ಪೈರ್ ಕಾರ್ಡಿಯನ್ ಹೊಸ ಟ್ಯಾಬ್ಲೆಟ್ ಹೇಗಿದೆ ನೋಡಿ!

ಈ ಹೊಸ ಟ್ಯಾಬ್ಲೆಟ್ ಹೆಸರು- ಪೈರ್ ಕಾರ್ಡಿಯನ್ ಪಿಸಿ-7006. ಇದು ತುಂಬಾ ಸ್ಟೈಲಿಷ್ ಆದ 7 ಇಂಚುಗಳ ಹ್ಯಾಂಡಿ ಟ್ಯಾಬ್ಲೆಟ್. ಮೃದುವಾದ ಕೆಪೆಕ್ಟಿವ್ ಟಚ್ ಸ್ಕ್ರೀನ್ ಹೊಂದಿರುವ ಇದು ಉತ್ತಮ 800 x 480 ರೆಸೊಲ್ಯೂಷನ್ ಹೊಂದಿದೆ. ಆಂಡ್ರಾಯ್ಡ್ OS ಮೂಲಕ ಕಾರ್ಯ ನಿರ್ವಹಿಸುವ ಇದು ಸ್ಯಾಮ್ ಸಂಗ್ S5PV210 Cortex-A8 ಸಿಂಗಲ್ ಪ್ರೊಸೆಸರ್ ಹೊಂದಿದೆ.
ವೈ-ಫೈ, 3G ನೆಟ್ ವರ್ಕ್ ಹೊಂದಿರುವ ಇದು ಹೆಚ್ಚಿನ 3G USB ಆಧುನಿಕ ಸೌಲಭ್ಯ ಹೊಂದಿ ಉಪಯುಕ್ತ ಎನಿಸಿದೆ. ಆಂತರಿಕ 4 GB, ವಿಸ್ತರಿಸಬಲ್ಲ 16 GB ಮೆಮೊರಿ ಕೂಡ ಹೊಂದಿದೆ.
ಇನ್ನು ಮನರಂಜನೆ ವಿಭಾಗದಲ್ಲಿ ಕೂಡ ಇದು ಸಾಕಷ್ಟು ವಿಶೇಷತೆಗಳನ್ನು ಹೊಂದಿದೆ. ಮ್ಯೂಸಿಕ್ ಪ್ಲೇಯರ್, ವಿಡಿಯೋ ಪ್ಲೇಯರ್, ಹೈ ಕ್ವಾಲಿಟಿ ವಿಡಿಯೋ ರೆಕಾರ್ಡಿಂಗ್ ಸಾಮರ್ಥ್ಯದ ಉತ್ತಮ ಕ್ಯಾಮೆರಾ ಕೂಡ ಇದರಲ್ಲಿದೆ. ಜೊತೆಗೆ ಬ್ಲೂ ಟೂಥ್ ಲಭ್ಯ.
ಸದ್ಯಕ್ಕೆ ಇಂಗ್ಲೆಂಡ್ ಮಾರುಕಟ್ಟೆಯಲ್ಲಿ ಮಾತ್ರ ಲಭ್ಯವಿರುವ ಈ ಹೊಸ ಟ್ಯಾಬ್ಲೆಟ್ 2011 ರ ಕೊನೆಯೊಳಗೆ ಭಾರತದ ಮಾರುಕಟ್ಟೆಯಲ್ಲಿ ಸಿಗುವ ನಿರೀಕ್ಷೆಯಿದೆ. ಇದರ ಬೆಲೆ ಸುಮಾರು ರು. 20,000 ಆಗಬಹುದೆಂದು ಅಂದಾಜಿಸಲಾಗಿದೆ. ಖಂಡಿತ ಈ ಟ್ಯಾಬ್ಲೆಟ್ ಕ್ಲಿಕ್ ಆಗುವುದರಲ್ಲಿ ಸಂದೇಹವೇ ಇಲ್ಲ.


Click it and Unblock the Notifications








