ಟೂ ಇನ್ ವನ್; ಈಗ ಟಿವಿಯಲ್ಲೇ ಇಂಟರ್ನೆಟ್

ಹೌದು, ಈಗ ನೆಟ್ @ ಟಿವಿ ಕಾಲ ಬರುತ್ತಿದೆ. ಮನೆಯಲ್ಲಿ ವಾಲ್ ಟಿವಿ ಇದ್ದರೆ ಸಾಕು. ಈಗ ಸ್ಯಾಮ್ ಸಂಗ್, ಆಪಲ್, ಐಫೋನ್ ಕಂಪೆನಿಗಳ ವಾಲ್ ಟಿವಿಗಳು ಮಾರುಕಟ್ಟೆಯಲ್ಲಿ ಲಭ್ಯ. ಇದರಲ್ಲಿ ಮೋಡಮ್ ಬಳಸಿ ಇಂಟರ್ನೆಟ್ ಸೌಲಭ್ಯ ಪಡೆಯಬಹುದು.
ನಿಮ್ ಕೈಬೆರಳಿನಿಂದ ಟಿವಿ ಪರದೆಯನ್ನು ಮುಟ್ಟಿದರೆ ಸಾಕು, ಇಂಟರ್ನೆಟ್ ಪ್ರಪಂಚ ನಿಮ್ಮ ಮುಂದೆ ತೆರೆದುಕೊಳ್ಳುತ್ತದೆ. ಇದರಲ್ಲಿ ನೇರವಾಗಿ ಈಮೇಲ್, ಚಾಟ್, ವೆಬ್ ಸೈಟ್, ಸೋಷಿಯಲ್ ನೆಟ್ ವರ್ಕ್ ಗಳಾದ ಫೇಸ್ ಬುಕ್, ಟ್ವಿಟರ್,ಲಿಂಕ್ಡ್ ಇನ್ ಮುಂತಾದ ಎಲ್ಲಾ ಅಪ್ಲಿಕೇಶನ್ ಗಳು ದೊರೆಯುತ್ತವೆ.
ನಿಮ್ಮಲ್ಲಿ 3G ಸೇವೆ ಹೊಂದುವ ಮೊಬೈಲ್ ಇದ್ದರೆ, ಟಿವಿ ಅಂತರ್ಜಾಲಕ್ಕೆ ಹೊಂದುವ ಅಪ್ಲಿಕೇಶನ್ ಅಳವಡಿಸಿಕೊಂಡು ಮೊಬೈಲನ್ನೇ ರಿಮೋಟ್ ಮಾಡಿ ಚಾನೆಲ್ ಆಯ್ಕೆ ಮಾಡಬಹುದು. ಇಂತಹ ಸೌಲಭ್ಯವಿರುವ ಅಂತರ್ಜಾಲ ಟಿವಿಯನ್ನು ಮಾರುಕಟ್ಟೆಗೆ ತಂದ ಕೀರ್ತಿ ಐಫೊನ್ ನದು.
ಆದರೆ ಸಾಮಾನ್ಯ ವರ್ಗ ಸದ್ಯಕ್ಕೆ ಈ ನೆಟ್ @ ಟಿವಿ ಉಪಯೋಗಿಸುವುದು ಸ್ವಲ್ಲಪ ಕಷ್ಟ. ಏಕೆಂದರೆ ಇಂತಹ ಟಿವಿ ಸದ್ಯಕ್ಕೆ ದುಬಾರಿ. ಸದ್ಯಕ್ಕೆ ಈ ವಾಲ್ ಟಿವಿಯ ಬೆಲೆ ಮಾರುಕಟ್ಟೆಯಲ್ಲಿ ರು. 1.50 ಲಕ್ಷದಿಂದ 4.50 ಲಕ್ಷದವರೆಗೆ ಇದೆ. ಗಮನಿಸಬೇಕಾದ ಇನ್ನೊಂದು ಪ್ರಮುಖ ಅಂಶವೆಂದರೆ ಟಿವಿ ಸ್ಕ್ರೀನ್ ಹಾಗೂ ಸೌಲಭ್ಯಗಳು ಹೆಚ್ಚಾದಂತೆ ಬೆಲೆಯೂ ಹೆಚ್ಚಾಗುತ್ತದೆ.
ಟಿವಿ & ಕಂಪ್ಯೂಟರ್ ಟೂ ಇನ್ ವನ್ ಇದ್ದರೆ ಮೇಂಟೆನನ್ಸ್ ಕೂಡ ಸುಲಭ ತಾನೇ! ನೋಡಿ, ಆಲೋಚಿಸಿ ಕೊಂಡುಕೊಳ್ಳಿ


Click it and Unblock the Notifications








