ಉತ್ತಮ ಟಿವಿ ಕೊಳ್ಳಲು 7 ಟಿಪ್ಸ್

Posted By: Varun
ಉತ್ತಮ ಟಿವಿ ಕೊಳ್ಳಲು 7 ಟಿಪ್ಸ್

ನೀವು ಯಾವುದೇ ಟಿವಿ ಮಳಿಗೆಗೆ ಹೋಗಿ, ಕಣ್ಣೆದುರಿಗೆ ಕಾಣುವುದು ಹಲವಾರು ಚಾನೆಲ್ಗಳಲ್ಲಿ ಕಾರ್ಯಕ್ರಮಗಳನ್ನುಬಿತ್ತರಿಸುತ್ತಿರುವ ಬಣ್ಣ ಬಣ್ಣದ LCD , LED ಟಿವಿಗಳು.

ನೆಟ್ಟಗೆ ಒಂದು ಟಿವಿಯನ್ನು ನೋಡಿರುವುದಿಲ್ಲ, ಅಷ್ಟರಲ್ಲೇ ಅಲ್ಲಿನ ಸೇಲ್ಸ್ ಹುಡುಗ/ಹುಡುಗಿ ನಿಮ್ಮ ತಲೆಗೆ ಟಿವಿಗೆ ಸಂಬಂಧಿಸಿದ ಮಾಹಿತಿ ತುರುಕಲು ಶುರು ಮಾಡುತ್ತಾರೆ.ಆದರೆ ನಮಗೆ ಎಷ್ಟೋ ತಂತ್ರಜ್ಞಾನದ ಪದಗಳ ಬಗ್ಗೆ ಅರಿವಿರುವುದಿಲ್ಲ. ಹಾಗಾಗಿ ಅವರ ಸಲಹೆಯ ಮೇಲೆ ಕೆಲವೊಮ್ಮೆ ಟಿವಿ ಖರೀದಿಸುತ್ತೇವೆ.

ನೀವೂ ಕೆಲವೊಂದು ಅಂಶಗಳನ್ನು ತಿಳಿದುಕೊಂಡರೆ ಟಿವಿ ಖರೀದಿಸುವ ಸಮಯದಲ್ಲಿ ಸಹಾಯವಾದೀತು ಅಲ್ಲವೆ. ನೀವು ಖರೀದಿಸುವ ಮುನ್ನ ಈ ಕೆಳಗಿನಅಂಶಗಳನ್ನು ಗಮನದಲ್ಲಿ ಇಟ್ಟುಕೊಳ್ಳುವುದು ಒಳ್ಳೆಯದು.

  • ಟಿವಿಗಳ ರಿಫ್ರೆಶ್ ರೇಟ್ ಬಗ್ಗೆ ವಿಚಾರಿಸಿ. ಸಾಮಾನ್ಯವಾಗಿ ರಿಫ್ರೆಶ್ ರೇಟ್ ಜಾಸ್ತಿ ಇದ್ದಷ್ಟೂ ಒಳ್ಳೆಯದು. ಕಡಿಮೆ ಎಂದರೆ 100 Hz ಇರುವ ಟಿವಿ ಕೊಂಡರೆ ಒಳ್ಳೆಯದು.

  • ಟಿವಿ ಯನ್ನು ಹಲವಾರು ವರ್ಷಗಳವರೆಗೆ ಉಪಯೋಗಿಸುವುದರಿಂದ ಜಾಸ್ತಿ ಫೀಚರ್ಗಳು ಇದ್ದರೆ ಒಳ್ಳೆಯದು. ಹಾಗಾಗಿ ಕಂಪ್ಯೂಟರ್ ಜೊತೆಗೂ ಕನೆಕ್ಟ್ ಆಗುವ USB ಪೋರ್ಟ್ ಇರುವ ಟಿವಿ ಕೊಳ್ಳಿ.

  • ನೀವು ನೋಡುವ ಟಿವಿಯಲ್ಲಿ ಯಾವ್ಯಾವ ಫಾರ್ಮ್ಯಾಟ್ ಪ್ಲೇ ಆಗುತ್ತೆ ಚೆಕ್ ಮಾಡಿ. RMV, MP4, MKV, ಹಾಗು HD ವೀಡಿಯೋ ಸಪೋರ್ಟ್ ಮಾಡುವ ಟಿವಿ ಆಗಿರಬೇಕು.

  • ಬ್ಲೂ ರೇ ಪ್ಲೇಯರ್, ಗೇಮ್ಸ್ ಕನ್ಸೋಲ್, ಸೆಟ್ ಟಾಪ್ ಬಾಕ್ಸ್ ಕನೆಕ್ಟ್ ಮಾಡುವ ಹಾಗಿದ್ದರೆ ಹೆಚ್ಚು HDMI ಪೋರ್ಟ್ ಇದ್ದರೆ ಒಳ್ಳೆಯದು.

  • ಟಿವಿ ಖರೀದಿಸುವ ಮುನ್ನ ಒಂದು ಪೆನ್ ಡ್ರೈವ್ನಲ್ಲಿ ಫಿಲಂ ಹಾಗು ಕೆಲವು ಚಿತ್ರಗಳನ್ನು ತೆಗೆದುಕೊಂಡು ಹೋಗಿ ಅಂಗಡಿಯ ಟಿವಿಯಲ್ಲಿ ಟೆಸ್ಟ್ ಮಾಡಿ.

  • ನೋಡುವ ಪ್ರತಿಯೊಂದು ಟಿವಿಯನ್ನು ವಿವಿಧ ಕೋನಗಳಿಂದ ನೋಡಿ ಚಿತ್ರದ ಗುಣಮಟ್ಟದ ಬಗ್ಗೆ ಒಂದು ಅಂದಾಜು ಸಿಗುತ್ತದೆ.

  • ಯಾವ್ಯಾವ ಕಂಪನಿ, ಎಷ್ಟು ವರ್ಷ ವಾರಂಟಿ ಕೊಡುತ್ತದೆ ಎಂದು ಪರೀಕ್ಷಿಸಿ.
 

ಮೇಲಿನ ಇಷ್ಟು ಅಂಶಗಳು ನೀವು LCD ಹಾಗು LED ಟಿವಿ ಖರೀದಿಸಲು ಸಹಾಯಕವಾಗುವುದು.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot