ಸಂಗೀತಕ್ಕೆ ಸೋನಿ, ಮನಿ ಉಳಿಸೋಕೆ ಡೆಲ್ ಟ್ಯಾಬ್ಲೆಟ್

Posted By: Staff

ಸಂಗೀತಕ್ಕೆ ಸೋನಿ, ಮನಿ ಉಳಿಸೋಕೆ ಡೆಲ್ ಟ್ಯಾಬ್ಲೆಟ್
ಶತ್ರುಗಳಂತೆ ಮಾರುಕಟ್ಟೆಯಲ್ಲಿ ಪೈಪೋಟಿ ನಡೆಸುತ್ತಿರುವ ಎರಡು ಪ್ರಮುಖ ಟ್ಯಾಬ್ಲೆಟ್ ಯಾವುದು? ಡೆಲ್ ಸ್ಟ್ರೀಕ್ 10 ಮತ್ತು ಸೋನಿ ಎಸ್1 ಅಂತ ಹೆಚ್ಚಿನವರು ಅಭಿಪ್ರಾಯಪಡುತ್ತಾರೆ. ಅದರಲ್ಲಿ ಡೆಲ್ ಬಂದು 135 ದಿನವಾದರೆ ಸೋನಿ ಮಾರುಕಟ್ಟೆಗೆ ಬಂದು 25 ದಿನಗಳು ಕಳೆದಿವೆ. ಇವೆರಡು ಟ್ಯಾಬ್ಲೆಟ್ ಗಳ ನಡುವೆ ಕೆಲವು ಸಾಮ್ಯತೆ, ಭಿನ್ನತೆಗಳು ಗಮನ ಸೆಳೆಯುತ್ತವೆ.

ಡೆಲ್ ಸ್ಟ್ರೀಕ್ 10 5 ಇಂಚಿನ 800x480 ಟಿಎಫ್ಟಿ ಡಿಸ್ ಪ್ಲೇ ಹೊಂದಿದೆ. ಎಲ್ಸಿಡಿ ಡಿಸ್ ಪ್ಲೇ ಅತ್ಯಧಿಕ ಗುಣಮಟ್ಟ ಮತ್ತು ಬಣ್ಣಗಳನ್ನು ತೋರಿಸುತ್ತದೆ. ವಿಡಿಯೋ ನೋಡಲು ಕೂಡ ಇದು ಸೂಕ್ತವಾಗಿದೆ.

ಸೋನಿ ಎಸ್1 ವಿಶಾಲವಾದ 9.4 ಇಂಚಿನ 1280x768 ರೆಸಲ್ಯೂಷನ್ ನ ಡಿಸ್ ಪ್ಲೇ ಹೊಂದಿದೆ. TFT 159PPI ತಂತ್ರಜ್ಞಾನದಿಂದ ಬಂದಿರುವ ಡಿಸ್ ಪ್ಲೇ ಇಷ್ಟವಾಗುವಂತ್ತಿದೆ. ಇವೆರಡೂ ಟ್ಯಾಬ್ಲೆಟ್ ಗಳು ಮಲ್ಟಿ ಟಚ್ ಸಾಮರ್ಥ್ಯ ಹೊಂದಿವೆ. ಸೋನಿ ಇತ್ತೀಚಿನ ಟಚ್ ಸ್ಕ್ರೀನ್ ವರ್ಷನ್ ಅಳವಡಿಸಿದ್ದರೂ ಎಲ್ ಸಿಡಿ ಡಿಸ್ ಪ್ಲೇ ಇಲ್ಲದಿರುವುದರಿಂದ ಸ್ವಲ್ಪ ಸಪ್ಪಗೆ ಕಾಣುತ್ತದೆ.

ಇವೆರಡೂ ಟ್ಯಾಬ್ಲೆಡ್ ಗಳು ಆಂಡ್ರಾಯ್ಡ್ ಅಪರೇಟಿಂಗ್ ಸಿಸ್ಟಮ್ ಹೊಂದಿವೆ. ಡೆಲ್ ಸ್ಟ್ರೀಕ್ v2.2 Froyo ಆಂಡ್ರಾಯ್ಡ್ ವರ್ಸನ್ ಹೊಂದಿದ್ದರೆ, ಸೋನಿ ಫ್ಲಾಷ್ 10.3 ವರ್ಸನ್ ಹೊಂದಿದೆ. ಆದರೆ ಇವೆರಡು ಟ್ಯಾಬ್ಲೆಟ್ ಗಳಿಗೆ ವಿಭಿನ್ನ ಪ್ರೊಸೆಸರ್ ಅಳವಡಿಸಲಾಗಿದೆ. ಸೋನಿ ಎಸ್1 NVDIA Tegra 250 ಡ್ಯೂಯಲ್ ಕೊರ್ ಪ್ರೊಸೆಸರ್ ಹೊಂದಿದೆ. ಡೆಲ್ NVDIA Tegra 250 ಡ್ಯೂಯಲ್ ಕೋರ್ ಪ್ರೊಸೆಸರ್ ಹೊಂದಿದೆ.

ಫೀಚರ್ ಗಳ ವಿಷಯದಲ್ಲಿ ಸೋನಿ ಮುಂದಿದೆ. ಸೋನಿಯ Qriocity ಪ್ಲಾಟ್ ಫಾರ್ಮ್ ನಿಂದಾಗಿ ಸಂಗೀತ ಕೇಳುವುದು ಹೆಚ್ಚು ಮಧುರವಾಗಿದೆ. ಇದರ ಮುಂದೆ ಡೆಲ್ ಸ್ಟ್ರೀಕ್ ಸಂಗೀತ ಮಂಕಾಗಿ ಕಾಣುತ್ತದೆ. ಸೋನಿ ಎಸ್1ನಲ್ಲಿರುವ ಆಕರ್ಷಕ ಗೇಮ್ಸ್ ಗಳೂ ಇಷ್ಟವಾಗುತ್ತದೆ.

ಉಳಿದಂತೆ ಬ್ಲೂಟೂಥ್, ಯುಎಸ್ಬಿ ಮತ್ತು ವೈಫೈ ವಿಷಯಗಳಲ್ಲಿ ಇವೆರಡರ ನಡುವೆ ಹೆಚ್ಚಿನ ಭಿನ್ನತೆಗಳಿಲ್ಲ. ಮುಖ್ಯವಾಗಿ ದರ ನಿಮ್ಮ ಪ್ರಮುಖ ಕಾಳಜಿಯಾಗಿದ್ದರೆ ಇವೆರಡರ ನಡುವೆ ಕೆಲವು ಸಾವಿರ ರುಪಾಯಿಯ ಅಂತರವಿದೆ. ಅಗ್ಗದ ಟ್ಯಾಬ್ಲೆಟ್ ಬಯಸುವರು ನೀವಾದರೆ ಸುಮಾರು 20,250 ರು. ನೀಡಿ ಡೆಲ್ ಸ್ಟ್ರೀಕ್ 10 ಖರೀದಿಸಬಹುದು. ಸೋನಿ ಲವರ್ ನೀವಾಗಿದ್ದರೆ ಎಸ್1ಗೆ ಸುಮಾರು 27 ಸಾವಿರ ನೀಡಿ ಖರೀದಿಸಬಹುದು.

ನೂತನ ತಂತ್ರಜ್ಞಾನ, ದೊಡ್ಡ ಸ್ಕ್ರೀನ್, ಆಕರ್ಷಕ ಗೇಮ್ ಅನುಭವ ಬಯಸುವರು ನೀವಾಗಿದ್ದರೆ ಸೋನಿ ಎಸ್1 ಖರೀದಿಸಬಹುದು.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot