ಈ ಡೆಲ್ ವೋಸ್ಟ್ರೋ ಲ್ಯಾಪ್ ಟಾಪ್ ಸೂಪರ್..!

Posted By: Staff

ಈ ಡೆಲ್ ವೋಸ್ಟ್ರೋ ಲ್ಯಾಪ್ ಟಾಪ್ ಸೂಪರ್..!
ಡೆಲ್ ಕಂಪೆನಿ ಮಾರುಕಟ್ಟೆಯಲ್ಲಿ ವಿಶ್ವಾಸಕ್ಕೆ ಇನ್ನೊಂದು ಹೆಸರು. ಇದೀಗ ಈ ಕಂಪೆನಿ ಮಾರುಕಟ್ಟೆಗೆ ಹೊಸ ಲ್ಯಾಪ್ ಟಾಪ್ ಬಿಡುಗಡೆಗೆ ಸಜ್ಜಾಗಿದೆ.
ಬರಲಿರುವ ಲ್ಯಾಪ್ ಟಾಪ್ ಹೆಸರು ಡೆಲ್ ವೋಸ್ಟ್ರೋ 131. ಇದು ಈ ಮೊದಲು ಬಿಡುಗಡೆಯಾಗಿ ಈಗ ಮಾರುಕಟ್ಟೆಯಲ್ಲಿರುವ ಜೆನ್ V130 ಯನ್ನು ಹೋಲುತ್ತದೆ.

ಲ್ಯಾಪ್ ಟಾಪ್ ನಲ್ಲಿ ಏನೇನಿರಬೇಕೆಂದು ಗ್ರಾಹಕರು ಬಯುಸುತ್ತಾರೋ ಎಲ್ಲವೂ ಇದರಲ್ಲಿದೆ. ಇಂಪ್ರೆಸ್ಸಿವ್ ಗ್ರಾಫಿಕ್ಸ್ ಸೌಲಭ್ಯ ಹೊಂದಿರುವ ಇದು ಆಕರ್ಷಕ ವಿನ್ಯಾಸ ಹೊಂದಿದೆ. ಇದರಲ್ಲಿರುವ ವಿಶೇಷತೆಗಳು ಈ ರೀತಿ ಇವೆ.

* 13.3 ಇಂಚ್/ 1366 X 768 ಕ್ವಾಲಿಟಿ ರೆಸೊಲ್ಯೂಷನ್ ಹೈ ಡೆಫನಿಷನ್ ಲೆಡ್ ಡಿಸ್ ಪ್ಲೇ
* ಬೆಟರ್ ವ್ಯೂವಿಂಗ್ ಆಂಟಿಗ್ಲೇರ್ ಇದೆ
* ಬ್ರಿಡ್ಜ್ ಕೋರ್ i3 & i4 ಪ್ರೊಸೆಸರ್ ಹೊಂದಿದೆ
* 9.5 ತಾಸುಗಳ ಬ್ಯಾಟರಿ ಬ್ಯಾಕಪ್
* 1.64 ಕೆಜಿ ತೂಕ ಹೊಂದಿದೆ
* ಆಂತರಿಕ ಡಿಜಿಟಲ್ ಸೆಟ್ ಮೈಕ್ರೋಫೋನ್ ಹೊಂದಿದೆ
* ಪ್ರೀಮಿಯಮ್ SRS ವೈಸ್ ಪ್ರೋ ಸಾಪ್ಟ್ ವೇರ್ ಇದೆ
* ಆಪ್ಷನಲ್ ಬ್ಯಾಕ್ ಲಿಟ್ ಕೀಬೋರ್ಡ್
* HD ಗ್ರಾಫಿಕ್ಸ 3000 ಇದೆ
* ಆಂತರಿಕ 4 GB RAM & 320 GB ಹಾರ್ಡ್ ಡಿಸ್ಕ್
* ಇಂಟೆಲ್ ಸೆಂಟ್ರಿನೊ ವೈರ್ ಲೆಸ್-N 1030
* 3.0 ಆವೃತ್ತಿಯ ಬ್ಲೂಟೂಥ್
* HD ಕಾಂಪಿಟೆಬಲ್ ವೆಬ್ ಕ್ಯಾಮ್
* USB 3.0 ಮೆಮೊರಿ ಕಾರ್ಡ್ ರೀಡರ್

ಹೀಗೆ ಸಾಕಷ್ಟು ಹೊಸ ವಿಶೇಷತೆಗಳನ್ನು ಹೊಂದಿರುವ ಡೆಲ್ ವೋಸ್ಟ್ರೋ 131, ಬೆಲೆ ಭಾರತೀಯ ಮಾರುಕಟ್ಟೆಯಲ್ಲಿ ರು. 30,000 ಇದೆ. ಸದ್ಯದಲ್ಲಿಯೇ ಭಾರತದ ಮಾರುಕಟ್ಟೆಗೆ ಬರಲಿರುವ ಇದು ಲ್ಯಪ್ ಟಾಪ್ ಮಾರಾಟದಲ್ಲಿ ಹೊಸ ದಾಖಲೆ ಬರೆದರೆ ಅಚ್ಚರಿಯೇನಿಲ್ಲ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot