Subscribe to Gizbot

ಲಿನೋವಾ ಟ್ಯಾಬ್ಲೆಟ್ ಬರಲಿದೆ; ಸ್ವಲ್ಪದಿನ ಕಾಯಬೇಕಷ್ಟೇ!

Posted By: Super

ಲಿನೋವಾ ಟ್ಯಾಬ್ಲೆಟ್ ಬರಲಿದೆ; ಸ್ವಲ್ಪದಿನ ಕಾಯಬೇಕಷ್ಟೇ!
ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಮೊಬೈಲ್ ನಂತರದ ಸ್ಥಾನ ಟ್ಯಾಬ್ಲೆಟ್/ ಕಂಪ್ಯೂಟರ್ ಗಳಿಗಿವೆ. ಈಗಂತೂ ಸಾಕಷ್ಟು ಮೊಬೈಲ್ ಕಂಪೆನಿಗಳು ಟ್ಯಾಬ್ಲೆಟ್ ತಯಾರಿಕೆಗೂ ಇಳಿದು ಹೇರಳ ಹಣವನ್ನು ಎಣಿಸುತ್ತಿವೆ.

ಟ್ಯಾಬ್ಲೆಟ್ ಕಂಪೆನಿಗಳಲ್ಲಿ ಲಿನೋವಾ ಕಂಪೆನಿ ಕೂಡ ಇಂದು ಸಾಕಷ್ಟು ಪ್ರಸಿದ್ಧಿ ಪಡೆದಿದೆ. ಇದು ಹೊಸ ಟ್ಯಾಬ್ಲೆಟ್ 'ಲೀ ಪ್ಯಾಡ್ A1-07' ಅನ್ನು ಸದ್ಯದಲ್ಲೇ ಮಾರುಕಟ್ಟೆಗೆ ಬಿಡಲಿದೆ.

ಇದರಲ್ಲಿರುವ ವಿಶೇಷತೆಗಳು:
* ಈ ಟ್ಯಾಬ್ಲೆಟ್ 7 ಇಂಚುಗಳ ಸ್ಟೈಲಿಷ್ ಟಚ್ ಸ್ಕ್ರೀನ್ ಡಿಸ್ ಪ್ಲೇ ಹೊಂದಿದ್ದು 1024 X 600 ರೆಸೊಲ್ಯೂಷನ್ ಹೊಂದಿದೆ

* ಇದು ಯಶಸ್ವೀ ಆಂಡ್ರಾಯ್ಡ್ ಜಿಂಜರ್ ಬ್ರೆಡ್ 2.3 ಆವೃತ್ತಿಯನ್ನು ಹೊಂದಿದೆ. 1 GHz ಟೆಕ್ಸಾಸ್ ಇನ್ ಸ್ಟ್ರುಮೆಂಟ್ ನ OMAP 3622 ಪ್ರೊಸೆಸರ್ ಹೊಂದಿದೆ

* 512 MB RAM ಹಾಗೂ 16 GB ಮೆಮೊರಿ ಹೊಂದಿದೆ. USB ಪೋರ್ಡ್ ಹಾಗೂ ಮೈಕ್ರೋ SD ಕಾರ್ಡ್ ಲಭ್ಯ

* VGA ಫ್ರಂಟ್ ಕ್ಯಾಮೆರಾ ಹಾಗೂ 3 ಮೆಗಾ ಪಿಕ್ಸೆಲ್ ರೇರ್ ಕ್ಯಾಮೆರಾ ಇದೆ

* ಹೈ ಪರ್ಫಾರ್ಮನ್ಸ್ ಸರ್ಫಿಂಗ್, ಜಿಗ್ಮೋ ಬಫ್ಸ್ ಇದೆ

* ವೈ-ಫೈ, 3G ಕನೆಕ್ಷನ್, 3550 mAh ಬ್ಯಾಟರಿ ಇದೆ

* 195 x 125 x 11.95 mm ಅಳತೆ, 0.9 ಪೌಂಡ್ (400 gm) ತೂಕ, ಬ್ಲೂ ಟೂಥ್, ರೇಡಿಯೋ ಲಭ್ಯ

* 4 ವೈಬ್ರಂಟ್ ಬಣ್ಣಗಳಾದ ಕಪ್ಪು, ನೀಲಿ, ಬಿಳಿ ಹಾಗೂ ಗುಲಾಬಿ ಬಣ್ಣಗಳಲ್ಲಿ ಲಭ್ಯ

ಹೀಗೆ ಸಾಕಷ್ಟು ವಿಶೇಷತೆಗಳಿಂದ ಕೂಡಿರುವ ಈ ಟ್ಯಾಬ್ಲೆಟ್ ಬೆಲೆ $391 US ಎಂದು ಸದ್ಯ ದೊರೆತಿರುವ ಮಾಹಿತಿ ಹೇಳುತ್ತಿದೆ. ಆದರೆ ಇದು ಭಾರತೀಯ ಮಾರುಕಟ್ಟೆಗೆ ಕಾಲಿಡುವ ಹೊತ್ತಿಗೆ ಎಷ್ಟು ಬೆಲೆ ಆಗಬಹುದೆಂದು ಹೇಳಲು ಸದ್ಯ ಅಸಾಧ್ಯ.

ಕಾಲ ಚಲಿಸುತ್ತದೆ. ಬಂದಾಗ ತಪ್ಪದೇ ನೋಡಿ ಖರೀದಿಸಿ...

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot