ನಿರೀಕ್ಷಿಸಿ ಸೂಪರ್ ಲ್ಯಾಪ್ ಟಾಪ್- ಅಲ್ಟ್ರಾ ಬುಕ್ಸ್

By Super
|
ನಿರೀಕ್ಷಿಸಿ ಸೂಪರ್ ಲ್ಯಾಪ್ ಟಾಪ್- ಅಲ್ಟ್ರಾ ಬುಕ್ಸ್
ಕಂಪ್ಯೂಟರ್ ಅಂಗಣದಲ್ಲಿ ಹೊಸ ಬಗೆಯ ಲ್ಯಾಪ್ ಟಾಪ್ ಯುದ್ಧ ಆರಂಭವಾಗುತ್ತಿದೆಯಂತೆ. ವಿಶ್ವದ ಪ್ರಮುಖ ಲ್ಯಾಪ್ ಟಾಪ್ ಕಂಪನಿಗಳು ಇನ್ನು ಮಾರುಕಟ್ಟೆಗೆ ಪರಿಚಯಿಸಲಿರುವುದು ಸೂಪರ್ ಲ್ಯಾಪ್ ಟಾಪ್ ಗಳನ್ನು. ಇಂಟೆಲ್, ಆಸಸ್ ಮತ್ತು ಏಸರ್ ಕಂಪನಿಗಳು ಈಗಾಗಲೇ ಸೂಪರ್ ಲ್ಯಾಪ್ ಟಾಪ್ ಮಾರುಕಟ್ಟೆಗೆ ಪ್ರವೇಶಿಸುವುದನ್ನು ಖಚಿತಪಡಿಸಿವೆ.

ಅಲ್ಟ್ರಾಪೊರ್ಟೆಬಲ್ ಎಂಬ ಹಗುರ ಲ್ಯಾಪ್ ಟಾಪ್ ಗಳು ಮುಂದಿನ ಜಮಾನದ ಲ್ಯಾಪ್ ಟಾಪ್ ಗಳಾಗಿವೆ. ಕೇವಲ ತೂಕ ಕಡಿಮೆಮಾಡಿಕೊಳ್ಳುವುದು ಮಾತ್ರವಲ್ಲದೇ ಫೀಚರ್ ಗಳನ್ನು ಹೆಚ್ಚಿಸಿಕೊಳ್ಳಲಿವೆ. ಜನರು ಲ್ಯಾಪ್ ಟಾಪ್ ಗಳಿಂದ ಆಸಕ್ತಿ ಕಳೆದುಕೊಳ್ಳುತ್ತಿರುವುದರಿಂದ ಕಂಪನಿಗಳು ಸೂಪರ್ ಕಡೆಗೆ ಮುಖ ಮಾಡಿವೆ.

ಸೂಪರ್ ಲ್ಯಾಪ್ ಟಾಪಿನಿಂದ ಯಾವೆಲ್ಲ ಪ್ರಯೋಜನಗಳಿವೆ? ಪ್ರಮುಖವಾಗಿ ಭಾರ ಕಳೆದುಕೊಳ್ಳಲಿವೆ. ಹಗುರವಾಗಿರುವುದರಿಂದ ಹೆಚ್ಚು ತ್ರಾಸ ನೀಡದು.

ಆಸಸ್ ಹಗುರವಾದ ಯುಎಕ್ಸ್21 ಎಂಬ ಅಲ್ಟ್ರಾಬುಕ್ ಹೊರತರಲಿದೆ. ಇದು ಮುಂದಿನ ವರ್ಷದ ಮೊದಲ ತ್ರೈಮಾಸಿಕದಲ್ಲಿ ಮಾರುಕಟ್ಟೆಗೆ ಬರಲಿದೆ. ಇದರ ದರ ಭಾರತದಲ್ಲಿ ಸುಮಾರು 50 ಸಾವಿರ ರುಪಾಯಿ ಆಸುಪಾಸಿನಲ್ಲಿರಲಿದೆ. ಇದೇ ಸಮಯದಲ್ಲಿ ಏಸರ್ ಆಲ್ಟ್ರಾ ಬುಕ್ ಕೂಡ ಬಿಡುಗಡೆಯಾಗುವ ನಿರೀಕ್ಷೆಯಿದೆ.

ಅಲ್ಟ್ರಾ ಬುಕ್ಸ್ ಗೆ ತಂತ್ರಜ್ಞಾನದ ಕೊಡುಗೆಯನ್ನು ಇಂಟೆಲ್ ಒದಗಿಸಲಿದೆ. ಕಂಪನಿಯು ಅಲ್ಟ್ರಾ ಬುಕ್ಸ್ ಗಾಗಿ 30 ಕೋಟಿ ಡಾಲರ್ ಹೂಡಿಕೆ ಮಾಡಿದೆಯಂತೆ. ಮುಂದಿನ ವರ್ಷದ ಅಂತ್ಯಕ್ಕೆ ಲ್ಯಾಪ್ ಟಾಪ್ ವಹಿವಾಟಿನ ಶೇಕಡ 40ರಷ್ಟು ಪಾಲನ್ನು ಅಲ್ಟ್ರಾಬುಕ್ ಪಡೆದುಕೊಳ್ಳುವ ನಿರೀಕ್ಷೆಯನ್ನು ಕಂಪನಿ ವ್ಯಕ್ತಪಡಿಸಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X