ಮಾರುಕಟ್ಟೆಯಲ್ಲಿ ಕೇಳಿ ಮೋಟೋರೊಲಾ ಝೂಮ್ ಟ್ಯಾಬ್ಲೆಟ್

By Super
|
ಮಾರುಕಟ್ಟೆಯಲ್ಲಿ ಕೇಳಿ ಮೋಟೋರೊಲಾ ಝೂಮ್ ಟ್ಯಾಬ್ಲೆಟ್
ಟ್ಯಾಬ್ಲೆಟ್ಸ್ ಈಗ ಗ್ಯಾಜೆಟ್ ಸೆಕ್ಷನ್ ಹೊಸ ಮೆಂಬರ್. ಮೊಬೈಲ್ ಆಳ್ವಿಕೆಯಲ್ಲಿದ್ದ ಇದು ನಿಧಾನವಾಗಿ ತನ್ನ ವ್ಯಾಪ್ತಿಯನ್ನು ಹೆಚ್ಚಿಸಿಕೊಳ್ಳುತ್ತಾ ಸಾಗಿದೆ. ಈಗ ಎಲ್ಲೆಡೆ ಲ್ಯಾಪ್ ಟಾಪ್ ಬಳಕೆ ಹೆಚ್ಚಿದೆ. ಸಹಜವಾಗಿಯೇ ಈ ಅವಕಾಶವನ್ನು ಎನ್ ಕ್ಯಾಶ್ ಮಾಡಿಕೊಳ್ಳಲು ಹವಣಿಸುತ್ತಿರುವ ಇಲೆಕ್ಟ್ರಾನಿಕ್ಸ್ ಕಂಪೆನಿಗಳು, ಲ್ಯಾಪ್ ಟಾಪ್/ ಟ್ಯಾಬ್ಲೆಟ್ ಗಳನ್ನು ಉತ್ಪಾದಿಸಿ ಬಿಡುಗಡೆಗೆ ಸಜ್ಜಾಗಿವೆ.

ಈಗ ನಾವು ಮೋಟೋರೊಲಾದ ಝೂಮ್ ಟ್ಯಾಬ್ಲೆಟ್ ಬಗ್ಗೆ ನೋಡೋಣ. ಇತ್ತೀಚಿಗಷ್ಟೇ ಮಾರುಕಟ್ಟೆಗೆ ಬಿಡುಗಡೆಯಾಗಿರುವ ಗೂಗಲ್ ಆಂಡ್ರಾಯ್ಡ್ 3.1, ಅದರ ಅಪ್ ಡೇಟೆಡ್ ಆವೃತ್ತಿ ಆಂಡ್ರಾಯ್ಡ್ 3.1 ಹನಿಕಾಂಬ್ ಬಿಡುಗಡೆಯಾಗಿದೆ. ಇದು ಕಂಪೆನಿಯ ತಕ್ಷಣದ ನಿರ್ಧಾರವಾಗಿದೆ.

ಈ ಹೊಸ ಮೋಟೋರೊಲಾ ಝೂಮ್ ಅನ್ನು ಖಂಡಿತವಾಗಿಯೂ ಗ್ರಾಹಕರು ಹೆಚ್ಚು ಇಷ್ಟಪಡಲಿದ್ದಾರೆ. ಏಕೆಂದರೆ ಇದು ಮೊದಲಿಗಿಂತ ವೇಗವಾಗಿ ಕಾರ್ಯಮಾಡಲು ಈಗ ಸಮರ್ಥವಾಗಿದೆ.

ಈ ಲೇಟೆಸ್ಟ್ ಆವೃತ್ತಿಯಲ್ಲಿ ಬ್ಲೂ ಟೂಥ್ ಕೀ ಬೋರ್ಡ್ ಇರುವುದು ಹೆಚ್ಚು ಅನುಕೂಲಕರವಾಗಿದೆ. ಮಲ್ಟಿಟಾಸ್ಕಿಂಗ್ ಅಪ್ಲಿಕೇಶನ್ಸ್, Wi-Fi, Wi-Fi ಲಾಕ್ ಸಿಸ್ಟಮ್ ಇದರಲ್ಲಿರುವುದು ನಿಜವಾದ ಅಚ್ಚರಿ!

ಇದರಲ್ಲಿರುವ ಆಡೋಬ್ ಫ್ಲಾಶ್ ಪ್ಲೇಯರ್ ಇನ್ನೊಂದು ಅಚ್ಚರಿ. ಇದರ ಮ್ಯಾನೇಜರ್ ಅಪ್ಲಿಕೇಶನ್ ಮೂಲಕ ಡಾಟಾ ನಿರ್ವಹಣೆ ಸುಲಭ ಸಾಧ್ಯ. ಹೈ ರೆಸಲ್ಯೂಷನ್ ಕ್ಯಾಮೆರಾ ಅಳವಡಿಕೆ ಇನ್ನೊಂದು ವರ. ಈಗಾಗಲೇ ಇರುವ ಹಳೆಯ ಮೋಟೋರೊಲಾ ಲ್ಯಾಪ್ ಟಾಪ್ ಗೆ ಈ ಹೊಸ ಆವೃತ್ತಿಯನ್ನು ಅಪ್ ಡೇಟೆಡ್ ಮಾಡಿಕೊಳ್ಳುವ ವ್ಯವಸ್ಥೆಯನ್ನು ಅಪ್ಲಿಕೇಶನ್ ಮೂಲಕ ನೀಡುತ್ತಿರುವುದು ಗ್ರಾಹಕರಿಗೆ ಅತೀವ ಸಂತಸ ತಂದಿದೆ.

ಇಷ್ಟೆಲ್ಲ ಇದೆ, ಇನ್ನೇನು ಬೇಕು ಹೇಳಿ! ಈ ಹೊಸ ಟ್ಯಾಬ್ಲೆಟ್ ಖರೀದಿಸಲು ಈಗಲೇ ನಿರ್ಧರಿಸಿ ಅಥವಾ ಈಗಾಗಲೇ ಕೊಂಡಿದ್ದರೆ ಅಪ್ ಡೇಟೆಡ್ ಮಾಡಿಕೊಳ್ಳಿ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X