ಎಮ್ ಎಸ್ ಐ ಟ್ಯಾಬ್ಲೆಟ್ ಜೋಡಿ; ಮಾಡುತ್ತಿವೆ ಮೋಡಿ!

By Super
|
ಎಮ್ ಎಸ್ ಐ ಟ್ಯಾಬ್ಲೆಟ್ ಜೋಡಿ; ಮಾಡುತ್ತಿವೆ ಮೋಡಿ!
ಎಮ್ ಎಸ್ ಐ, ಡಿಜಿಟಲ್ ಲೋಕದಲ್ಲಿ ಉದಯಿಸುತ್ತಿರುವ ಹೊಸ ಕಂಪೆನಿ. ಕಳೆದ 25 ವರ್ಷಗಳಿಂದ ಡಿಜಿಟಲ್ ಲೋಕದಲ್ಲಿ ಸಲ್ಲಿಸುತ್ತಿರುವ ಅನುಪಮ ಸೇವೆಯಿಂದ ಇದು ಎಲ್ಲೆಡೆ ಪ್ರಸಿದ್ಧವಾಗಿದೆ.

ಎರಡು ಹೊಸ ಟ್ಯಾಬ್ಲೆಟ್ ಭಾರತದಲ್ಲಿ ಬಿಡುಗಡೆ ಮಾಡುವ ಮೂಲಕ ಈ ಕಂಪೆನಿ ಮತ್ತೊಮ್ಮೆ ಸದ್ದು-ಸುದ್ದಿ ಮಾಡಿದೆ. ಎಮ್ ಎಸ್ ಐ ಕಂಪೆನಿಯಿಂದ ಬಿಡುಗಡೆಯಾಗಿರುವ ಹೊಸ ಟ್ಯಾಬ್ಲೆಟ್ ಗಳು- ಎಂಜಾಯ್ 7 ಮತ್ತು ಎಂಜಾಯ್ 10.

ಇದರ ವಿಶೇಷತೆಗಳ ಪಟ್ಟಿ ಹೀಗಿದೆ ನೋಡಿ...
* ಎರಡರಲ್ಲಿ ಸಾಕಷ್ಟು ಸಾಮ್ಯತೆ, ಹೆಸರಿಗೆ ತಕ್ಕ 10 & 7 ಇಂಚ್ ಅಳತೆ
* ಆಂಡ್ರಾಯ್ಡ್ 2.3 ಜಿಂಜರ್ ಬ್ರೆಡ್ OS ಹಾಗೂ 1.2 GHz Cortex-A8 ಪ್ರೊಸೆಸರ್
* ಬ್ಲೂ ಟೂಥ್, ವೈ-ಫೈ ಉತ್ತಮ ಕಾರ್ಯ ದಕ್ಷತೆ ಹೊಂದಿದೆ
* 2 ಮೆಗಾ ಪಿಕ್ಸೆಲ್ ಕ್ಯಾಮೆರಾ, ಹೈ ವಿಡಿಯೋ ರೆಕಾರ್ಡಿಂಗ್
* ಆಡಾಬ್ ಫ್ಲಾಶ್ 10.1 ಎರಡರಲ್ಲೂ ಲಭ್ಯ
* 4 GB ಆಂತರಿಕ ಹಾಗೂ 32 GB ಹೊರ ಮೆಮೊರಿ ಲಭ್ಯ
* ಎಂಜಾಯ್ 7, 800 x 480 & ಎಂಜಾಯ್ 10, 1024 x 768 ಡಿಸ್ ಪ್ಲೇ ಹೊಂದಿದೆ.

ಎರಡರ ದರದಲ್ಲಿ ಕೂಡ ಹೆಚ್ಚೇನೂ ವ್ಯತ್ಯಾಸವಿಲ್ಲ. ಎಂಜಾಯ್ 7 ರು. 13,999 ಬೆಲೆ ಹೊಂದಿದ್ದರೆ ಎಂಜಾಯ್ 10 ಬೆಲೆ ರು. 14,999. ಗ್ರಾಹಕರಿಗೆ ಎರಡು ಆಯ್ಕೆ ನೀಡುವ ಒಂದೇ ಉದ್ದೇಶ ಕಂಪೆನಿಯದು ಎಂಬ ಸ್ಪಷ್ಟ ಸಂದೇಶ, ಈ ವಿಶೇಷತೆಗಳು ಹಾಗೂ ದರಗಳಲ್ಲಿರುವ ಬಹುತೇಕ ಸಾಮ್ಯತೆಯಿಂದ ಸ್ಪಷ್ಟವಾಗಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X