ಸೋನಿ ಡ್ಯುಯಲ್ ಸ್ಕ್ರೀನ್ ಟ್ಯಾಬ್ಲೆಟ್; ನೋಡಲೆಂಥ ಚೆಂದ!

ಎಕೆಂದರೆ, ಬರುತ್ತಿದೆ ಸುಪ್ರಸಿದ್ಧ ಸೋನಿ ಕಂಪೆನಿಯ S ಸಿರೀಸ್ ಟ್ಯಾಬ್ಲೆಟ್ ಗಳಾದ S1 ಹಾಗೂ S2. ಈ ಎರಡು ಟ್ಯಾಬ್ಲೆಟ್ ಗಳ ಮೂಲಕ ಸೋನಿ ಕಂಪೆನಿ ಸಂಪರ್ಕ ಮತ್ತು ಮನರಂಜನೆ ಎರಡನ್ನೂ ಒಂದರಲ್ಲೇ ಬೆಸೆಯುವ ಪ್ರಯತ್ನದಲ್ಲಿದೆ.
ಸೋನಿ ಕಂಪೆನಿಯ ಈ ಹೊಸ ಮೊಬೈಲ್, ತೀರಾ ಹೊಸ ವಿನ್ಯಾಸ ಎನಿಸಿದರೂ ತಂತ್ರಜ್ಞಾನ ಹಾಗೂ ವಿಶೇಷತೆಗಳಲ್ಲಿ ಯಾವುದೇ ರಾಜಿ ಇಲ್ಲ.
ಗೂಗಲ್ ಆಂಡ್ರಾಯ್ಡ್ 3.0 ಹನಿಕಾಂಬ್ OS ಮೂಲಕ ಎರಡೂ ಡಿವೈಸ್ ಬೆಸೆದು ಕಾರ್ಯ ನಿರ್ವಹಿಸಲಿರುವ ಈ ಮೊಬೈಲ್ ಸೋನಿ ಕ್ರಿಯಾಸಿಟಿ ಫ್ಲಾಟ್ ಫಾರ್ಮ್ ಹೊಂದಿದೆ. ಇದು ಹೇರಳವಾದ ಸಂಗೀತ ಸಂಗ್ರಹ ಹೊಂದಿದೆ.
ಇದರ ಡಿಸ್ ಪ್ಲೇ 9.4 ಇಂಚ್ ಇದ್ದು ಇದೇ ಮನೆಮಾತಾಗುವಷ್ಟು ವಿಶಿಷ್ಠವಾಗಿದೆ. ಸೋನಿ S1 ನಲ್ಲಿ 9.4 ಇಂಚ್ ಇರುವ ಡಿಸ್ ಪ್ಲೇ ಒಂದು ಇದ್ದರೆ S2 ನಲ್ಲಿ ಅದು ಡ್ಯುಯಲ್ ಆಗಿದೆ. ಈ ಡ್ಯುಯಲ್ ವಿಶೇಷತೆ ಎಂದರೆ ಏಕಕಾಲಕ್ಕೆ 2 ಸ್ಕ್ರೀನ್ ಉಪಯೋಗ ಪಡೆಯಬಹುದು.
ಇನ್ನುಳಿದ ವಿಶೇಷತೆಗಳು:
* 5.5 ಇಂಚ್, 1024 x 480 ಪಿಕ್ಸೆಲ್ ರೆಸೊಲ್ಯೂಷನ್
* S1 ನಲ್ಲಿ ವೈ-ಫೈ ಹಾಗೂ S2 ದಲ್ಲಿ ವೈ-ಫೈ/ 3G ಸಹಕಾರದ AT&T
* ಪ್ಲೇ ಸ್ಟೇಷನ್ಸ್ 1 & 2 ಲಭ್ಯತೆ
ಆಗಸ್ಟ್ ನಲ್ಲಿ ಅಮೇರಿಕಾ ಮಾರುಕಟ್ಟೆಗೆ ಬರಲಿರುವ ಇದು ನಂತರ ಶೀಘ್ರದಲ್ಲಿಯೇ ಏಷ್ಯಾ ಮಾರುಕಟ್ಟೆಯನ್ನು ಪ್ರವೇಶಿಸುವ ನಿರೀಕ್ಷೆಯಿದೆ. ಈ ಹೊಸ ಮೊಬೈಲ್ ಗಳ ದರ ಬೆಲೆ ರು. 27,000 ಎಂದು ಅಂದಾಜಿಸಲಾಗಿದೆ.


Click it and Unblock the Notifications








