ಸೋನಿ-ಸ್ಯಾಮ್ ಸಂಗ್ ಟ್ಯಾಬ್ಲೆಟ್ ಯುದ್ಧ; ಗೆಲ್ಲೋರು ಯಾರು!

By Super
|
ಸೋನಿ-ಸ್ಯಾಮ್ ಸಂಗ್ ಟ್ಯಾಬ್ಲೆಟ್ ಯುದ್ಧ; ಗೆಲ್ಲೋರು ಯಾರು!
ಇಲ್ಲೆರಡು ಪ್ರಸಿದ್ಧ ಕಂಪೆನಿಗಳ ಟ್ಯಾಬ್ಲೆಟ್ ಹೋಲಿಕೆಯಿದೆ. ಅವು ಸೋನಿ S1 ಹಾಗೂ ಸ್ಯಾಮ್ ಸಂಗ್ ಗೆಲಾಕ್ಸಿ ಟ್ಯಾಬ್ 10.1. ಏನೇನಿದೆ ಈ ಎರಡರಲ್ಲಿ ನೋಡೋಣ...

* ಸದ್ಯದಲ್ಲೇ ಬರಲಿರುವ ಸೋನಿ ಟ್ಯಾಬ್ಲೆಟ್ ಈಗಿರುವ ಎಲ್ಲಾ ಫೊನ್ ಗಳಿಗಿಂತ ಹೆಚ್ಚಿನ ಹಾಗೂ ಉತ್ಕೃಷ್ಟ ಫಿಚರ್ಸ್ ಹೊಂದಿದೆ. ಅದೇ ರೀತಿ ಸ್ಯಾಮ್ ಸಂಗ್ ಹೊಸ ಗೆಲಾಕ್ಸಿ ಕೂಡ ಸಾಕಷ್ಟು ಚೆನ್ನಾಗಿಯೇ ಇದೆ.

ಈ ಎರಡರಲ್ಲಿ ಒಂದನ್ನು ಆಯ್ಕೆ ಮಾಡುವುದು ಗ್ರಾಹಕರಿಗೆ ನಿಜವಾಗಿಯೂ ಸವಾಲೇ!

* ಹೊಸ ಸೋನಿ ವ್ರಾಪ್ ಡಿಸೈನ್ ಹೊಂದಿರುವ ಮೊಬೈಲಾಗಿದೆ. ಹಿಡಿದುಕೊಳ್ಳಲು ಬಲು ಸುಲಭವಾಗಿರುವ ಇದು, ತೆಳುವಾಗಿದ್ದು 8.6 mm ಉದ್ದ ಹಾಗೂ 595 ಗ್ರಾಮ್ ತೂಕ ಮಾತ್ರ ಹೊಂದಿದೆ.

* ಎರಡರಲ್ಲೂ ರೆಸೊಲ್ಐಷನ್ 1280 X 800 ಪಿಕ್ಸೆಲ್ಸ್ ಇದೆಯಾದರೂ ಗೆಲಾಕ್ಸಿ ಟ್ಯಾಬ್ 10.1 ಇಂಚ್ ಟಚ್ ಸ್ಕ್ರೀನ್ ಹೊಂದಿದ್ದರೆ ಸೋನಿ 9.4 ಇಂಚ್ ಡಿಸ್ ಪ್ಲೇ ಹೊಂದಿದೆ.

* ಗೆಲಾಕ್ಸಿ 3 ಮೆಗಾ ಪಿಕ್ಸೆಲ್ ಕ್ಯಾಮೆರಾ, ಲೆಡ್ ಫ್ಲಾಶ್, HD ವಿಡಿಯೋ ಫಾರ್ಮಟ್, 1080p ವಿಡಿಯೋ ಪ್ಲೇ ಬ್ಯಾಕ್ ರೇಟ್ ಹೊಂದಿದೆ. ಆದರೆ ಸೋನಿ ಬಗ್ಗೆ ಈ ಬಗ್ಗೆ ಮಾಹಿತಿಯಿಲ್ಲ.

* ಗೆಲಾಕ್ಸಿ 1GHz Tegra 2 ಪ್ರೊಸೆಸರ್, 1 GB RAM ಹೊಂದಿದೆ. ಇದರಲ್ಲಿ 16 GB, 32 GB, or 64 GB ಮೆಮೊರಿಗಳ ಆಯ್ಕೆ ಇದೆ. ಸೋನಿಯ ಬಗ್ಗೆ ಮಾಹಿತಿಯಿಲ್ಲ.

* ಎರಡರಲ್ಲೂ ಆಂಡ್ರಾಯ್ಡ್ ಹನಿಕಾಂಬ್ OS ಇದೆ. ಗೆಲಾಕ್ಸಿಯಲ್ಲಿ ಇದರ ಹೊಸ ಆವೃತ್ತಿ 3.1 ಇದೆ. ವೈ-ಫೈ, DLNA ಕೂಡ ಇದರಲ್ಲಿದೆ. ಸೋನಿಯ ಬಗ್ಗೆ ಸದ್ಯಕ್ಕೆ ಮಾಹಿತಿ ಇಲ್ಲ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X