Subscribe to Gizbot

ಆಸಸ್ ಟ್ರಾನ್ಸ್ ಫಾರ್ಮರ್ 2 ಟ್ಯಾಬ್ಲೆಟ್ ತಗೊಳ್ಳಿ

Posted By: Super

ಆಸಸ್ ಟ್ರಾನ್ಸ್ ಫಾರ್ಮರ್ 2 ಟ್ಯಾಬ್ಲೆಟ್ ತಗೊಳ್ಳಿ
ಆಸಸ್ ಟ್ರಾನ್ಸ್ ಫಾರ್ಮರ್ ಟ್ಯಾಬ್ಲೆಟ್ ಅಪ್ ಡೇಟ್ ಆಗುತ್ತಿದೆ. ಇದೀಗ ಕಂಪನಿಯು ಆಸಸ್ ಟ್ರಾನ್ಸ್ ಫಾರ್ಮರ್ 2 ಎಂಬ ನೂತನ ಟ್ಯಾಬ್ಲೆಟ್ ಕಂಪ್ಯೂಟರ್ ಪರಿಚಯಿಸಲು ನಿರ್ಧರಿಸಿದೆ. ಇತ್ತೀಚಿನ NVIDIA ಟೆಗ್ರಾ 3 ಪ್ರೊಸೆಸರ್ ಅಳವಡಿಸಿ ಬರುವ ನೂತನ ಟ್ಯಾಬ್ಲೆಟ್ ಸ್ಪೀಡ್ ಹೆಚ್ಚಿಸಿಕೊಳ್ಳಲಿದೆ.

ಪರಿಷ್ಕೃತ ಆವೃತ್ತಿಯಲ್ಲಿ ಇರುವ ಪ್ರಮುಖ ಫೀಚರ್ ಗಳು ಯಾವುದು? ಮುಖ್ಯವಾಗಿ ಗಮನ ಸೆಳೆಯುವುದು 10.1 ಇಂಚಿನ ಎಲ್ ಇಡಿ ಬ್ಯಾಕ್ ಲಿಟ್ ಸ್ಕ್ರೀನ್ ಇದೆ. ಚಿತ್ರಗಳನ್ನು ಆಯ್ಕೆ ಮಾಡಿಕೊಳ್ಳು ಸುಲಭವಾಗುವಂತೆ ಮಲ್ಟಿ ಟಚ್ ಇನ್ ಪುಟ್ ಕೂಡ ಇದೆ.

ಸವಿನೆನಪಿನ ಚಿತ್ರಗಳನ್ನು ದಾಖಲಿಸಿಡಲು 5 ಮೆಗಾ ಪಿಕ್ಸೆಲ್ ಕ್ಯಾಮರಾವಿದೆ. ಸ್ನೇಹಿತರು, ಬಂಧುಗಳೊಂದಿಗೆ ಮಾತನಾಡಲು 1.2 ಮೆಗಾ ಪಿಕ್ಸೆಲ್ ನ ವಿಡಿಯೋ ಕಾಲಿಂಗ್ ಸೌಲಭ್ಯವಿದೆ. ಈ ಟ್ಯಾಬ್ಲೆಟ್ 1 ಜಿಬಿ ಸಂಗ್ರಹ ಸಾಮರ್ಥ್ಯ ಹೊಂದಿದೆ. ಮೆಮೊರಿ ಕಾರ್ಡ್ ಹಾಕಿ ಸಂಗ್ರಹ ಸಾಮರ್ಥ್ಯವನ್ನು 32 ಜಿಬಿವರೆಗೆ ವಿಸ್ತರಿಸಬಹುದಾಗಿದೆ.

ಮಲ್ಟಿ ಟಾಸ್ಕಿಂಗ್, ಆಸಸ್ ಲಾಂಚರ್ ಇತ್ಯಾದಿ ವಿಶೇಷ ಅಪ್ಲಿಕೇಷನ್ ಗಳಿವೆ. ಪುಸ್ತಕ ಪ್ರಿಯರಾಗಿದ್ದರೆ ಓದಲು ಮೈಲೈಬ್ರೆರಿ ಇದೆ. ಫೈಲ್ ಮತ್ತು ಫೋಲ್ಡರನ್ನು ನಿರ್ವಹಿಸಲು ಫೈಲ್ ಮ್ಯಾನೆಜರ್ ಸೌಲಭ್ಯವಿದೆ. ಕಿಂಡಲ್, ಜಿನಿಯೊ ಮ್ಯಾಗಜಿನ್ ಮತ್ತು ಆಸಸ್ ಸಿಂಕ್ ಇತ್ಯಾದಿ ಅಪ್ಲಿಕೇಷನ್ ಗಳೂ ಇವೆ. ಇದರ ಬ್ಯಾಟರಿ ಬ್ಯಾಕಪ್ 16 ಗಂಟೆ! ಭಾರತದ ಮಾರುಕಟ್ಟೆಯಲ್ಲಿ ಇದರ ದರ ಸುಮಾರು 18,200 ರುಪಾಯಿ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot