ಬ್ರಹ್ಮಾಂಡವನ್ನು ಟೆಲಿಸ್ಕೋಪ್ ಇಲ್ಲದೆ ಇಲ್ಲೇ ನೋಡಿ

Posted By: Varun
ಬ್ರಹ್ಮಾಂಡವನ್ನು ಟೆಲಿಸ್ಕೋಪ್ ಇಲ್ಲದೆ ಇಲ್ಲೇ ನೋಡಿ

ಬ್ರಹ್ಮಾಂಡದ ವಿಸ್ತಾರ, ಯಾವ ಯಾವ ಗ್ರಹಗಳು, ತಾರೆಗಳು, ನಿಹಾರಿಕೆಗಳು ಇದರಲ್ಲಿವೆಯೋ ನಮಗೆ ಸರಿಯಾಗಿ ಗೊತ್ತೋ ಇಲ್ಲವೋ, ಆದರೆ ರಾತ್ರಿಯಲ್ಲಿ ಆಕಾಶವನ್ನು ನೋಡಿದರೆ, ನಕ್ಷತ್ರ, ಚಂದ್ರನತ್ತ ನಮ್ಮ ಕಣ್ಣುಗಳು ಕುತೂಹಲದ ನೋಟ ಬೀರುತ್ತವೆ.

ಇದಕ್ಕಾಗಿಯೇ ಅಲ್ಲವೆ ವಿಜ್ಞಾನಿಗಳು ಹಲವಾರು ಉಪಗ್ರಹಗಳು, ಹಬಲ್ ಟೆಲಿಸ್ಕೊಪ್ ಗಳನ್ನು ಕಕ್ಷೆಗೆ ಬಿಟ್ಟಿರುವುದು. ಗೆಲೆಲಿಯೋ ಗುರು ಗ್ರಹದ ಚಂದ್ರನನ್ನು ಯಾವಾಗ ತನ್ನ ಟೆಲಿಸ್ಕೊಪ್ ನಲ್ಲಿ ನೋಡಿ ಪತ್ತೆ ಮಾಡಿದನೋ , ಆವಾಗಿನಿಂದ ನಾವು ನಮ್ಮ ಸೌರಮಂಡಲದ, ಬೇರೆ ನಕ್ಷತ್ರಗಳ, ತಾರಾಪುಂಜಗಳ ಬಗ್ಗೆ ಅನ್ವೇಷಣೆ ಮಾಡುತ್ತಲೇ ಇದ್ದೇವೆ.

ನಮ್ಮ ಹತ್ತಿರವೂ ನಾಸಾದ ಬೆಲೆಬಾಳುವ ಟೆಲಿಸ್ಕೊಪ್ ಗಳು ಇದ್ದರೆ ನಾವೂ ವರ್ಣರಂಜಿತ ಬ್ರಹ್ಮಾಂಡದ ಸೌಂದರ್ಯವನ್ನು ಸವಿಯಬಹುದು ಎಂದುಕೊಂಡಿ ರುತ್ತೇವೆ ಅಲ್ಲವೆ. ನಮಗೋಸ್ಕರ worldwidetelescope.org ಹೆಸರಿನ ವೆಬ್ಸೈಟ್ ಅನ್ನು ನೀವು ಭೇಟಿ ಕೊಟ್ಟರೆ ಸಾಕು, ನಿಮ್ಮ ಮಾನಿಟರ್ ಅನ್ನೇ ಟೆಲಿಸ್ಕೊಪ್ ರೀತಿ ಬಳಸಿಕೊಂಡು ನೋಡಬಹುದು.

ಕೇವಲ ಒಂದು ಆಪ್ ಡೌನ್ಲೋಡ್ ಮಾಡಿಕೊಂಡರೆ ಸಾಕು, ಇಡೀ ಬ್ರಹ್ಮಾಂಡವೇ ನಿಮ್ಮ ಮುಂದಿರುತ್ತದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot