ಲ್ಯಾಪ್ ಟಾಪ್ & ಮಾಹಿತಿ ಸಂರಕ್ಷಣೆ ಹೀಗೆ ಮಾಡಿ

Posted By: Staff

ಲ್ಯಾಪ್ ಟಾಪ್ & ಮಾಹಿತಿ ಸಂರಕ್ಷಣೆ ಹೀಗೆ ಮಾಡಿ
ಇವಿಷ್ಟು ಕಳುವಾದ ನಂತರ ಮಾಡಬೇಕಾಗಿರುವ ಕೆಲಸಗಳು. ಸಾಧ್ಯವಾದಷ್ಟೂ ಲ್ಯಾಪ್ ಟಾಪ್ ಎಂಬ ಮಾಹಿತಿ ಖಜಾನೆ ಕಳೆದುಕೊಳ್ಳಬೇಡಿ. ಕಳೆದು ಹೋದರೆ ತೊಂದರೆಯಾಗದಂತಿರಲು ಮೊದಲು ಕೈಗೊಳ್ಳಬೇಕಾದ ಕೆಲವು ಎಚ್ಚರಿಕೆಗಳು ಇವೆ, ಪಾಲಿಸಲು ಮರೆಯಬೇಡಿ.

1. ಪ್ರೇ ಇನ್ ಸ್ಟಾಲ್ ಮಾಡಿ
ನಿಮ್ಮ ಲ್ಯಾಪ್ ಟಾಪ್ ಕಳೆದು ಹೋಗಿರುವಾಗ ಈ "Prey" ಮೂಲಕ ನೀವು ನಿಮ್ಮ ಅಪ್ಲಿಕೇಶನ್ ಗಳನ್ನು ಆಕ್ಟಿವೇಟ್ ಮಾಡಬಹುದು. ಪ್ರೇ- ಪ್ರೇ ಸರ್ವರ್ ಗೆ, ಕಾಲ್ಸ್ ಹೋಮ್ ಮಾಡಿ ಇಂಟರ್ನೆಟ್ ಗೆ ಕನೆಕ್ಟ್ ಮಾಡಿ. ನಂತರ ಬರುವ ಪ್ರೇ ರಿಪೋರ್ಟ್ ನಲ್ಲಿ ಎಲ್ ಪಿ ಅಡ್ರೆಸ್, ನಕ್ಷೆಯ ಜೊತೆ ಇರುವ ಜಿಯೋಲೊಕೇಶನ್, ವೆಬ್ ಕ್ಯಾಮ್ ಸ್ಕ್ರೀನ್ ಷಾಟ್ ಇರುತ್ತವೆ. ಇದರ ಮೂಲಕ ಡಿವೈಸ್ ಲಾಕ್ ಮಾಡಿ ಬೇರೆಯವರಿಂದಾಗುವ ಆಕ್ಸಸ್ ತಡೆಯಬಹುದು.

2. ಸೂಕ್ಷ್ಮ ಮಾಹಿತಿಗಳನ್ನು ಗಣಕೀಕರಿಸಿ
ಕ್ರೆಡಿಕ್ ಕಾರ್ಡ್, ಫೈನಾನ್ಷಿಯಲ್ ಮತ್ತು ಮೆಡಿಕಲ್ ರಿಪೋರ್ಟ್ ಮುಂತಾದ ವೈಯಕ್ತಿಕ ಸೂಕ್ಷ್ಮ ದಾಖಲೆಗಳನ್ನು ನಿಮಗೊಬ್ಬರಿಗೇ ತಿಳಿಯುವಂತೆ ಕೋಡ್ ಗಳ ಮೂಲಕ ಸಂರಕ್ಷಿಸಿ. ಅಥವಾ ಗಣಕೀಕರಣಗೊಳಿಸುವ ಸಾಫ್ಟ್ ವೇರ್ ಗಳ ಮೂಲಕ ರಕ್ಷಿಸಿಟ್ಟುಕೊಳ್ಳಿ. ಟ್ರೂಕ್ರಿಪ್ಟ್ ಎಂಬ ಟೂಲ್ ನಿಮಗೆ ಈ ದಿಸೆಯಲ್ಲಿ ಸಾಕಷ್ಟು ಪ್ರಯೋಜನಕಾರಿ.

3. ಶೀಘ್ರವಾಗಿ ಗುರ್ತುಹಿಡಿಯುವಂತಿರಲಿ
ನಿಮ್ಮ ಡೆಸ್ಕ್ ಟಾಪ್ ಮೇಲೆ ನೀವು ಮಾಡಿರುವ ಫೈಲ್ ಸೇವಿಂಗ್ ಪ್ಯಾಟರ್ನ್ ನೋಡಿದವರು ಶೀಘ್ರವಾಗಿ ಗುರ್ತುಹಿಡಿಯುವಂತಿರಲಿ. ಅದು ಕಳೆದು ಹೋದ ಲ್ಯಾಪ್ ಟಾಪ್ ಬಗ್ಗೆ ನೀಡಬಹುದಾದ ಪ್ರಕಟಣೆ ಎಂದು ತಿಳಿಯುವಂತಿರಲಿ. (ಉದಾ: REWARD_IF_FOUND.TXT)

4. ರೆಗ್ಯುಲರ್ ಡಾಟಾ ಬ್ಯಾಕಪ್ ಮಾಡುತ್ತಿರಿ
ಲ್ಯಾಪ್ ಟಾಪ್ ನಲ್ಲಿರುವ ನಿಮ್ಮ ಎಲ್ಲಾ ಮಾಹಿತಿಗಳ ಬ್ಯಾಕಪ್ ಆಗಾಗ (ರೆಗ್ಯೂಲರ್ ಆಗಿ) ತಗೆದು ಸಂರಕ್ಷಿಸಿ ಇಟ್ಟುಕೊಳ್ಳಿ. ಲಭ್ಯವಿರುವ ಆನ್ ಲೈನ ಬ್ಯಾಕಪ್ " ಡ್ರಾಪ್ ಬ್ಯಾಕ್ " ನಂತಹ ಸರ್ವೀಸ್ ಬಳಸಿಕೊಳ್ಳಬಹುದು.

5. ನಿಮ್ಮ ವಿಳಾಸ ಸ್ಪಷ್ಟವಾಗಿರಲಿ
ನಿಮ್ಮ ಲ್ಯಾಪ್ ಟಾಪ್ ಮೇಲೆ ನಿಮ್ಮ ವಿಳಾಸ ಸ್ಪಷ್ಟವಾಗಿರಲಿ. ಏಕೆಂದರೆ ಲ್ಯಾಪ್ ಟಾಪ್ ಕೇವಲ ಕಳುವಾಗಲೇಬೇಕೆಂದೇನೂ ಇಲ್ಲ, ಕೆಲವೊಮ್ಮೆ ಮಿಸ್ ಪ್ಲೇಸ್ ಕೂಡ ಆಗಬಹುದು. ಅಂತಹ ಸಂದರ್ಭದಲ್ಲಿ, ಸಿಕ್ಕಿದವರಿಗೆ ನಿಮಗೆ ತಲುಪಿಸಲು ಸುಲಭಸಾಧ್ಯವಾಗುತ್ತದೆ.

ಹೀಗೆ ಲ್ಯಾಪ್ ಟಾಪ್ ನಂತಹ ಅಮೂಲ್ಯ ಮಾಹಿತಿ ಖಜಾನೆಯನ್ನು ರಕ್ಷಿಸಿಕೊಳ್ಳುವುದು ಮತ್ತು ಕಳೆದು ಹೋದಾಗ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಲ್ಯಾಪ್ ಟಾಪ್ ಹೊಂದಿರುವ ಪ್ರತಿಯೊಬ್ಬರಿಗೂ ತಿಳಿದಿರಲೇಬೇಕು. ಇಲ್ಲದಿದ್ದರೆ ಲ್ಯಾಪ್ ಟಾಪ್ ಜೊತೆಗೆ ಜೀವನವೇ ಕಳೆದುಹೋದೀತು, ಎಚ್ಚರ!

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot