ಮೇ ಗೆ ಆಕಾಶ್ 2 ಸುಧಾರಿತ ಟ್ಯಾಬ್ಲೆಟ್

By Varun
|
ಮೇ ಗೆ ಆಕಾಶ್ 2 ಸುಧಾರಿತ ಟ್ಯಾಬ್ಲೆಟ್

ಕೆಟ್ಟ ಮೇಲೆ ಬುದ್ಧಿ ಬಂತು ಎನ್ನವುದು ಗಾದೆ. ಆದರೆ ನಮ್ಮ ಕೇಂದ್ರ ಸರ್ಕಾರಕ್ಕೆ ಪದೇ ಪದೇ ಕೆಟ್ಟರೆ ಮಾತ್ರ ಬುದ್ಧಿ ಬರುವಹಾಗಿದೆ.

ಕಾರಣ ಇಷ್ಟೇ. ಕೆಲವು ತಿಂಗಳಿಂದ ಬಹು ನಿರೀಕ್ಷಿತ (ಕಾದೂ ಕಾದೂ ಸುಸ್ತಾಯ್ತು) ಆಕಾಶ್ 2 ಟ್ಯಾಬ್ಲೆಟ್ ಕೊಡ್ತೀವಿ ಅಂತ ಕಾಗೆ ಹಾರಿಸಿದ್ದ ಮಾನ್ಯ ಕಪಿಲ್ ಸಿಬಾಲ್ , ಕೊನೆಗೂ ಆಕಾಶ್ ಟ್ಯಾಬ್ಲೆಟ್ ಅನ್ನು ಮೇ ತಿಂಗಳಲ್ಲಿ ಗ್ಯಾರಂಟಿ ಬಿಡುಗಡೆ ಮಾಡಲಿದ್ದರಂತೆ.

ಸಿಕ್ಕಾಪಟ್ಟೆ ಕಂಪ್ಲೈಂಟ್ ಬಂದಿರೋದ್ರಿಂದ ಮತ್ತೆ ಮತ್ತೆ ಪ್ರಯೋಗ ಮಾಡಿ ಈ ಸರಿ ಯಾವುದೇ ಕಿರಿಕಿರಿ ಇಲ್ಲದಂತೆ ಸಿದ್ಧಪಡಿಸಿರುವುದಾಗಿ ಹೇಳಿಕೊಂಡಿದ್ದಾರೆ.

ಈಗಾಗಲೇ ಸಿದ್ಧವಿರುವ ಆಕಾಶ್ 2 ಟ್ಯಾಬ್ಲೆಟ್ ಅನ್ನು ಮತ್ತಷ್ಟು ಚೆಕ್ ಮಾಡಿ ವಿದ್ಯಾರ್ಥಿಗಳ ಪ್ರತಿಕ್ರಿಯೆ ಪಡೆದು ಪುನಃ ಅಪ್ ಗ್ರೇಡ್ ಮಾಡಲಾಗಿದ್ದು, ಮೇ ನಲ್ಲಿ ಬರುವ ಆಕಾಶ್ 2 ಟ್ಯಾಬ್ಲೆಟ್ ನಲ್ಲಿ ಏನೇನಿದೆ ಗೊತ್ತಾ:

  • ಕಾರ್ಟೆಕ್ಸ್ A8 700 ಮೆಗಾ ಹೆರ್ಟ್ಜ್ ಪ್ರೋಸೆಸರ್

  • 7 ಇಂಚ್ ಟಿ. ಎಫ್. ಟಿ ಪರದೆ

  • ಕೆಪಾಸಿಟಿವ್ ಟಚ್ ಸ್ಕ್ರೀನ್

  • 256 ಎಂ. ಬಿ ರಾಮ್

  • 3- 4 ಗಂಟೆಗಳ ಬ್ಯಾಕ್ ಅಪ್ ಇರುವ 200m AH ಬ್ಯಾಟರಿ

  • 2 – 32 ಜಿ. ಬಿ ಸ್ಟೋರೇಜ್

  • ಕ್ಯಾಮೆರಾ

  • ಎಂ. ಎಸ್ ಆಫೀಸ್ , ಪಿ . ಡಿ. ಏಫ್ ರೀಡರ್

  • ಇಮೇಜ್ ಹಾಗು ವೀಡಿಯೊ ನೋಡುವ ಸೌಲಭ್ಯ

  • ವೆಬ್ ಬ್ರೌಸಿಂಗ್.
Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X