ಬೀಟೆಲ್-ಎಮ್ ಎಸ್ ಐ ಮೊಬೈಲುಗಳು; ನಿಮ್ಮ ಆಯ್ಕೆ?

Posted By: Staff

ಬೀಟೆಲ್-ಎಮ್ ಎಸ್ ಐ ಮೊಬೈಲುಗಳು; ನಿಮ್ಮ ಆಯ್ಕೆ?
ಇಲ್ಲೆರಡು ಟ್ಯಾಬ್ಲೆಟ್ ಗಳಿವೆ. ಬೀಟೆಲ್ ಮ್ಯಾಜಿಕ್ ಮತ್ತು ಎಮ್ ಎಸ್ ಐ ಎಂಜಾಯ್ 7. ಎರಡೂ ಕೂಡ ತೀರಾ ಇತ್ತೀಚಿಗೆ ಬಿಡುಗಡೆಯಾದ ಟ್ಯಾಬ್ಲೆಟ್ ಗಳೇ.

* ಎರಡರಲ್ಲೂ 7 ಇಂಚ್ ಕೆಪಾಕ್ಟಿವ್ ಟಚ್ ಸ್ಕ್ರೀನ್, TFT ಡಿಸ್ ಪ್ಲೇ, 800 X 480 ಪಿಕ್ಸೆಲ್ಸ್.

* ಮ್ಯಾಜಿಕ್ 2.2 ಆವೃತ್ತಿಯ ಆಂಡ್ರಾಯ್ಡ್ OS ಹೊಂದಿದ್ದರೆ ಎಂಜಾಯ್ 7 ಆಂಡ್ರಾಯ್ಡ್ ಜಿಂಜರ್ ಬ್ರೆಡ್ OS ಹೊಂದಿದೆ.

* ಈ ಎರಡು ಟ್ಯಾಬ್ಲೆಟ್ ಗಳೂ ಬೇರೆ ಬೇರೆ ಪ್ರೊಸೆಸರ್ ನಿಂದ ಕಾರ್ಯ ನಿರ್ವಹಿಸುತ್ತವೆ. ಎಮ್ ಎಸ್ ಐ ಎಂಜಾಯ್ 7, 1.2 GHz ARM Cortex A8 ಪ್ರೊಸೆಸರ್ ನಿಂದ ಕಾರ್ಯ ನಿರ್ವಹಿಸಿದರೆ, ಬೀಟೆಲ್ ಮ್ಯಾಜಿಕ್ 1 GHz ಪ್ರೊಸೆಸರ್ ಹೊಂದಿದೆ.

* ಎಂಜಾಯ್ 3G ಕನೆಕ್ಟಿವಿಟಿ ಹೊಂದಿಲ್ಲ

* ಎಂಜಾಯ್ ನಲ್ಲಿ ವೈ-ಫೈ, ಜಿ ಪಿ ಆರ್ ಎಸ್, ಎಡ್ಜ್, 3G HSDPA ಇದೆ. ಆ ಮೂಲಕ ಸುಪರ್ ಫಾಸ್ಟ್ ಇಂಟರ್ನೆಟ್ ಬ್ರೌಸಿಂಗ್ ಸಾಧ್ಯತೆಯಿದೆ.

* ಎಂಜಾಯ್ 7 ನಲ್ಲಿ 512 MB & 4 GB ಆಂತರಿಕ ಹಾಗೂ 32 GB ಗೆ ವಿಸ್ತರಿಸಬಹುದಾದ ಮೆಮೊರಿ ಸಾಮರ್ಥ್ಯವಿದೆ.

* ಮ್ಯಾಜಿಕ್, 8 GB RAM ಹೊಂದಿದೆ. ಆದರೆ ವಿಸ್ತರಿಸಬಹುದಾದ ಮೆಮೊರಿ ಕೇವಲ 16 GB ಇದೆ.

* ಎರಡರಲ್ಲೂ 2 MP ರೇರ್ ಮತ್ತು ಫ್ರಂಟ್ ಕ್ಯಾಮೆರಾ ಇದೆ.

* ಎರಡರಲ್ಲೂ 3.5 mm ಆಡಿಯೋ ಜಾಕ್ ಇದೆ.

* ಎಂಜಾಯ್ ನಲ್ಲಿ 3 G ನೆಟ್ ವರ್ಕ್ ಇಲ್ಲದಿದ್ದರೂ ಕನೆಕ್ಟೆಬಲ್ ಡಿವೈಸ್ ಇದೆ.

* ಎಂಜಾಯ್ ನ ಸ್ಪೆಷಲ್- ಲೈಟ್ ಸೆನ್ಸರ್, ವೈಬ್ರೇಶನ್, ಮಿನಿ HDMI

* ಬ್ಯಾಟರಿ ಬ್ಯಾಕಪ್- ಬೀಟೆಲ್ 2200 mAh ಹಾಗೂ ಎಮ್ ಎಸ್ ಐ. .

* ಎರಡರಲ್ಲೂ 2.1 A2DP ಆವೃತ್ತಿಯ ಬ್ಲೂ ಟೂಥ್ ಇದೆ

ಇನ್ನು ಅತಿ ಮುಖ್ಯವಾದ ಬೆಲೆಯ ವಿಷಯಕ್ಕೆ ಬಂದರೆ ಬೀಟೆಲ್ ಬೆಲೆ ರು. 9,900. ಎಂಜಾಯ್ ಬೆಲೆ ರು. 13,999.


ಎಲ್ಲಾ ಫೀಚರ್ಸ್ ಹಾಗೂ ಸಾಮ್ಯತೆ-ಭಿನ್ನತೆ ನಿಮಗೀಗ ತಿಳಿದಿದೆ. ಇನ್ನು ನಿಮ್ಮ ಬಜೆಟ್ ಹಾಗೂ ಇಷ್ಟಕ್ಕೆ ಯಾವುದು ಸರಿ ಎಂಬ ಆಯ್ಕೆ ನಿಮ್ಮದು.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot