ಆಂಡ್ರಾಯ್ಡ್ 4.0 ಐಸ್ ಕ್ರೀಮ್ ಸ್ಯಾಂಡ್ವಿಚ್ ಯಾಕೆ ಬೇಕು

Posted By: Varun
ಆಂಡ್ರಾಯ್ಡ್ 4.0 ಐಸ್ ಕ್ರೀಮ್ ಸ್ಯಾಂಡ್ವಿಚ್ ಯಾಕೆ ಬೇಕು

ಆಂಡ್ರಾಯ್ಡ್, ಆಂಡ್ರಾಯ್ಡ್, ಆಂಡ್ರಾಯ್ಡ್. ನೀವು ಯಾವುದೇ ಸ್ಮಾರ್ಟ್ ಫೋನ್ ಅಥವಾ ಟ್ಯಾಬ್ಲೆಟ್ ತೆಗೆದುಕೊಂಡರೂ ಅದರಲ್ಲಿ ಆಂಡ್ರಾಯ್ಡ್ ತಂತ್ರಾಂಶವಿರುತ್ತದೆ.

ಗೂಗಲ್ ನ ಆಂಡ್ರಾಯ್ಡ್ ಹಲವಾರು ಆವೃತ್ತಿಗಳನ್ನು ಬಿಡುಗಡೆ ಮಾಡಿದ್ದು 2012 ನಲ್ಲಿ ಬಿಡುಗಡೆಯಾಗುತ್ತಿರುವ ಹಲವಾರು ಟ್ಯಾಬ್ಲೆಟ್ ಹಾಗು ಸ್ಮಾರ್ಟ್ ಫೋನುಗಳಲ್ಲಿ ಆಂಡ್ರಾಯ್ಡ್ 4.0 ಐಸ್ ಕ್ರೀಮ್ ಸ್ಯಾಂಡ್ವಿಚ್ ಆಧಾರಿತವಾಗಿರುತ್ತದೆ.

ಐಸ್ ಕ್ರೀಮ್ ಸ್ಯಾಂಡ್ವಿಚ್, ಆಂಡ್ರಾಯ್ಡ್ ನ ನಾಲ್ಕನೇ ಆವೃತ್ತಿಯಾಗಿದ್ದು ಏಕೆ ಈ ಐಸ್ ಕ್ರೀಮ್ ಸ್ಯಾಂಡ್ವಿಚ್, ಹಿಂದಿನ ಆಂಡ್ರಾಯ್ಡ್ ಆವೃತ್ತಿಗಳಾದ ಹನಿಕೂಂಬ್ (ಆಂಡ್ರಾಯ್ಡ್ 3.0) ಹಾಗು ಜಿಂಜರ್ ಬ್ರೆಡ್ (ಆಂಡ್ರಾಯ್ಡ್ 2.3) ಗಿಂತ ಹೇಗೆಉತ್ತಮವಾಗಿದೆ ಈಗಿನ ಟ್ಯಾಬ್ಲೆಟ್ ಹಾಗು ಸ್ಮಾರ್ಟ್ ಫೋನುಗಳಿಗೆ ಎಂದುತಿಳಿದುಕೊಳ್ಳೋಣ.

1) ಅತ್ಯುತ್ತಮ ಇಂಟರ್ಫೇಸ್- ಆಂಡ್ರಾಯ್ಡ್ 4.0, ಇದುವರೆಗಿನ ಆವೃತ್ತಿಗಳಲ್ಲೇ ಉತ್ತಮವಾದ ಇಂಟರ್ಫೇಸ್ ಹೊಂದಿದ್ದು, ಇದರ ಉತ್ತಮ ರೆಸಲ್ಯೂಶನ್ ನಿಂದಾಗಿ ಅನಿಮೇಶನ್ ಗಳನ್ನು ಇನ್ನೂ ರಿಚ್ ಆಗಿ ಕಾಣಬಹುದು.

2) ಸುಲಭವಾಗಿ ಹಲವಾರು ಆಪ್ಸ್ ನೋಡಬಹುದು- ಯಾವುದೇ ಜಂಜಾಟವಿಲ್ಲದೆ ಹಲವಾರು ಆಪ್ಸ್ ಗಳನ್ನು ಒಟ್ಟಿಗೆ ನೋಡಿದರೂ ಹ್ಯಾಂಗ್ ಹಾಗುವುದಿಲ್ಲ. ಮಲ್ಟಿ ಟಾಸ್ಕಿಂಗ್ ಮಾಡಲು ಅನುಕೂಲ ಒದಗಿಸುತ್ತದೆ.

3)ಹೋಮ್ ಸ್ಕ್ರೀನ್ ಫೋಲ್ಡರ್ ಹಾಗು ಫೈಲ್ ನಿರ್ವಹಣೆ- ವಿನ್ದೊವ್ಸ್ ಎಕ್ಸಪ್ಲೋರರ್ ರೀತಿ ಫೈಲ್ ಗಳನ್ನು ಮ್ಯಾನೆಜ್ ಮಾಡಬಹುದು.

4) ಉತ್ತಮ ವಾಯ್ಸ್ ರೆಕಗ್ನಿಶನ್- ಆಪಲ್ ನ ಸಿರಿ ರೀತಿಯಲ್ಲಿ ನಿಮ್ಮ ಧ್ವನಿಯನ್ನು ಗ್ರಹಿಸಿ, ಟೆಕ್ಸ್ಟ್ ಮಾಡುತ್ತದೆ.

5) ವೈಫೈ ಶೇರಿಂಗ್- ಇದರಲ್ಲಿನ ಆಂಡ್ರಾಯ್ಡ್ ಬೀಮ್ ಮೂಲಕ ನೀವು ಫೈಲ್ಗಳನ್ನು ನಿಮ್ಮ ಸಾಧನದಿಂದ ಬೇರೆ ಸಾಧನಕ್ಕೆ ವೈಫೈ ಮೂಲಕ ಕಳಿಸಬಹುದು.

6) ಕೀ ಬೋರ್ಡ್, ಮೌಸ್ ಅಳವಡಿಸಬಹುದು- ಹಿಂದಿನ ಆವೃತ್ತಿಗಳಲ್ಲಿ ಇದು ಸಾಧ್ಯವಿರಲಿಲ್ಲ. ಆದರೆ USB ಮೂಲಕ ಮೌಸ್ ಹಾಗು ಕೀ ಬೋರ್ಡ್ ನಂತಹ ಬಾಹ್ಯ ಸಾಧನಗಳನ್ನು ಅಳವಡಿಸಬಹುದು,ಆಂಡ್ರಾಯ್ಡ್ 4.0 ನಿಂದಾಗಿ.

7) ಸಾಮಾಜಿಕ ಜಾಲ ತಾಣಗಳ ಅನುಕಲನ ಮಾಡಬಹುದು- ನಿಮ್ಮ ಫೇಸ್ ಬುಕ್, ಟ್ವಿಟರ್, ಗೂಗಲ್ + ಅನ್ನು ಈ ಆಂಡ್ರಾಯ್ಡ್ 4.0 ಮೂಲಕ ಅನುಕಲನ ಮಾಡಿ ಪೀಪಲ್ ಎಂಬ ಆಪ್ ಮೂಲಕ ಎಲ್ಲ ಅಪ್ಡೇಟ್ ಗಳನ್ನು ಕೊಡುತ್ತದೆ.

ಇಷ್ಟೆಲ್ಲಾ ಅನುಕೂಲಗಳಿರುವ ಆಂಡ್ರಾಯ್ಡ್ 4.0 ಐಸ್ ಕ್ರೀಮ್ ಸ್ಯಾಂಡ್ವಿಚ್ ತಂತ್ರಾಂಶ ವಿರುವ ಟ್ಯಾಬ್ಲೆಟ್ ಇಲ್ಲವೆ ಸ್ಮಾರ್ಟ್ ಫೋನ್ ಕೊಂಡರೆ ಒಳ್ಳೆಯದು.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot