ಸ್ಯಾಮ್ ಸಂಗ್ ನಿಂದ ಹೊಸ ಗೇಮಿಂಗ್ ಲ್ಯಾಪ್ ಟಾಪ್

By Super
|
ಸ್ಯಾಮ್ ಸಂಗ್ ನಿಂದ ಹೊಸ ಗೇಮಿಂಗ್ ಲ್ಯಾಪ್ ಟಾಪ್
ಸ್ಯಾಮ್ ಸಂಗ್ ಕಂಪೆನಿ ಜಗತ್ತಿನ ಅತ್ಯಂತ ಪ್ರಸಿದ್ಧ ಎಲೆಕ್ಟ್ರಾನಿಕ್ಸ್ ಉಪಕರಣ ಕಂಪೆನಿಗಳಲ್ಲೊಂದು. ಕೇವಲ ಮೊಬೈಲುಗಳಲ್ಲದೇ ಲ್ಯಾಪ್ ಟಾಪ್, ಟ್ಯಾಬ್ಲೆಟ್ ಗಳ ತಯಾರಿಕೆಯಲ್ಲಿಯೂ ಇದು ಎತ್ತಿದ ಕೈ. ಜಗತ್ತಿನ ಅಗ್ರಗಣ್ಯ ಕಂಪೆನಿ ನೋಕಿಯಾದ ಸದ್ಯದ ಪ್ರಬಲ ಪ್ರತಿಸ್ಪರ್ಧಿ ಇದೊಂದೇ.

ಇಂತಹ ಸ್ಯಾಮ್ ಸಂಗ್ ಕಂಪೆನಿ ಹೊಸ ಗೇಮಿಂಗ್ ಲ್ಯಾಪ್ ಟಾಪ್ ಒಂದನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ. ಇದರ ಹೆಸರು ಸ್ಯಾಮ್ ಸಂಗ್ 700G7A. ಸಾಮಾನ್ಯವಾಗಿ ಎಲ್ಲಾ ಲ್ಯಾಪ್ ಟಾಪ್ ಗಳೂ ಕಸ್ಟಮ್ ಗ್ರಾಫಿಕ್ಸ್ ಕಾರ್ಡ್, ಗ್ರಾಫಿಕ್ಸ್ ಗೇಮ್ ಸಪೋರ್ಟ್, AMD ಪ್ರೊಸೆಸರ್ ಹೊಂದಿರುತ್ತವೆ.

ಆದರೆ ಇದೀಗ ಸ್ಯಾಮ್ ಸಂಗ್ ಕಂಪೆನಿ ಹೊಸ ಗೇಮಿಂಗ್ ಲ್ಯಾಪ್ ಟಾಪ್ ಮಾರುಕಟ್ಟೆಗೆ ಬಿಡಲಿರುವುದು ಆಶ್ಚರ್ಯಕರವಾಗಿದೆ. ಏಕೆಂದರೆ ಸದ್ಯಕ್ಕೆ ಇದೊಂದು ಹೊಸ ಟ್ರೆಂಡ್. ಏನೇ ಇರಲಿ, ಈ ಕಂಪೆನಿಗೆ ಈ ಹೊಸ ಲ್ಯಾಪ್ ಟಾಪ್ ಬಿಡುಗಡೆ ಗೆಲುವನ್ನು ತಂದುಕೊಡುವ ಬಗ್ಗೆ ಸಾಕಷ್ಟು ಆತ್ಮವಿಶ್ವಾಸ ಇದ್ದೇ ಇದೆ.

ಇದರಲ್ಲಿ ಇಂಟಲ್ ಕೋರ್ i7- 2630QM/ 2.0 -2.5 GHz ಪ್ರೊಸೆಸರ್, ಡೈರೆಕ್ಟ್X 11 ಗೇಮಿಂಗ್ ಸ್ಪೆಷಲ್ ಕಂಪೋನೆಂಟ್ ಇದೆ. ಇದು AMD Radeon HD 6970M GPU ಸ್ಪೆಸಿಫಿಕೇಶನ್ ಹೊಂದಿದೆ. ಇದರಲ್ಲಿ 2 GB DDR ಮೆಮೊರಿ, 16 GB ಎಕ್ಸ್ ಟ್ರಾ ಮೆಮೊರಿ RAM, ಇವೆಲ್ಲ ಇದೆ.

ಈ ಗೇಮಿಂಗ್ ಲ್ಯಾಪ್ ಟಾಪ್ ನಲ್ಲಿ 17.3 ಇಂಚ್ ಫುಲ್ HD/ LED ಬ್ಯಾಕ್ ಲಿಟ್, 400 ನಿಟ್ ಬ್ರೈಟ್ ನೆಸ್, 1920 X 1080 ಡಿಸ್ ಪ್ಲೇ ಇದೆ. ಆಶ್ಚರ್ಯವೆಂದರೆ W, A, S ಮತ್ತು D ಕೀಗಳಿಗೆ ವಿಭಿನ್ನ ಕೆಂಪು ಬಣ್ಣಗಳ ಸಪೋರ್ಟ್ ಇದ್ದು ಗೇಮ್ ಗೆ ಅನುಕೂಲವಾಗಲಿದೆ.

ಪ್ರಿಕ್ವೆನ್ಸಿ ಬ್ರಾಂಡ್ಸ್ WLAN, ಬ್ಲೂ ಟೂಥ್ 3 ರ ಆವೃತ್ತಿ, USB ಪೋರ್ಟ್ 3.0 ಇದೆ. ಪ್ರಿಕ್ವೆನ್ಸಿ ಬ್ರಾಂಡ್ಸ್ WLAN, ಬ್ಲೂ ಟೂಥ್ 3 ರ ಆವೃತ್ತಿ, USB ಪೋರ್ಟ್ 3.0 ಇದೆ.

7 ಇನ್ ವನ್ ಕಾರ್ಡ್ ರೀಡರ್ ಹಾಗೂ ಆಧುನಿಕ ಎಲ್ಲಾ ಗೇಮಿಂಗ್ ಫಾರ್ಮೆಟ್ ಗಳಿವೆ. 7 ಇನ್ ವನ್ ಕಾರ್ಡ್ ರೀಡರ್ ಹಾಗೂ ಆಧುನಿಕ ಎಲ್ಲಾ ಗೇಮಿಂಗ್ ಫಾರ್ಮೆಟ್ ಗಳಿವೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X