Subscribe to Gizbot

ಚೀಪ್ ಆಂಡ್ ಬೆಸ್ಟ್ ಟ್ಯಾಬ್ಲೆಟ್ ಮ್ಯಾಗ್ನಮ್ ಪೆಪ್ಪರ್

Posted By: Staff

ಚೀಪ್ ಆಂಡ್ ಬೆಸ್ಟ್ ಟ್ಯಾಬ್ಲೆಟ್ ಮ್ಯಾಗ್ನಮ್ ಪೆಪ್ಪರ್
ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನ ತೀರಾ ವೇಗವಾಗಿ ಬೆಳೆಯುತ್ತಿದೆ. ಹೊಸ ಮೊಬೈಲ್ ಗಳು, ಟ್ಯಾಬ್ಲೆಟ್ ಗಳು ಮಾರುಕಟ್ಟೆಗೆ ಬರುವುದು ಸಾಮಾನ್ಯವಾಗಿ ಬಿಟ್ಟಿದೆ. ಸದ್ಯದಲ್ಲಿ ಭಾರತಿ ಎಂಟರ್ ಪ್ರೈಸಸ್ ಬೀಟೆಲ್ ಮ್ಯಾಜಿಕ್ & ರಿಲಾಯನ್ಸ್ ನಿಂದ ಟ್ಯಾಬ್ 3G ಬಿಡುಗಡೆಯಾಗಿದೆ.

ಇದೀಗ ಬೆಂಗಳೂರು ಮೂಲದ ಕಂಪೆನಿ ಲಕ್ಷ್ಮೀ ಆಕ್ಸೆಸ್ ಕಮ್ಯುನಿಕೇಶನ್ ಸಿಸ್ಟಮ್ (LACS) ಹೊಸ ಟ್ಯಾಬ್ಲೆಟ್ ಮಾರುಕಟ್ಟೆಗೆ ಬಿಡಲಿದೆ. ಹೆಸರು ಮ್ಯಾಗ್ನಮ್ ಪೆಪ್ಪರ್ ಟ್ಯಾಬ್ಲೆಟ್ ಪಿಸಿ.

ಇದರ ವಿಶೇಷಗಳಲ್ಲಿ ಅತಿ ವಿಶೇಷ ಎಂದರೆ ಇದರ ಬೆಲೆ. ಕೇವಲ ರು. 5,000 ಬೆಲೆ ನಿಗದಿಯಾಗಿರುವ ಇದು ಆಂಡ್ರಾಯ್ಡ್ ಬೇಸ್ಡ್ ಟ್ಯಾಬ್ಲೆಟ್ ಆಗಿರುವುದು ವಿಶೇಷ.

ಇನ್ನುಳಿದ ವಿಶೇಷತೆಗಳು:
* ಇದರ ಅಳತೆ ಕೇವಲ 7 ಇಂಚುಗಳು
* ಆಂಡ್ರಾಯ್ಡ್ 2.2 ಫ್ರೊಯೋ OS
* 800 MHz ಪ್ರೊಸೆಸರ್
* 256 MB RAM, ವೈ-ಫೈ, USB 2.0, RJ45 LAN ಪೋರ್ಟ್
* 3G dongle ಕಾಂಪಿಟೆಬಲ್
* 2 GB ಆಂತರಿಕ ಹಾಗೂ ಮೈಕ್ರೋ SD ಕಾರ್ಡ್ ಮೂಲಕ ವಿಸ್ತರಿಸಬಲ್ಲ 32 GB ಮೆಮೊರಿ
* ಫ್ರಂಟ್ ಫೇಸಿಂಗ್ ಕ್ಯಾಮೆರಾ

ಫೀಚರ್ಸ್ ವಿಷಯದಲ್ಲಿ ಈ ಟ್ಯಾಬ್ಲೆಟ್ ಸಾಕಷ್ಟು ವಿಶೇಷ ಅನ್ನಿಸದಿದ್ದರೂ ಬೆಲೆ ಕಡಿಮೆ ಇರುವುದುರಿಂದ ಸಾಕಷ್ಟು ಪ್ರಯೋಜನವಂತೂ ಇದೆ. ನೋಡೋಣ ಇದು ಮಾರ್ಕೆಟ್ ನಲ್ಲಿ ಹೇಗೆ ಮಾರಾಟವಾಗುತ್ತದೆ ಎಂಬುದನ್ನು.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot