ಮೈಕ್ರೋ ಮ್ಯಾಕ್ಸ್ ಟ್ಯಾಬ್ಲೆಟ್ ಕೇವಲ 6,499

By Varun
|
ಮೈಕ್ರೋ ಮ್ಯಾಕ್ಸ್ ಟ್ಯಾಬ್ಲೆಟ್ ಕೇವಲ 6,499

ಭಾರತದ ಮೊಬೈಲ್ ಉತ್ಪಾದಕ ಕಂಪನಿ ಮೈಕ್ರೋ ಮ್ಯಾಕ್ಸ್, "ಫನ್ ಬುಕ್" ಹೆಸರಿನತನ್ನ ಮೊದಲ ಟ್ಯಾಬ್ಲೆಟ್ ಬಿಡುಗಡೆ ಮಾಡಿದೆ.

ವಿಶೇಷವೇನೆಂದರೆ ಇದು ಆಂಡ್ರಾಯ್ಡ್ ನ 4.0 ಐಸ್ ಕ್ರೀಮ್ ಸ್ಯಾಂಡ್ವಿಚ್ ತಂತ್ರಾಂಶವಿರುವ ಟ್ಯಾಬ್ಲೆಟ್ಗಳಲ್ಲೇ ಕಡಿಮೆ ಬೆಲೆಯ ಟ್ಯಾಬ್ಲೆಟ್ ಇದಾಗಿದ್ದು 6,499 ರೂಪಾಯಿಗೆ ಬರಲಿದೆ.

ವಿದ್ಯಾರ್ಥಿಗಳಿಗೆ ಹಾಗು ಟ್ಯಾಬ್ಲೆಟ್ ಅನ್ನು ಮೊಟ್ಟಮೊದಲ ಬಾರಿಗೆ ಖರೀದಿ ಮಾಡುವವರಿಗೆ ಇದು ಉತ್ತಮ ಟ್ಯಾಬ್ಲೆಟ್ ಆಗಿದೆ. ಇದರ ಫೀಚರುಗಳು ಈ ರೀತಿ ಇವೆ:

  • 1.2 GHz ಪ್ರೊಸೆಸರ್.

  • 7 ಇಂಚು ಕೆಪಾಸಿಟಿವ್ ಟಚ್ ಸ್ಕ್ರೀನ್

  • 800 X 480 ಪಿಕ್ಸೆಲ್ ರೆಸೊಲ್ಯೂಶನ್.

  • ಉತ್ತಮ ಗ್ರಾಫಿಕ್ಸ್ ಕಾರ್ಡ್

  • 4 ಜಿಬಿ ಆಂತರಿಕ ಮೆಮೊರಿ

  • 512 MB ​​RAM

  • 0.3 ಮೆಗಾ ಪಿಕ್ಸೆಲ್ ಕ್ಯಾಮೆರಾ.

  • ಮೈಕ್ರೋ SD ಕಾರ್ಡ್ ಹಾಗು 32 ಜಿಬಿ ವರೆಗೂ ವಿಸ್ತರಿಸಬಹುದಾದ ಮೆಮೊರಿ

  • Wi-Fi ಮತ್ತು 3G

ಇದಷ್ಟೇ ಅಲ್ಲದೆ ಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಅಧ್ಯಯನದ ವಸ್ತುಗಳು ಹಾಗು ಮ್ಯಾನೇಜ್ಮೆಂಟ್, ಎಂಜಿನಿಯರಿಂಗ್ ಮತ್ತು ವೈದ್ಯಕೀಯ ವಿದ್ಯಾರ್ಥಿಗಳಿಗೆ ಇ-ಪುಸ್ತಕಗಳೂ ಪ್ರೀ ಲೋಡ್ ಆಗಿ ಬರಲಿದೆ.

ಈ ಟ್ಯಾಬ್ಲೆಟ್ ನ ಜೊತೆ ಟಾಟಾ ಫೋಟಾನ್ EVDO ಡೇಟಾ ಕಾರ್ಡ್ ಉಚಿತವಾಗಿ ಬರಲಿದ್ದು ಒಂದು ತಿಂಗಳ ಮಟ್ಟಿಗೆ 1 ಜಿಬಿ ಉಚಿತ ಡೌನ್ಲೋಡ್ ಮಾಡಬಹುದಾಗಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X