ಸ್ಯಾಮ್ ಸಂಗ್ ನಿಂದ ಎರಡು ಬ್ಯೂಟಿ ಟ್ಯಾಬ್ಲೆಟ್

By Super
|
ಸ್ಯಾಮ್ ಸಂಗ್ ನಿಂದ ಎರಡು ಬ್ಯೂಟಿ ಟ್ಯಾಬ್ಲೆಟ್
ಸ್ಯಾಮ್ ಸಂಗ್ ಎರಡು ಟ್ಯಾಬ್ಲೆಟ್ ಕಂಪ್ಯೂಟರ್ ಗಳನ್ನು ಭಾರತಕ್ಕೆ ಪರಿಚಯಿಸುವುದಾಗಿ ಪ್ರಕಟಿಸಿದೆ. ಇವೆರಡು ಮಾರುಕಟ್ಟೆಯಲ್ಲಿ ಜನಪ್ರಿಯವಾಗಿರುವ ಗ್ಯಾಲಕ್ಸಿ ಆಂಡ್ರಾಯ್ಡ್ ಫೋನ್ ಗಳಾಗಿವೆ. ಇವೆರಡರ ಹೆಸರು ಕ್ರಮವಾಗಿ ಸ್ಯಾಮ್ ಸಂಗ್ ಗ್ಯಾಲಕ್ಸಿ 750 ಮತ್ತು ಸ್ಯಾಮ್ ಸಂಗ್ ಗ್ಯಾಲಕ್ಸಿ 730 ಎಂದಾಗಿದೆ. ಇವೆರಡು ಉತ್ಪನ್ನಗಳು ಈ ತಿಂಗಳ ಅಂತ್ಯದಲ್ಲಿ ದೇಶದ ಮಾರುಕಟ್ಟೆಗೆ ಪ್ರವೇಶಿಸಲಿವೆ.

ಇದರಲ್ಲಿ ಆಂಡ್ರಾಯ್ಡ್ 3.1 ಅಪರೇಟಿಂಗ್ ಸಿಸ್ಟಮ್ ಹೊಂದಿರುವ ಸ್ಯಾಮ್ ಸಂಗ್ ಗ್ಯಾಲಕ್ಸಿ 750ರ ದರ 36, 200 ರುಪಾಯಿ ಆಗಿದೆ. ಇದು 1 ಜಿಬಿ RAM ಮತ್ತು 1 ಗಿಗಾಹರ್ಟ್ಸ್ ಪ್ರೊಸೆಸರ್ ಹೊಂದಿದೆ. ಇದಕ್ಕಿಂತ ಸಣ್ಣದಾಗಿರುವ ಗ್ಯಾಲಕ್ಸಿ 730 ಸಣ್ಣದಾದ ಅಂದರೆ 8.9 ಇಂಚಿನ ಸ್ಕ್ರೀನ್ ಹೊಂದಿದೆ. ಇದರ ದರ 33,990 ರುಪಾಯಿ ಆಗಿದೆ.

ಇವೆರಡು ಟ್ಯಾಬ್ಲೆಟ್ ಗಳಲ್ಲಿ ಒಂದಿಷ್ಟು ಸಾಮ್ಯತೆ ಇದೆ. ಅಂದರೆ 1ಜಿಬು ರಾಮ್ ಮತ್ತು ಒಂದು ಗಿಗಾಹರ್ಟ್ಸ್ ಪ್ರೊಸೆಸರ್ ಎರಡರಲ್ಲೂ ಇವೆ. ಇದರಲ್ಲಿ ಸ್ಯಾಮ್ ಸಂಗ್ ಗ್ಯಾಲಕ್ಸಿ 750 ಟ್ಯಾಬ್ಲೆಟ್ 7,000 ಮೆಗಾಹರ್ಟ್ಸ್ ಬ್ಯಾಟರಿ ಮತ್ತು ಗ್ಯಾಲಕ್ಸಿ 730 6,100 ಮೆಗಾಹರ್ಟ್ಸ್ ಬ್ಯಾಟರಿ ಹೊಂದಿದೆ.

ಇವೆರಡರಲ್ಲೂ ಹಲವು ಅಡ್ವಾನ್ಸ್ ಡ್ ಫೀಚರ್ ಗಳಿವೆ. ಇದರಲ್ಲಿರುವ ಮೊಬೈಲ್ ಟಿವಿ ಮೂಲಕ ಗ್ರಾಹಕರು ಭಾರತದ 15 ಟೆಲಿವಿಷನ್ ಚಾನೆಲ್ ಗಳನ್ನು ನೋಡಬಹುದು. ಇದರಲ್ಲಿರುವ ರೀಡರ್ ಅಪ್ಲಿಕೇಷನ್ ಮೂಲಕ ಗ್ರಾಹಕರು 17 ಸುದ್ದಿಪತ್ರಿಕೆಗಳನ್ನು ಓದಬಹುದು. ಮ್ಯಾಗಜಿನ್ ಗಳನ್ನೂ ಓದಬಹುದು. ಜೊತೆಗೆ 30 ಸಾವಿರಕ್ಕಿಂತ ಹೆಚ್ಚು ಭಾರತೀಯ ಭಾಷೆಯಲ್ಲಿರುವ ಪುಸ್ತಕಗಳನ್ನು ಓದಬಹುದು.

ಇವೆರಡು ಟ್ಯಾಬ್ಲೆಟ್ ಗಳನ್ನು ವೊಡಾಫೋನ್ ಹೊರತರಲಿದೆ. ವೊಡಾಫೋನ್ ಇವೆರಡು ಟ್ಯಾಬ್ಲೆಟ್ ಗಳಿಗೆ ಕೇವಲ 3 ಸಾವಿರ ರುಪಾಯಿಗಳಿಗೆ 2ಜಿಬಿಗಿಂತಲೂ ಹೆಚ್ಚು ಉಚಿತ ಡೇಟಾ ಮತ್ತು 6 ತಿಂಗಳು ವ್ಯಾಲಿಡಿಟಿ ಆಫರ್ ನೀಡಲಿದೆಯಂತೆ. ಸದ್ಯ ಮಾರುಕಟ್ಟೆಯಲ್ಲಿ ಜನಪ್ರಿಯವಾಗಿರುವ ಸ್ಯಾಮ್ ಸಂಗ್ ಗ್ಯಾಲಕ್ಸಿ ಸರಣಿಯಲ್ಲಿ ಬರಲಿರುವ ಹೊಸ ಟ್ಯಾಬ್ಲೆಟ್ ಗಳು ಗ್ರಾಹಕರಿಗೆ ಇಷ್ಟವಾಗಲಿದೆ ಎಂಬ ನಿರೀಕ್ಷೆ ಕಂಪನಿಯದು.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X