ಈ ಏಸರ್ ಲ್ಯಾಪ್ ಟಾಪ್ ಅಂತಿಥದ್ದಲ್ಲ; ಬಹುರೂಪಿ!

By Super
|
ಈ ಏಸರ್ ಲ್ಯಾಪ್ ಟಾಪ್ ಅಂತಿಥದ್ದಲ್ಲ; ಬಹುರೂಪಿ!
ಈಗ ಮೊಬೈಲ್ ಜತೆಗೆ ಕಂಪ್ಯೂಟರ್ ಹಾಗೂ ಲ್ಯಾಪ್ ಟಾಪ್, ಟ್ಯಾಬ್ ಲೆಟ್ ಗಳಿಗೂ ಕಾಲ. ಈ ವಿಷಯವನ್ನು ಗಮನವಿಟ್ಟು ಸ್ಟಡಿ ಮಾಡಿ ಹೊಸ ಚೆಂದದ ಎರಡು ಲ್ಯಾಪ್ ಟಾಪ್ ಗಳನ್ನು ರೆಡಿ ಮಾಡಿ ಮಾರುಕಟ್ಟೆಗೆ ಬಿಡುತ್ತಿದೆ ಏಸರ್ ಕಂಪೆನಿ. ಏಸರ್ ಆಸ್ಪಾಯರ್ 5755 ಮತ್ತು ಆಸ್ಪಾಯರ್ 4755, ಈ ಎರಡು ಲ್ಯಾಪ್ ಟಾಪ್ ಗಳು.

* ಏಸರ ಆಸ್ಪಾಯರ್ 5755 ಇದು 15 ಇಂಚ್ ಸ್ಕ್ರೀನ್ ಹೊಂದಿದ್ದರೆ ಏಸರ ಆಸ್ಪಾಯರ್ 4755 ಇದು 14 ಇಂಚ್ ಸ್ಕ್ರೀನ್ ಹೊಂದಿದೆ.

* ನೋಡಲಿಕ್ಕೆ ಇನ್ನೆರಡು ಕಣ್ಣಿದ್ದರೂ ಸಾಲದು ಎಂಬಂತಿರುವ ಈ ಲ್ಯಾಪ್ ಟಾಪ್ ಗಳು " ಗಾರ್ಜಿಯಸ್ ಬೈ ನೇಚರ್ " ಎಂಬ ಹೇಳಿಕೆಗೆ ತಕ್ಕುದಾಗಿವೆ.

* ಎರಡರಲ್ಲೂ i5 ಕೋರ್ ಪ್ರೊಸೆಸರ್ ಇದ್ದು ಇದು ಅತಿ ವೇಗದ ಕಾರ್ಯಕ್ಷಮತೆ ನೀಡಲು ಸಮರ್ಥವಾಗಿದೆ. ಮತ್ತು ಇವೆರಡರಲ್ಲೂ NVIDIA GeForce GT 500 ಗ್ರಾಫಿಕ್ಸ್ ಪ್ರೊಸೆಸಿಂಗ್ ಯುನಿಟ್ ಇದ್ದು, ಇವು ಗೇಮಿಂಗ್ಸ್ ಹಾಗೂ ಗ್ರಾಫಿಕ್ಸ್ ಗೆ ಸಹಾಯಕವಾಗಿವೆ.

* 1.3 ಮೆಗಾ ಪಿಕ್ಸೆಲ್ ವೆಬ್ ಕ್ಯಾಮ್, ಹೈ ಕ್ವಾಲಿಟಿ ವಿಡಿಯೋ ಚಾಟಿಂಗ್, ಬ್ಲೂ ಟೂಥ್, Wi-Fi, USB, 2 ಇನ್ ಬಿಲ್ಟ್ ಸ್ಪೀಕರ್ಸ್, ಡಾಲ್ಬಿ ಡಿಜಿಟಲ್ ಸೌಂಡ್ ತಂತ್ರಜ್ಞಾನ ಇವುಗಳಲ್ಲಿವೆ.

* 5 ವಿಧದ ಬಣ್ಣಗಳಲ್ಲಿ ಲಭ್ಯವಿರುವ ಈ ಎರಡು ಲ್ಯಾಪ್ ಟಾಪ್ ಗಳು ರು. 27,499 ರ ಬೆಲೆಯಲ್ಲಿ ಲಭ್ಯವಿದೆ. ಈ ಕಂಪೆನಿಯ ಏಕೈಕ ಗುರಿ ಭಾರತದಲ್ಲಿ ತನ್ನ ಮಾರಾಟವನ್ನು ಹೆಚ್ಚಿಸಿಕೊಳ್ಳುವುದು.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X