Subscribe to Gizbot

ಆಹಾ ಎನಿಸುವ ಸ್ಯಾಮ್ ಸಂಗ್ ಗೆಲಾಕ್ಸಿ ಟ್ಯಾಬ್ ಲೆಟ್!

Posted By: Super

ಆಹಾ ಎನಿಸುವ ಸ್ಯಾಮ್ ಸಂಗ್ ಗೆಲಾಕ್ಸಿ ಟ್ಯಾಬ್ ಲೆಟ್!
ಈಗ ಮಾರುಕಟ್ಟೆಯಲ್ಲಿ ಮೊಬೈಲ್ ಜತೆಗೆ ಟ್ಯಾಬ್ ಲೆಟ್ ಗೂ ಕಾಲ. ಹಲವು ಕಂಪೆನಿಗಳ, ಬಗೆಬಗೆಯ ಆಕರ್ಷಕ ವಿನ್ಯಾಸದ ಟ್ಯಾಬ್ ಲೆಟ್ ಗಳು ಮಾರುಕಟ್ಟೆಯಲ್ಲಿ ಸ್ಪರ್ಧೆಗೆ ರೆಡಿಯಾಗಿವೆ. ಇದೀಗ ನಾವು ' ಸ್ಯಾಮ್ ಸಂಗ್ ಗೆಲಾಕ್ಸಿ ಟ್ಯಾಬ್ 8.9 ' ನಲ್ಲಿ ಏನೇನಿದೆ ಅಂತ ನೋಡೋಣ.


ಇದು ಹೆಸರಿಗೆ ತಕ್ಕಂತೆ 8.9 ಫುಲ್ ಟಚ್ ಸೆನ್ಸೆಟಿವ್ ಸ್ಕ್ರೀನ್ ಡಿಸ್ ಪ್ಲೇ ಹೊಂದಿರುವ ಟ್ಯಾಬ್ ಲೆಟ್. ಬಿಡುಗಡೆಯ ದಿನಾಂಕ ಇನ್ನೂ ನಿಗದಿಯಾಗಿಲ್ಲದಿದ್ದರೂ ಈಗಾಗಲೇ ಇಂಗ್ಲೆಂಡಿನಲ್ಲಿ ಅಡ್ವಾನ್ಸ್ ಬುಕಿಂಗ್ ಪ್ರಾರಂಭಿಸಿದೆ ಆನ್ ಲೈನ್ ಕಂಪೆನಿ ಅಮೇಝಾನ್.

ಆಂಡ್ರಾಯ್ಡ್ OS ಹೊಂದಿರುವ ಇದರಲ್ಲಿ ಉತ್ತಮ ರೆಸೊಲ್ಯೂಷನ್ ಹೊಂದಿರುವ HD ಪ್ಲೇ ಬ್ಯಾಕ್ ಕೂಡ ಇದೆ.

ಇದರಲ್ಲಿ 3G + Wi-Fi ಲಭ್ಯವಿದೆ ಹಾಗೂ ಹನಿಕಾಂಬ್ OS ಆಂಡ್ರಾಯ್ಡ್ ಕೂಡ ಬರಲಿದೆ. ಸದ್ಯ UK ಯಲ್ಲಿ ಬಿಡುಗಡೆಯ ಸುದ್ದಿಯಲ್ಲಿರುವ ಈ ಟ್ಯಾಬ್ ಇನ್ನೇನು ಭಾರತದ ಮಾರುಕಟ್ಟೆಗೆ ಬರಲಿದೆ. ನೋಡಿದ ಮೇಲೆ ಇದು ನಿಮಗೂ ಒಂದು ಬೇಕೆನಿಸಿದರೆ ಆಶ್ಚರ್ಯವೇನೂ ಇಲ್ಲ ಬಿಡಿ!

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot