ಸ್ಯಾಮ್ ಸಂಗ್-ಆಸಸ್ ಸೂಪರ್ ಜೋಡಿ ಇಲ್ಲಿದೆ ನೋಡಿ

By Super
|
ಸ್ಯಾಮ್ ಸಂಗ್-ಆಸಸ್ ಸೂಪರ್ ಜೋಡಿ ಇಲ್ಲಿದೆ ನೋಡಿ
ಸ್ಯಾಮ್ ಸಂಗ್ ಕಂಪೆನಿ ಹೊಚ್ಚಹೊಸ ಟ್ಯಾಬ್ಲೆಟ್ ಬಿಡುಗಡೆ ಮಾಡಿದೆ. ಅದು ಸ್ಯಾಮ್ ಸಂಗ್ N-100. ಈಗಿನ N ಸಿರೀಸ್ ಗೆ ಹೊಸದಾದ ಸೇರ್ಪಡೆಯಿದು. ಇದರಲ್ಲಿ ಹೊಸ ಅತ್ಯಾಧುನಿಕ ತಂತ್ರಜ್ಞಾನದ ಜೊತೆ ಆಕರ್ಷಕ ವಿನ್ಯಾಸವೂ ಸೇರಿದೆ. ಇದರ ತೂಕ ಕೇವಲ 1.03 KG.

ಅದೇ ರೀತಿ ಆಸಸ್ ಕಂಪೆನಿ ಕೂಡ 'ಆಸಸ್ X 101' ಎಂಬ ಹೊಸ ನೋಟ್ ಬುಕ್ ತೀರಾ ಇತ್ತೀಚಿಗೆ ಬಿಡುಗಡೆ ಮಾಡಿದೆ. ಹಾಗಾದರೆ ಈ ಎರಡು ನೋಟಬುಕ್ ಗಳಲ್ಲಿರುವ ಸಾಮ್ಯತೆ ಹಾಗೂ ನಾವು ಭಿನ್ನತೆಗಳನ್ನು ನಾವು ವಿಮರ್ಶಿಸಬಹುದು.

ಸಾಮ್ಯತೆ ಹಾಗೂ ಭಿನ್ನತೆಗಳು:

* ಸ್ಯಾಮ್ ಸಂಗ್ ನೋಡ್ ಬುಕ್ ತೂಕ 1.03 KG ಆಗಿದ್ದರೆ ಆಸಸ್ 920 ಗ್ರಾಮ್ ಮಾತ್ರ ತೂಕವಿದ್ದು 17.6 mm ದಪ್ಪ ಇದೆ.
* ಸ್ಯಾಮ್ ಸಂಗ್ ಪವರ್ ಕಂನ್ಸಂಪ್ಷನ್ ಹೊಂದಿದೆ. ಅದೇರೀತಿ ಆಸಸ್ ಕೂಡ ಪವರ್ ಮ್ಯಾನೇಜ್ ಮೆಂಟ್ ಸಿಸ್ಟಮ್ ಹೊಂದಿದೆ.
* ಎರಡೂ ನೋಟ್ ಬುಕ್ ಗಳು ಮೀಗೊ Os ಹಾಗೂ ಇಂಟೆಲ್ ಆಟಮ್ ಪ್ರೊಸೆಸರ್ ಹಾಗೂ ಲೆಟ್ ಫ್ಲಾಶ್ ಹೊಂದಿವೆ
*ಸ್ಯಾಮ್ ಸಂಗ್ ಅಂಟಿ-ರಿಫ್ಲೆಕ್ಟಿವ್ ಸ್ಕ್ರೀನ್ ಹೊಂದಿದೆ.
* ಎರಡರಲ್ಲೂ ಒಳ್ಳೆಯ ಕ್ಯಾಮೆರಾ ಇದೆ. ಆದರೆ ಸ್ಯಾಮ್ ಸಂಗ್ VGA ಕ್ಯಾಮೆರಾ ಹೊಂದಿದ್ದರೆ ಆಸಸ್ 3 ಮೆಗಾ ಪಿಕ್ಸೆಲ್ ಹೊಂದಿದೆ.
* ಎರಡರಲ್ಲೂ ಉತ್ತಮ ಗುಣಮಟ್ಟದ ಸ್ಪೀಕರ್, 84 ಕೀ ಇರುವ ಕೀ ಪ್ಯಾಡ್ ಇದೆ.
* ಎರಡರಲ್ಲೂ ಬ್ಯಾಟರಿ ಬ್ಯಾಕಪ್ ಚೆನ್ನಾಗಿದೆ.
* ಸ್ಯಾಮ್ ಸಂಗ್ ಬೆಲೆ ರು. 12,290 ಮತ್ತು ಆಸಸ್ ಬೆಲೆ ರು. 12,450.

ಹೀಗೆ ಎರಡೂ ನೋಟ್ ಬುಕ್ ಗಳೂ ವಿಶೇಷವಾಗಿವೆ ಹಾಗೂ ಹೆಚ್ಚು ಸಾಮ್ಯತೆ ಹೊಂದಿವೆ. ಈಗ ನಿಮ್ಮ ಇಷ್ಟವೇ ಅಂತಿಮವಾಗಲಿದೆ.

ಸದ್ಯದಲ್ಲೇ ಬರಲಿರುವ ಹಾಗೂ ಈಗಾಗಲೇ ಇರುವ ಈ ಎರಡೂ ನೋಟ್ ಬುಕ್ ಗಳಲ್ಲಿ ಯಾವುದು ನಿಮ್ಮ ಕೈ ಸೇರುವ ಭಾಗ್ಯ ಹೊಂದಿದೆಯೋ! ಆಯ್ಕೆ ನಿಮ್ಮದು, ಅದೃಷ್ಟ ಕಂಪೆನಿಯದು...

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X