಿಜಿ ನೋಡಲು ಟ್ಯಾಬ್ಲೆಟ್

Posted By: Varun
ಬಿಪಿ, ಶುಗರ್, ಇಸಿಜಿ ನೋಡಲು ಟ್ಯಾಬ್ಲೆಟ್

ಸಾಮಾನ್ಯವಾಗಿ ಟ್ಯಾಬ್ಲೆಟ್ ಕೊಂಡರೆ ಅದನ್ನು ಉಪಯೋಗಿಸುವುದು ಡಾಕ್ಯುಮೆಂಟ್ ಓದಲು, ಹಾಡು ಕೇಳಲು ಇಲ್ಲವೆಫಿಲಂ ನೋಡಲು ಅಲ್ಲವೆ.

ಆದರೆ ಅದೇ ಟ್ಯಾಬ್ಲೆಟ್ ನಿಂದ ನಿಮ್ಮ ಬ್ಲಡ್ ಪ್ರೆಶರ್, ಇಸಿಜಿ, ಹೃದಯದ ಬಡಿತ, ಮಧುಮೇಹದ ಅಂಶ ಹಾಗು ನೀರಿನ ಗುಣಮಟ್ಟ ಅಳೆಯಲು ಸಾಧ್ಯವಿದ್ದರೆ ಹೇಗೆ.

ಇದೇನು ಯಾವುದೋ ಹಾಲಿವುಡ್ ಚಿತ್ರದ ಸೀನ್ ವಿವರಿಸುತ್ತಿದ್ದೇನೆ ಎಂದುಕೊಂಡಿದ್ದೀರಾ ? ಇಲ್ಲ ಸ್ವಾಮೀ ನಮ್ಮ ಭಾರತೀಯ ಡಾಕ್ಟರ್ ಕನವ್ ಕಹೊಲ್ ಎಂಬುವರು ಈ ರೀತಿಯ ಆಂಡ್ರಾಯ್ಡ್ ಆಧಾರಿತ ತಂತ್ರಾಂಶವೊಂದನ್ನು ಟ್ಯಾಬ್ಲೆಟ್ ಗೆ ಅಳವಡಿಸಿದ್ದಾರೆ.

ಸ್ವಾಸ್ತ್ಯ ಹೆಸರಿನ ಈ ಸ್ಲೇಟ್ 99 % ನಿಖರತೆ ಹೊಂದಿದ್ದು ಅಳೆದ ಮಾಹಿತಿಯನ್ನು ದಾಖಲಿಸಿ ಸೆರ್ವೆರ್ ಗೆ ಅಪ್ಲೋಡ್ಮಾಡಬಹುದಾಗಿದ್ದು ಪೇಶಂಟ್ಗಳ ಮಾಹಿತಿ ಸಂಗ್ರಹಿಸಬಹುದು. ಸಾಮಾನ್ಯವಾಗಿ ದೂರದ ಪ್ರದೇಶಗಳು ಹಾಗು ಹಳ್ಳಿಗಳಿಗೆ ಹೋಗವ ಡಾಕ್ಟರ್ಗಳಿಗೆ ಇದು ತುಂಬಾ ಪ್ರಯೋಜನಕಾರಿಯಾಗಿದ್ದು, ಆಸ್ಪತ್ರೆಗೆ ಸಡನ್ನಾಗಿ ಹೋಗಲು ಸಾಧ್ಯವಿಲ್ಲದವರೂ ಕೂಡ ಇದನ್ನು ಉಪಯೋಗಿಸಿ ಬ್ಲಡ್ ಪ್ರೆಶರ್, ಇಸಿಜಿ, ಹೃದಯದ ಬಡಿತ, ಮಧುಮೇಹದ ಅಂಶವನ್ನು ನೋಡಿಕೊಂಡು ನಿಮ್ಮ ಡಾಕ್ಟರ್ ಗೆ ಇಮೇಲ್ ಕೂಡ ಮಾಡಬಹುದು.

ಈ ತಂತ್ರಾಂಶ 7 ಸಾವಿರ ರೂಪಾಯಿಗೆ ಲಭ್ಯವಿದೆ.

 

 

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot