ಆಸಸ್ ಈ ಪ್ಯಾಡ್;ಏಸರ್ ಐಕೋನಿಯಾಗಳಲ್ಲಿ ನಿಮ್ಮ ಆಯ್ಕೆ?

Posted By: Staff

ಆಸಸ್ ಈ ಪ್ಯಾಡ್;ಏಸರ್ ಐಕೋನಿಯಾಗಳಲ್ಲಿ ನಿಮ್ಮ ಆಯ್ಕೆ?
ಮಾರುಕಟ್ಟೆಯಲ್ಲೀಗ ಟ್ಯಾಬ್ಲೆಟ್ ಮಾರಾಟದ ಭರಾಟೆಯ ಕಾಲ. ಹೊಸ ಹೊಸ ಕಂಪೆನಿಗಳು ನವೀನ ರೀತಿಯ ಟ್ಯಾಬ್ಲೆಟ್ ಪಿಸಿಗಳನ್ನು ಬಿಡುಗಡೆ ಮಾಡಿ ಮಾರುಕಟ್ಟೆಯಲ್ಲಿ ಸಾಕಷ್ಟು ಸ್ಪರ್ಧೆಯಿರುವಂತೆ ಮಾಡಿವೆ.

ಇದೀಗ ನಾವು ಇಂತಹ ಎರಡು ಬಿಡುಗಡೆಯಾಗಿರುವ ಟ್ಯಾಬ್ಲೆಟ್ ಗಳ ವಿಮರ್ಶೆ ನೋಡೋಣ. ಅವು, ಆಸಸ್ ಈ ಪ್ಯಾಡ್ ಹಾಗೂ ಏಸರ್ ಐಕೋನಿಯಾ.
ಹೆಚ್ಚಿನ ಲೇಟೆಸ್ಟ್ ಟ್ಯಾಬ್ಲೆಟ್ ಗಳೆಲ್ಲವೂ ಈಗ ಆಂಡ್ರಾಯ್ಡ್ 3.0 ಹನಿಕಾಂಬ್ ಆವೃತ್ತಿಯ ಮಾಲಕ ಕಾರ್ಯ ನಿರ್ವಹಿಸುವಂಥವೇ ಆಗಿವೆ. ಇದೂ ಕೂಡ ಹಾಗೆಯೇ ಇದ್ದು ಬೇರೆ ವಿಶೇಷಗಳು ಹೀಗಿವೆ:

* ಎರಡೂ ಕೂಡ ಒಂದನ್ನೊಂದು ಸಾಕಷ್ಟು ಹೋಲುತ್ತವೆ.

* ಆಸಸ್ ಈ ಪ್ಯಾಡ್ 10.7 ಇಂಚ್ ಉದ್ದ, 6.7 ಇಂಚ್ ಅಗಲವಾಗಿದ್ದು ಆಕರ್ಷಕವಾಗಿದೆ. ಇದು 10.1 ವಿಸ್ತಾರ, 1280 x 800 ರೆಸೊಲ್ಯೂಷನ್ ಮತ್ತು TFT ಟಚ್ ಸ್ಕ್ರೀನ್ ಹೊಂದಿದೆ.

* ಏಸರ್ ಐಕೋನಿಯಾ 10.1 ಇಂಚ್ ಉದ್ದ, 7 ಇಂಚ್ ಅಗಲ ಹಾಗೂ 0.54 ಇಂಚ್ ದಪ್ಪ ಈ ಅಳತೆಯ ಗಾತ್ರ ಹೊಂದಿದೆ. ಇದು 10.1 ವಿಸ್ತಾರ, 1280 x 800 ರೆಸೊಲ್ಯೂಷನ್ ಮತ್ತು TFT ಟಚ್ ಸ್ಕ್ರೀನ್ ಹೊಂದಿದೆ.

* ಎರಡೂ ಕೂಡ ಆಂಡ್ರಾಯ್ಡ್ ಹನಿಕಾಂಬ್ OS ಹೊಂದಿದ್ದು Nvidia ಟೆಗ್ರಾ 2 ಮತ್ತು 1 GB RAM ಮೂಲಕ ಕಾರ್ಯ ನಿರ್ವಹಿಸುತ್ತವೆ. ಆದರೆ ಆಸಸ್ ಈ ಪ್ಯಾಡ್ 16 GB ಸಾಮರ್ಥ್ಯದ ಇನ್ಟಾಲ್ಡ್ ಸ್ಟೋರೇಜ್ ಹೊಂದಿದೆ. ಎರಡೂ ಮೊಬೈಲುಗಳಲ್ಲಿ ಮೈಕ್ರೋ SD ಕಾರ್ಡ್ ಮೂಲಕ ವಿಸ್ತರಿಸಬಹುದಾದ 32 GB ಮೆಮೊರಿ ಇದೆ.

* ಎರಡರಲ್ಲೂ 5 ಮೆಗಾ ಪಿಕ್ಸೆಲ್ ಕ್ಯಾಮೆರಾ ಅಳವಡಿಸಲಾಗಿದ್ದು ಚಾಟಿಂಗ್, ಕಾನ್ಫರೆನ್ಸ್ ಅಳವಡಿಸಲಾಗಿದ್ದು ಆಧುನಿಕತೆ ಟಚ್ ಇದೆ. ಜೊತೆಗೆ ಏಸರ್ ಐಕೋನಿಯಾದಲ್ಲಿ 2 ಮೆಗಾ ಪಿಕ್ಸೆಲ್ ರೇರ್ ಕ್ಯಾಮೆರಾ ಕೂಡ ಲಭ್ಯವಿದ್ದು, ಆಸಸ್ EE ಪ್ಯಾಡ್ (1.2 ಮೆಗಾ ಪಿಕ್ಸೆಲ್)ಗಿಂತ ವಿಡಿಯೋ ಕ್ಲಾರಿಟಿ ಚೆನ್ನಾಗಿದೆ.

* ಏಸರ್ ಐಕೋನಿಯಾ ಬ್ಯಾಟರಿ ಬ್ಯಾಕಪ್ 24.1 ಇದ್ದರೆ ಆಸಸ್ ಈ ಪ್ಯಾಡ್ 24.4 ವ್ಯಾಟ್ ತಾಸುಗಳ ಸಾಮರ್ಥ್ಯ ಹೊಂದಿದೆ.

* ಇನ್ನು ಅತ್ಯಂತ ಮುಖ್ಯವಾದ ಬೆಲೆ ವಿಷಯದಲ್ಲಿ, ಐಕೋನಿಯಾ ಏಸರ್ ಬೆಲೆ ರು. 25,000. ಆದರೆ 2 ವಿಧಗಳಲ್ಲಿ ಲಭ್ಯವಿರುವ ಆಸಸ್ ಈ ಪ್ಯಾಡ್ ಬೆಲೆಗಳು ರು. 18,354 ಹಾಗೂ 22,954.

ಎಲ್ಲಾ ವಿಷಯಗಳನ್ನು ತಿಳಿದುಕೊಂಡ ಮೇಲೆ ನಿಮ್ಮ ಆಯ್ಕೆ ನಿಮ್ಮ ಕೈನಲ್ಲಿದೆ. ನಿಮ್ಮಾಯ್ಕೆಯ ಟ್ಯಾಬ್ಲೆಟ್ ಕೂಡ ನಿಮ್ಮ ಕೈ ಸೇರಲಿದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot