Subscribe to Gizbot

ಸ್ಯಾಮ್ಸಂಗ್ ಗ್ಯಾಲಕ್ಸಿ ಟ್ಯಾಬ್ ಬರೀ 20,000

Posted By: Super
ಸ್ಯಾಮ್ಸಂಗ್ ಗ್ಯಾಲಕ್ಸಿ ಟ್ಯಾಬ್ ಬರೀ 20,000

ಆಪಲ್ ನ ನ್ಯೂ ಐಪ್ಯಾಡ್  ಬಿಡುಗಡೆಯ ನಂತರ ಸ್ಯಾಮ್ಸಂಗ್ ತನ್ನ ಪ್ರತಿಷ್ಠೆಯನ್ನು ಉಳಿಸಿಕೊಳ್ಳಲು ಸಾಹಸ ಮಾಡುತ್ತಿದ್ದು, ಈ ನಿಟ್ಟಿನಲ್ಲಿ 10.1 ಇಂಚ್ ನ, ಸ್ಯಾಮ್ಸಂಗ್ ಗ್ಯಾಲಕ್ಸಿ ಟ್ಯಾಬ್ 2 ಹೆಸರಿನ ಆಂಡ್ರಾಯ್ಡ್ ಐಸ್ ಕ್ರೀಮ್ ಸ್ಯಾಂಡ್ವಿಚ್ ತಂತ್ರಾಂಶದ ಟ್ಯಾಬ್ಲೆಟ್ ಒಂದನ್ನು ಬಿಡುಗಡೆ ಮಾಡಲಿದೆ. ಈ ಟ್ಯಾಬ್ಲೆಟ್ ನ ವಿಶೇಷ ಏನೆಂದರೆ ಇದು ಕೇವಲ ಸ್ಯಾಮ್ಸಂಗ್ ನ ಹೈ ಫೀಚರ್ ಟ್ಯಾಬ್ಲೆಟ್ ಗಳಲ್ಲೇ ಕಡಿಮೆ ಬೆಲೆಯದಾಗಿದೆ.

ಈ ಟ್ಯಾಬ್ಲೆಟ್ ನ ಫೀಚರುಗಳು ಈ ರೀತಿ ಇವೆ:

  • 10.1 ಇಂಚ್ ಡಿಸ್ಪ್ಲೇ ಇರುವ ಕೆಪಾಸಿಟಿವ್ ಟಚ್ ಸ್ಕ್ರೀನ್, 1204 X 800 ರೆಸಲ್ಯೂಶನ್ ನೊಂದಿಗೆ.

  • ಡ್ಯುಯಲ್ ಕೋರ್ 1 GHz ಪ್ರೋಸೆಸ್ಸೋರ್

  • DDR 2 ಆವೃತ್ತಿಯ 1 GB ರಾಮ್

  • ಪ್ರತಿ ಸೆಕೆಂಡ್ ಗೆ 21 MB ವರೆಗೂ ಡೌನ್ಲೋಡ್ ಮಾಡಬಹುದಾದ HSPA + 3G ಸಂಪರ್ಕ

  • 3 ಮೆಗಾ ಪಿಕ್ಸೆಲ್ ಮುಂಬದಿಯ ಕ್ಯಾಮರಾ

  • HD 720p ನಲ್ಲಿ ವಿಡಿಯೋ ರೆಕಾರ್ಡಿಂಗ್, ವಿಡಿಯೋ ಕಾನ್ಫರೆನ್ಸಿಂಗ್ ಮತ್ತು ವೀಡಿಯೊ ಕರೆ ಮಾಡಬಹುದಾದ VGA ಕ್ಯಾಮರಾ.

 

16 GB ಹಾಗು 32 GB ಆವೃತ್ತಿಗಳಲ್ಲಿ ಈ ಟ್ಯಾಬ್ಲೆಟ್ ಬರಲಿದ್ದು ಮೇ ತಿಂಗಳಲ್ಲಿ ಭಾರತಕ್ಕೆ ಬರುವ ನಿರೀಕ್ಷೆ ಇದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot