Subscribe to Gizbot

ಏಳು ಮಲ್ಲಿಗೆ ತೂಕದ ಆಪಲ್ ಲ್ಯಾಪ್ ಟಾಪ್

Posted By: Super

ಏಳು ಮಲ್ಲಿಗೆ ತೂಕದ ಆಪಲ್ ಲ್ಯಾಪ್ ಟಾಪ್
ನಿಮಗೆ ನೆನಪಿರಬಹುದು. ಹೆಣಭಾರದ ಲ್ಯಾಪ್ ಟಾಪ್ ಹೊರುತ್ತಿದ್ದ ಆ ದಿನಗಳು. ಈಗಲೂ ಕೆಲವರ ಬಳಿ ತೂಕದ ಲ್ಯಾಪ್ ಟಾಪ್ ಇರಬಹುದು. ಆದರೆ ಕಾಲ ತುಸು ಬದಲಾಗಿದೆ. ಹೆಚ್ಚಿನ ಕಂಪನಿಗಳು ಹಗುರ, ತೆಳು ಲ್ಯಾಪ್ ಟಾಪ್ ಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತವೆ.

ಶೀಘ್ರದಲ್ಲಿ ಆಪಲ್ ಕಂಪನಿಯು "ಏಳು ಮಲ್ಲಿಗೆ" ತೂಕದ ಲ್ಯಾಪ್ ಟಾಪೊಂದನ್ನು ಪರಿಚಯಿಸಲಿದೆ. ಅದರ ಹೆಸರು ಆಪಲ್ ಮೆಕ್ ಬುಕ್ ಪ್ರೊ. ಇದು 14.35 ಇಂಚು ಅಗಲವಿರಲಿದೆ. ಅದರಲ್ಲಿ ಒಂದಿಷ್ಟು ಆಕರ್ಷಕ, ಐಷಾರಾಮಿ ಫೀಚರ್ ಗಳಿರಲಿವೆ.

ಆಪಲ್ ಅಂದ್ರೆ ಬರೀ ಆಕರ್ಷಕತೆ, ಗುಣಮಟ್ಟಕ್ಕೆ ಮಾತ್ರ ಹೆಸರುವಾಸಿಯಾಗಿಲ್ಲ. ಹೆಚ್ಚಿನ ಆಪಲ್ ಉತ್ಪನ್ನಗಳ ದರವೂ ಹೆಚ್ಚಿರುತ್ತದೆ. ಆಪಲ್ ದುಡ್ಡಿದವರಿಗೆ ಮಾತ್ರ ಎಂದು ಹೇಳಬಹುದು. ಇದನ್ನೆಲ್ಲ ಯಾಕೆ ಹೇಳುತ್ತಿದ್ದೇವೆ ಅಂದರೆ ನೂತನ ಲ್ಯಾಪ್ ಟಾಪ್ ದರ ಕೇಳಿ ನೀವು ಬೆಚ್ಚಿ ಬೀಳಬಾರದಲ್ವ? ನೂತನ ಆಪಲ್ ಮೆಕ್ ಬುಕ್ ಪ್ರೊ ದರ ಸುಮಾರು 1, 21,700 ರುಪಾಯಿ.

ಆಪಲ್ ಸಣ್ಣದಾದ ಲ್ಯಾಪ್ ಟಾಪೊಂದನ್ನು ಶೀಘ್ರದಲ್ಲಿ ಹೊರತರಲಿದೆ. ಆದರೆ ಇದರಲ್ಲಿ ಶಕ್ತಿಶಾಲಿ ಕ್ವಾಡ್ ಪ್ರೊಸೆಸರ್ ಇದೆ. ಜೊತೆಗೆ ಥಂಡರ್ ಬೊಲ್ಟ್ ತಂತ್ರಜ್ಞಾನವೂ ಇದೆ. ಈ ಲ್ಯಾಪ್ ಟಾಪ್ ಮಲ್ಟಿ ಟಚ್ ಟ್ರಾಕ್ ಪ್ಯಾಡ್ ಕೂಡ ಇದೆ. ಆಕರ್ಷಕ ಕೀಬೋರ್ಡ್ ಲ್ಯಾಪ್ ಟಾಪ್ ಗೆ ಐಷಾರಾಮಿ ಲುಕ್ ನೀಡುತ್ತದೆ. 15.4 ಇಂಚಿನ ಎಲ್ ಇಡಿ ಬ್ಯಾಕ್ ಲಿಟ್ ಸ್ಕ್ರೀನ್ ಕೂಡ ಇದೆ.

ಪ್ರಮುಖ ಫೀಚರ್ ಗಳು
* ಮೆಗಾ ಸೇಫ್ ಪವರ್ ಪೊರ್ಟ್
* 2.2 ಗಿಗಾಹರ್ಟ್ಸ್ ಇಂಟೆಲ್ ಕೊರ್ ಐ7 ಪ್ರೊಸೆಸರ್
* 4 ಜಿಬಿ ರಾಮ್, 750 ಜಿಬಿ HDD AMD ಇತ್ಯಾದಿ
* ವೈ-ಫೈ ಸಾಧನ
* ಬ್ಲೂಟೂಥ್
* ಸಬ್ ವೂಫರ್ಸ್ ಇರುವ ಎರಡು ಸ್ಟಿರಿಯೊ ಸ್ಪೀಕರ್, ಮೈಕ್ರೊಫೋನ್

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot