ಹಳೇ ಪಿ.ಸಿಯನ್ನು ಏನಪ್ಪಾ ಮಾಡುವುದು

Posted By: Varun
ಹಳೇ ಪಿ.ಸಿಯನ್ನು ಏನಪ್ಪಾ ಮಾಡುವುದು

ಹೊಸ ವಸ್ತುಗಳನ್ನು ಕೊಂಡಾಗ ಹಳೆ ವಸ್ತುವನ್ನು ಮರೆಯುತ್ತೇವೆ ಇಲ್ಲವೆ ಮುಂದೆ ಎಂದಾದರೊಂದು ದಿನ ಉಪಯೋಗಕ್ಕೆ ಬರುತ್ತದೆ ಎಂದು ಸ್ಟೋರ್ ರೂಮಿನಲ್ಲಿ ಇಡುತ್ತೇವೆ.

ಎಲೆಕ್ಟ್ರಾನಿಕ್ ವಸ್ತುಗಳು, ಅದರಲ್ಲೂ ಕಂಪ್ಯೂಟರುಗಳ ಹೊಸ ಆವೃತ್ತಿ ಬಂದಾಗ ಅದನ್ನು ಕೊಳ್ಳಲು ಮನಸ್ಸು ಹಾತೊರೆಯುತ್ತದೆ. ಆದರೆ ಹಳೆಯ ಪಿ.ಸಿಯನ್ನು ಇಟ್ಟುಕೊಳ್ಳಲೂ ಆಗುವುದಿಲ್ಲ ಬೇರೆಯವರಿಗೆ ಕಡಿಮೆ ಬೆಲೆಗೆ ಮಾರಲು ಮನಸೂ ಒಪ್ಪುವುದಿಲ್ಲ.

ಹಾಗಾಗಿ ನಿಮ್ಮ ಪಿ.ಸಿಯನ್ನು ಹೇಗೆ ಸದ್ಬಳಕೆ ಮಾಡಬಹುದು ಎಂಬ ಟಿಪ್ಸ್ ಇಲ್ಲಿದೆ:

ಸರ್ಕಾರಿ ಶಾಲೆಗಳಿಗೆ ಕೊಡಿ: ನಿಮ್ಮ ಹಳೆಯ ಪಿ.ಸಿಯನ್ನು ಹತ್ತಿರದ ಸರಕಾರೀ ಶಾಲೆಗೆ ಕೊಟ್ಟರೆ ಅವುಗಳಿಂದ ಎಷ್ಟೂ ಮಕ್ಕಳಿಗೆ ಕಂಪ್ಯೂಟರ್ ಕಲಿಯಲು ಸಹಾಯವಾಗಲಿದೆ.

ಹೋಂ ಸರ್ವರ್ ರೀತಿ ಬಳಸಿ : ಹಳೆಯ ಪಿ.ಸಿಯನ್ನು ಸರ್ವರ್ ರೀತಿ ಬಳಸಿ ನಿಮ್ಮ ಹೊಸ ಕಂಪ್ಯೂಟರಿನೊಂದಿಗೆ ಜೋಡಿಸಿಕೊಂಡು ಫಿಲಂ, ಮ್ಯೂಸಿಕ್ ಹಾಗು ವೀಡಿಯೋಗಳನ್ನ ಹಳೇ ಕಂಪ್ಯೂಟರಿನಲ್ಲಿ ಶೇಖರಿಸಿ. ಈ ರೀತಿ ಮಾಡುವುದರಿಂದ ಹೊಸ ಕಂಪ್ಯೂಟರಿನ ಹಾರ್ಡ್ ಡಿಸ್ಕ್ ನಲ್ಲಿ ಜಾಗ ಉಳಿಸಬಹುದು.

ಪ್ರಯೋಗ ಮಾಡಬಹುದು: ನಿಮ್ಮ ತಲೆಗೆ ಏನಾದರೂ ತಂತ್ರಾಂಶಕ್ಕೆ ಸಂಬಂಧ ಪಟ್ಟ ಐಡಿಯಾ ಇದ್ದರೆ ಅದನ್ನು ಪ್ರಯೋಗಿಸಲು ಹಳೆಯ ಪಿ.ಸಿಯನ್ನು ಬಳಸಬಹುದು. ವಿಂಡೋಸ್ ನ ಹೊಸ ಶಾರ್ಟ್ ಕಟ್ ಕೀಗಳು, ಮೆನು ಬದಲಾಯಿಸಲು, ಸೆಟ್ಟಿಂಗ್ ಬದಲಾಯಿಸಿ ಹೇಗೆ ಕಾಣುತ್ತದೆ ಎಂದು ನೋಡಲು ಹಳೆಯ ಪಿ.ಸಿಯನ್ನು ಬಳಸುವುದು ಉತ್ತಮ.

ಸಂಬಂಧಿಕರಿಗೆ ಕೊಡಿ: ನಿಮ್ಮ ಸಂಬಂಧಿಕರಲ್ಲಿ ಚಿಕ್ಕ ಮಕ್ಕಳು ಇದ್ದೇ ಇರುತ್ತಾರೆ. ಅವರಿಗೆ ಆಟವಾಡಲು, ಕಂಪ್ಯೂಟರ್ ಕಲಿಯಲು ನಿಮ್ಮ ಹಳೇ ಪಿ.ಸಿ ಕೊಟ್ಟರೆ,ಉಪಯುಕ್ತವಾಗುವುದೂ ಅಲ್ಲದೆ ಅವರ ಪ್ರೀತಿ ಗಳಿಸಬಹುದು.

ಈ ಮೇಲಿನ ಟಿಪ್ಸ್ ನಿಂದ ಇ-ವೆಸ್ಟ್ ಅನ್ನು ಕೂಡಾ ತಪ್ಪಿಸಬಹುದು.

 

 

 

 

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot