ಗ್ರಿಡ್ 10 ಟ್ಯಾಬ್ಲೆಟ್ ನೊಂದಿಗೆ ಹೊಸ ಜೀವನ ಪ್ರಾರಂಭಿಸಿ

Posted By: Staff

ಗ್ರಿಡ್ 10 ಟ್ಯಾಬ್ಲೆಟ್ ನೊಂದಿಗೆ ಹೊಸ ಜೀವನ ಪ್ರಾರಂಭಿಸಿ
ಟ್ಯಾಬ್ಕೋ ಕಂಪೆನಿ ಫ್ಯೂಸಿಯನ್ ಗ್ಯಾರೇಜ್ ಎಂದು ಕೂಡ ಕರೆಯಲ್ಪಡುತ್ತದೆ. ಇದು ಹೊಸ ಟ್ಯಾಬ್ಲೆಟ್ ಬಿಡುಗಡೆಗೆ ಸಜ್ಜಾಗಿದೆ. ಹೆಸರು ಗ್ರಿಡ್ 10.

ಸತತವಾಗಿ ಯೂಸರ್ ಇಂಟರ್ ಫೇಸ್ ಬದಲಾವಣೆ ಮಾಡುತ್ತಿರುವ ಈ ಮಾದರಿಯಲ್ಲಿ ಅತ್ಯುನ್ನತ ತಂತ್ರಜ್ಞಾನದಿಂದ ಕಾರ್ಯನಿರ್ವಹಿಸಬಲ್ಲ ಸಾಕಷ್ಟು ವಿಶೇಷತೆಗಳಿವೆ.

ಇದು ಆಂಡ್ರಾಯ್ಡ್ OS ಮೂಲಕ ಕಾರ್ಯ ನಿರ್ವಹಿಸುತ್ತದೆ. ಇದನ್ನು ಎರಡು ಫಿಂಗರ್ ಗೆಶ್ಚರ್ ಮೂಲಕ ನಿಭಾಯಿಸಬಹುದಾಗಿದ್ದು ಗ್ರಾಹಕರಿಗೆ ಸಾಕಷ್ಟು ಅನುಕೂಲಕರವಾಗಿದೆ.

ಇದರಲ್ಲಿರುವ ವಿಶೇಷತೆಗಳು:
* ಅತ್ಯಾಧುನಿಕ ಡಿಸೈನ್
* ಸೀಮ್ ಲೆಸ್ ಸ್ಟೇಟ್
* ಯೂಸರ್ಸ್ ಗೆಶ್ಚರ್ UI
* ಆಪಲ್ ನಂತೆ ಎಲ್ ಟ್ಯೂನ್
* 1366 x 768 ರೆಸೊಲ್ಯೂಷನ್/ 16:9 ಆಸ್ಪೆಕ್ಟ್ ರೇಶಿಯೊ
* NVIDIA Tegra II 1.2 GHz ಡ್ಯುಯಲ್ ಕೋರ್ ಎಂಜಿನ್
*ವೈ-ಫೈ, 3G ನೆಟ್ ವರ್ಕ್ ಹೊಂದಿದೆ

ಇಷ್ಟೆಲ್ಲ ಫೀಚರ್ಸ್ ಇರುವ ಇದರ ಬೆಲೆ ರು. 29,000 ಆಗಬಹುದೆಂದು ಅಂದಾಜಿಸಲಾಗಿದೆ. ಈಗ ಇದು ವಿದೇಶಗಳಲ್ಲಿ ಮಾತ್ರ ದೊರೆಯುತ್ತಿದೆ. ಸದ್ಯದಲೇ ಭಾರತೀಯ ಮಾರುಕಟ್ಟೆಗೆ ಬರಲಿದೆ. ನೋಡಿ ಖರೀದಿಸಲು ರೆಡಿಯಾಗಿ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot