ಅಸುಸ್ ತರಲಿದೆ ಹೊಸ 10 ಇಂಚ್ ಟ್ಯಾಬ್ಲೆಟ್

ಪ್ರಖ್ಯಾತ ಟ್ಯಾಬ್ಲೆಟ್ ಉತ್ಪಾದಕ ಅಸುಸ್, ಟ್ರಾನ್ಸ್ ಫಾರ್ಮರ್ ಪ್ಯಾಡ್ 300 ಹೆಸರಿನ ಐಸ್ ಕ್ರೀಮ್ ಸ್ಯಾಂಡ್ವಿಚ್ 4.0 ಆಂಡ್ರಾಯ್ಡ್ ತಂತ್ರಾಂಶದ 10.1 ಇಂಚ್ ಟ್ಯಾಬ್ಲೆಟ್ ಅನ್ನು ಮುಂದಿನ ವಾರ ಬಿಡುಗಡೆ ಮಾಡಲಿದೆ.
ಈಗಾಗಲೇ ಅಮೆರಿಕಾದಲ್ಲಿ ಪ್ರೀ ಆರ್ಡರ್ ತೆಗೆದುಕೊಳ್ಳುತ್ತಿರುವ ಅಸುಸ್ 20,500 ರೂಪಾಯಿ ಬೆಲೆಯನ್ನು ನಿಗದಿ ಪಡಿಸಿದೆ.
ಈ ಟ್ಯಾಬ್ಲೆಟ್ ಸ್ಪೆಸಿಫಿಕೇಶನ್ ಗಳು ಈ ರೀತಿ ಇವೆ:
- 10.1 ಇಂಚ್ ಟಚ್ ಸ್ಕ್ರೀನ್ (1280 X 800 ಪಿಕ್ಸೆಲ್) ರೆಸಲ್ಯೂಶನ್
- ವಿಶಾಲ ಕೋನ IPS ಫಲಕ, ಟೆನ್ ಪಾಯಿಂಟ್ ಫಿಂಗರ್ ಟಚ್ ಬೆಂಬಲಿಸುತ್ತದೆ.
- ಕ್ವಾಡ್ ಕೋರ್ 1.2 GHz ಎನ್ವಿಡಿಯಾ ಟೆಗ್ರಾ 3 T30L ಮೊಬೈಲ್ ಪ್ರೋಸೆಸ್ಸೋರ್
- ಸ್ಟೀರಿಯೋಸ್ಕೋಪಿಕ್ 3D ಜೀಫೋರ್ಸ್ ಗ್ರಾಫಿಕ್ಸ್ ಚಿಪ್.
- 1 GB ರಾಮ್
- 16 GB ಆಂತರಿಕ ಮೆಮೊರಿ
- 8 ಮೆಗಾಪಿಕ್ಸೆಲ್ ಆಟೋ ಫೋಕಸ್ ಕ್ಯಾಮರಾ
- 1.2 ಮೆಗಾಪಿಕ್ಸೆಲ್ ಮುಂಬದಿಯ ಕ್ಯಾಮೆರಾ.
- 4G LTE/3G ಜಾಲಬಂಧ
- ವೈಫೈ, ಬ್ಲೂಟೂತ್ 3.0
- 2 ಇನ್ 1 ಆಡಿಯೊ ಜ್ಯಾಕ್, ಸೂಕ್ಷ್ಮ HDMI ಪೋರ್ಟ್
- ಮೈಕ್ರೋ SD ಕಾರ್ಡ್ ರೀಡರ್ ಮತ್ತು ಉತ್ತಮ ಗುಣಮಟ್ಟದ ಸ್ಪೀಕರ್.
- ಹತ್ತು ಗಂಟೆಗಳ ಬ್ಯಾಕ್ ಅಪ್ ಒದಗಿಸುವ 22 WH ಲಿಥಿಯಂ ಪಾಲಿಮರ್ ಬ್ಯಾಟರಿ
Comments
Best Mobiles in India


Click it and Unblock the Notifications








